Big News: 2016ರ ಪ್ರಕರಣದಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿಗೆ 6 ತಿಂಗಳು ಜೈಲು ಶಿಕ್ಷೆ

ಅಂದಹಾಗೆ, ಜಿಗ್ನೇಶ್ ಮೇವಾನಿ ಪ್ರಸ್ತುತ ಅಸ್ಸಾಂ ನ್ಯಾಯಾಲಯದಿಂದ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.

Big News: 2016ರ ಪ್ರಕರಣದಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿಗೆ 6 ತಿಂಗಳು ಜೈಲು ಶಿಕ್ಷೆ
ಜಿಗ್ನೇಶ್ ಮೇವಾನಿ
Image Credit source: NDTV
TV9kannada Web Team

| Edited By: Sushma Chakre

Sep 17, 2022 | 10:17 AM

ಅಹಮದಾಬಾದ್: 2016ರ ಪ್ರಕರಣವೊಂದರಲ್ಲಿ ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಶಾಸಕ ಜಿಗ್ನೇಶ್ ಮೇವಾನಿ (Jignesh Mevani) ಮತ್ತು ಇತರ 18 ಮಂದಿಗೆ ಅಹಮದಾಬಾದ್ ಮೆಟ್ರೋ ಪೊಲೀಸ್ ಕೋರ್ಟ್ ಶುಕ್ರವಾರ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಗುಜರಾತ್ ವಿಶ್ವವಿದ್ಯಾನಿಲಯದ ಕಾನೂನು ಕಟ್ಟಡದ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಜಿಗ್ನೇಶ್ ಮೇವಾನಿ ಇತರ ದಲಿತ ಹಕ್ಕುಗಳ ಗುಂಪುಗಳೊಂದಿಗೆ ಸೇರಿ 2016ರಲ್ಲಿ ಪ್ರತಿಭಟನೆ ನಡೆಸಿದ್ದರು. ಆ ಕಟ್ಟಡಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಹೆಸರಿಡಬೇಕು ಎಂದು ಒತ್ತಾಯಿಸಿದ್ದರು.

ಆದರೆ, ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ಮೇಲ್ಮನವಿ ಸೆಷನ್ಸ್ ನ್ಯಾಯಾಲಯವು ಅಕ್ಟೋಬರ್ 17ರವರೆಗೆ ಶಿಕ್ಷೆಯನ್ನು ತಡೆಹಿಡಿದಿದೆ. ಹಾಗೇ, 18 ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ: Breaking News ನ್ಯಾಯಾಂಗ ನಿಂದನೆ ಪ್ರಕರಣ: ಯುಟ್ಯೂಬರ್ ಸವುಕ್ಕು ಶಂಕರ್​​ಗೆ 6 ತಿಂಗಳು ಜೈಲು ಶಿಕ್ಷೆ

ಅಂದಹಾಗೆ, ಜಿಗ್ನೇಶ್ ಮೇವಾನಿ ಪ್ರಸ್ತುತ ಅಸ್ಸಾಂ ನ್ಯಾಯಾಲಯದಿಂದ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಜಿಗ್ನೇಶ್ ಮೇವಾನಿ ಅವರ ಒಂದೆರಡು ಟ್ವೀಟ್‌ಗಳ ಆಧಾರದ ಮೇಲೆ ಗುಜರಾತ್‌ನ ಪಾಲನ್‌ಪುರ ಪಟ್ಟಣದಿಂದ ಅಸ್ಸಾಂ ಪೊಲೀಸ್ ತಂಡವು ಅವರನ್ನು ಬಂಧಿಸಿತ್ತು.

ಈ ವರ್ಷದ ಮೇನಲ್ಲಿ ಗುಜರಾತ್ ನ್ಯಾಯಾಲಯವು 2017ರ ಪ್ರಕರಣದಲ್ಲಿ ಅನುಮತಿಯಿಲ್ಲದೆ ರ್ಯಾಲಿಯನ್ನು ನಡೆಸಿದ್ದಕ್ಕಾಗಿ ಜಿಗ್ನೇಶ್ ಮೇವಾನಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ, ರೇಷ್ಮಾ ಪಟೇಲ್, ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಕೌಶಿಕ್ ಪರ್ಮಾರ್, ಕೌಶಿಕ್ ಪರ್ಮಾರ್, ಸುಬೋಧ್ ಪರ್ಮಾರ್ ಸೇರಿದಂತೆ 10 ಮಂದಿಗೆ 3 ತಿಂಗಳ ಜೈಲು ಶಿಕ್ಷೆ ಮತ್ತು 1000 ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಹೈದರಾಬಾದ್: ಬಾಲಕಿಗೆ ಮಾದಕವಸ್ತು ನೀಡಿ ಹೋಟೆಲ್ ಕೊಠಡಿಯಲ್ಲಿ ಸಾಮೂಹಿಕ ಅತ್ಯಾಚಾರ; ಇಬ್ಬರ ಬಂಧನ

ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಯ ಬಂಧನಕ್ಕೆ ಅಸ್ಸಾಂ ರಾಜ್ಯ ಕಾಂಗ್ರೆಸ್ ಘಟಕ ಪ್ರತಿಭಟನೆ ನಡೆಸಿತ್ತು. ಸ್ವತಂತ್ರ ಶಾಸಕರಾಗಿ ಚುನಾಯಿತರಾದ ಜಿಗ್ನೇಶ್ ಮೇವಾನಿ ಸೆಪ್ಟೆಂಬರ್ 2019ರಲ್ಲಿ ಕಾಂಗ್ರೆಸ್‌ಗೆ ತಮ್ಮ ಬೆಂಬಲವನ್ನು ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada