AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿಗ್ರಾಮ ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಐತಿಹಾಸಿಕ ಜಯ; ಫಲಿಸದ ಕಾಂಗ್ರೆಸ್-ಟಿಎಂಸಿ ತಂತ್ರಗಾರಿಕೆ

ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಸಿ ರಾಣಿ ರಥ್ ಬೃಹತ್ ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದಾರೆ. ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಸಿ ರಾಣಿ ರಥ್ ಅವರು ಒಟ್ಟು 1,64,427 ಮತಗಳನ್ನು (ಶೇ. 75.94) ಪಡೆದು, ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರ ವಿರುದ್ಧ 1,22,753 ಮತಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದರು. ಹಾಸಿ ರಥ್ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ತಾಯಿಯಾಗಿದ್ದಾರೆ. ಚಂದ್ರನಾಥ್ ರಥ್ ಅವರನ್ನು ರಾಜ್ಯ ವಿಧಾನಸಭಾ ಚುನಾವಣೆಗಳ ಫಲಿತಾಂಶ ಬಂದ ಕೆಲವೇ ದಿನಗಳಲ್ಲಿ, ಮೇ ತಿಂಗಳಿನಲ್ಲಿ ಹತ್ಯೆ ಮಾಡಲಾಗಿತ್ತು.

ನಂದಿಗ್ರಾಮ ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಐತಿಹಾಸಿಕ ಜಯ; ಫಲಿಸದ ಕಾಂಗ್ರೆಸ್-ಟಿಎಂಸಿ ತಂತ್ರಗಾರಿಕೆ
ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆImage Credit source: PTI
ಸುಷ್ಮಾ ಚಕ್ರೆ
|

Updated on:Oct 09, 2026 | 6:26 PM

Share

ನಂದಿಗ್ರಾಮ, ಅಕ್ಟೋಬರ್ 9: ಪಶ್ಚಿಮ ಬಂಗಾಳದ ನಂದಿಗ್ರಾಮದ ವಿಧಾನಸಭಾ ಉಪಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಹಾಸಿ ರಾಣಿ ರಥ್ ಅವರು ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ವಿರುದ್ಧ 1,22,753 ಭಾರೀ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ. ಚುನಾವಣಾ ಆಯೋಗ ಹಂಚಿಕೊಂಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ವಿದ್ಯುನ್ಮಾನ ಮತಯಂತ್ರಗಳ (EVM) ಹಲವು ಸುತ್ತುಗಳ ಎಣಿಕೆಯ ನಂತರ ಈ ಫಲಿತಾಂಶ ಹೊರಬಿದ್ದಿದೆ. ಪಶ್ಚಿಮ ಬಂಗಾಳದ ರಾಜಕೀಯವಾಗಿ ಅತ್ಯಂತ ಪ್ರಮುಖವಾದ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಸಿ ರಾಣಿ ರಥ್ ಆರಂಭದಿಂದಲೇ ಭಾರಿ ಮುನ್ನಡೆ ಸಾಧಿಸಿ, ಅಂತಿಮವಾಗಿ 1,22,753 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. ಈ ಗೆಲುವನ್ನು ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

ರೇಜಿನಗರದಲ್ಲೂ ಬಿಜೆಪಿ ಜಯಭೇರಿ:

ಇನ್ನೊಂದೆಡೆ, ರೇಜಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಂಖರವ್ ಸರ್ಕಾರ್ ಅವರು 1,29,914 ಮತಗಳನ್ನು ಪಡೆದು, ಆಮ್ ಜನತಾ ಉನ್ನಯನ್ ಪಾರ್ಟಿಯ ಗುಲಾಂ ನಬಿ ಆಜಾದ್ (ರಾಬಿನ್) ಅವರ ವಿರುದ್ಧ 75,816 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಇದನ್ನೂ ಓದಿ: ನಂದಿಗ್ರಾಮ ಉಪಚುನಾವಣೆ ಕದನ: ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್‌ಗೆ ಅಕ್ಟೋಬರ್ 21ರವರೆಗೆ ಮಧ್ಯಂತರ ಜಾಮೀನು

ಉಪಚುನಾವಣೆಗೆ ಕಾರಣ:

ನಂದಿಗ್ರಾಮ ಕ್ಷೇತ್ರ: ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದ ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ ನಡೆಯಿತು.

ರೇಜಿನಗರ ಕ್ಷೇತ್ರ: 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಆಮ್ ಜನತಾ ಉನ್ನಯನ್ ಪಾರ್ಟಿ (AJUP) ಮುಖ್ಯಸ್ಥ ಹುಮಾಯೂನ್ ಕಬೀರ್ ಅವರು ರೇಜಿನಗರ ಮತ್ತು ನೌದಾ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದರು. ನಂತರ ಅವರು ನೌದಾ ಕ್ಷೇತ್ರವನ್ನು ಉಳಿಸಿಕೊಂಡು ರೇಜಿನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಇಲ್ಲಿ ಉಪಚುನಾವಣೆ ಎದುರಾಯಿತು.

ಇದನ್ನೂ ಓದಿ: ‘ಹೆದರಿ ತಲೆಬಾಗಲ್ಲ, ತಿರುಗಿಬೀಳುತ್ತೇವೆ’; ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಮಮತಾ ಬ್ಯಾನರ್ಜಿ

ಈ ವರ್ಷದ ಆರಂಭದಲ್ಲಿ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಈ ಉಪಚುನಾವಣೆ ಮೊದಲ ದೊಡ್ಡ ರಾಜಕೀಯ ಪರೀಕ್ಷೆಯಾಗಿತ್ತು.

ಗಮನ ಸೆಳೆದ ಹಾಸಿ ರಾಣಿ ರಥ್ ಸ್ಪರ್ಧೆ:

ಸುವೇಂದು ಅಧಿಕಾರಿ ಅವರ ನಿಕಟವರ್ತಿಯಾಗಿದ್ದ ಚಂದ್ರನಾಥ್ ರಥ್ ಅವರನ್ನು ಮೇ 6ರಂದು (ವಿಧಾನಸಭಾ ಫಲಿತಾಂಶ ಪ್ರಕಟವಾದ 2 ದಿನಗಳ ನಂತರ) ಗುಂಡಿಕ್ಕಿ ಕೊಲ್ಲಲಾಗಿತ್ತು. ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಕ್ಷೇತ್ರವನ್ನು ತೆರವುಗೊಳಿಸಿದಾಗ, ಅವರ ಬೆಂಬಲದೊಂದಿಗೆ ಬಿಜೆಪಿ ಚಂದ್ರನಾಥ್ ಅವರ ತಾಯಿ ಹಾಸಿ ರಾಣಿ ರಥ್ ಅವರನ್ನು ಕಣಕ್ಕಿಳಿಸಿತ್ತು.

ಕಾಂಗ್ರೆಸ್​-ಟಿಎಂಸಿ ಮೈತ್ರಿ:

ಈ ಉಪಚುನಾವಣೆಯು ವಿರೋಧ ಪಕ್ಷಗಳ ನಡುವಿನ ರಾಜಕೀಯ ಮರುಜೋಡಣೆಗೂ ಸಾಕ್ಷಿಯಾಯಿತು. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಬಣದಿಂದ ಕಣಕ್ಕಿಳಿದಿದ್ದ ಸಂಚಿತಾ ಪ್ರಧಾನ್ ಡೇ ಅವರು ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ನಂತರ ಅವರು ತಮ್ಮ ಸ್ಪರ್ಧೆಯಿಂದ ಹಿಂದೆ ಸರಿದರು. ನಂತರ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಮಿಲನ್ ಪ್ರಧಾನ್ ಅವರನ್ನು ಹಳೆಯ ಕೇಸೊಂದರಲ್ಲಿ ಪೊಲೀಸರು ಬಂಧಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:25 pm, Fri, 9 October 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!