ಲಂಚಕ್ಕೆ ಕೈಯೊಡ್ಡಿದ್ದ ತಹಶೀಲ್ದಾರ್ ನಾಪತ್ತೆ, 3 ದಿನವಾದ್ರೂ ಸಿಗಲಿಲ್ಲ ಸುಳಿವು

sadhu srinath

sadhu srinath |

Updated on: Nov 10, 2019 | 8:42 PM

ಹೈದ್ರಾಬಾದ್: ರೈತನ ಬಳಿ 8 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ಗೂಡೂರು ಮಹಿಳಾ ತಹಶೀಲ್ದಾರ್ ಶೇಕ್ ಹಸೀನಾ ಅವರ ಮತ್ತಷ್ಟು ಅಕ್ರಮಗಳು ಬೆಳಕಿಗೆ ಬಂದಿವೆ. ಕರ್ನೂಲು ಜಿಲ್ಲೆಯ ಹಲವೆಡೆ ಹಾಸ್ಟೆಲ್ ರೂಮ್​ಗಳನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿ ಅಕ್ರಮ ವ್ಯವಹಾರಗಳನ್ನು ನಡೆಸುತ್ತಿದ್ದಳು ಎಂದು ಎಸಿಬಿ ತನಿಖೆಯಲ್ಲಿ ತಿಳಿದು ಬಂದಿದೆ. ಹಾಸ್ಟೆಲ್​ಗಳ ರೂಮ್​ಗಳನ್ನು ಬಾಡಿಗೆಗೆ ತೆಗೆದುಕೊಂಡು ಪ್ರತೀ ತಿಂಗಳು ಬಾಡಿಗೆ ನೀಡುತ್ತಿದ್ದಳು. ಅಲ್ಲದೆ, ತಹಶೀಲ್ದಾರ್ ಶೇಕ್ ಹಸೀನಾ ಅಕ್ರಮ ವ್ಯವಹಾರಗಳಲ್ಲಿ ನೇರವಾಗಿ ಭಾಗಿಯಾಗುತ್ತಿರಲಿಲ್ಲ. ಅವ್ಯವಹಾರಗಳನ್ನು ತನ್ನ ಅಸಿಸ್ಟೆಂಟ್ ಮೆಹಬೂಬ ಪಾಷಾ […]

ಲಂಚಕ್ಕೆ ಕೈಯೊಡ್ಡಿದ್ದ ತಹಶೀಲ್ದಾರ್ ನಾಪತ್ತೆ, 3 ದಿನವಾದ್ರೂ ಸಿಗಲಿಲ್ಲ ಸುಳಿವು

ಹೈದ್ರಾಬಾದ್: ರೈತನ ಬಳಿ 8 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ಗೂಡೂರು ಮಹಿಳಾ ತಹಶೀಲ್ದಾರ್ ಶೇಕ್ ಹಸೀನಾ ಅವರ ಮತ್ತಷ್ಟು ಅಕ್ರಮಗಳು ಬೆಳಕಿಗೆ ಬಂದಿವೆ. ಕರ್ನೂಲು ಜಿಲ್ಲೆಯ ಹಲವೆಡೆ ಹಾಸ್ಟೆಲ್ ರೂಮ್​ಗಳನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿ ಅಕ್ರಮ ವ್ಯವಹಾರಗಳನ್ನು ನಡೆಸುತ್ತಿದ್ದಳು ಎಂದು ಎಸಿಬಿ ತನಿಖೆಯಲ್ಲಿ ತಿಳಿದು ಬಂದಿದೆ.

ಹಾಸ್ಟೆಲ್​ಗಳ ರೂಮ್​ಗಳನ್ನು ಬಾಡಿಗೆಗೆ ತೆಗೆದುಕೊಂಡು ಪ್ರತೀ ತಿಂಗಳು ಬಾಡಿಗೆ ನೀಡುತ್ತಿದ್ದಳು. ಅಲ್ಲದೆ, ತಹಶೀಲ್ದಾರ್ ಶೇಕ್ ಹಸೀನಾ ಅಕ್ರಮ ವ್ಯವಹಾರಗಳಲ್ಲಿ ನೇರವಾಗಿ ಭಾಗಿಯಾಗುತ್ತಿರಲಿಲ್ಲ. ಅವ್ಯವಹಾರಗಳನ್ನು ತನ್ನ ಅಸಿಸ್ಟೆಂಟ್ ಮೆಹಬೂಬ ಪಾಷಾ ಮೂಲಕ ಮಾಡಿಸುತ್ತಿದ್ದಳು ಎನ್ನಲಾಗಿದೆ.

ಜಮೀನು ಸಮಸ್ಯೆ ಪರಿಹರಿಸುವುದಾಗಿ ರೈತ ಸುರೇಶ್ ಎಂಬುವರ ಬಳಿ 8 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಳು. ನ.8ರಂದು ತಹಶೀಲ್ದಾರ್ ಅಸಿಸ್ಟೆಂಟ್ ಮೆಹಬೂಬು ಪಾಷಾ ಮೂಲಕ 4 ಲಕ್ಷ ರೂ. ಪಡೆಯಲು ಮಂದಾಗಿದ್ದರು. ಲಂಚ ಪಡೆಯುವ ವೇಳೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಮೆಹಬೂಬ್ ಪಾಷಾರನ್ನು ರೆಡ್​ಹ್ಯಾಂಡ್​ ಆಗಿ ಸೆರೆ ಹಿಡಿದಿದ್ದರು. ಅಂದಿನಿಂದ ತಹಶೀಲ್ದಾರ್ ಶೇಕ್ ಹಸೀನಾ ನಾಪತ್ತೆಯಾಗಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada