ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಲಾಗಿದೆ: ಮೋದಿ
ಕರ್ನಾಟಕದಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿ ಕಲ್ಪಿಸಿರುವ ಕಾಂಗ್ರೆಸ್ ಸರ್ಕಾರವನ್ನು ಪ್ರಧಾನಿ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. .ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಿದೆ ಎಂದು ಹೇಳಿದ್ದಾರೆ. ಎಸ್ಸಿ, ಎಸ್ಟಿ, ಒಬಿಸಿ ವರ್ಗದ ಜನರಿಗೆ ವಂಚನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಅಂಬೇಡ್ಕರ್ ಸಂವಿಧಾನಕ್ಕೆ ಅವಮಾನ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಲಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ.

ಹರ್ಯಾಣ, ಏಪ್ರಿಲ್ 14: ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಲಾಗಿದೆ ಎಂದು ಕಾಂಗ್ರೆಸ್(Congress) ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ(Narendra Modi) ಹರಿಹಾಯ್ದಿದ್ದಾರೆ. ಇಂದು ಹರ್ಯಾಣದ ಹಿಸಾರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇಕಡಾ4ರಷ್ಟು ಮೀಸಲಾತಿ ಕುರಿತು ಮಾತನಾಡಿ, ಕರ್ನಾಟಕದಲ್ಲಿ ಮುಸ್ಲಿಮರಿಗೆ ಒಬಿಸಿ ಮೀಸಲಾತಿ ಕಲ್ಪಿಸಿದೆ .ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಿದೆ ಎಂದು ಹೇಳಿದ್ದಾರೆ. ಎಸ್ಸಿ, ಎಸ್ಟಿ, ಒಬಿಸಿ ವರ್ಗದ ಜನರಿಗೆ ವಂಚನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಅಂಬೇಡ್ಕರ್ ಸಂವಿಧಾನಕ್ಕೆ ಅವಮಾನ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ವಕ್ಫ್ ತಿದ್ದುಪಡಿ ಮಸೂದೆಯನ್ನುಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ. ವಕ್ಫ್ ತಿದ್ದುಪಡಿ ಮಾಡಿ ಸಾಮಾಜಿಕ ನ್ಯಾಯ ಒದುಗಿಸುವ ಕೆಲಸ ಮಾಡಿದ್ದೇವೆ. ವಕ್ಫ್ ತಿದ್ದುಪಡಿ ಮಾಡಿ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗಿದೆ. ವಕ್ಫ್ ತಿದ್ದುಪಡಿ ಮಸೂದೆಯಿಂದ ಮುಸ್ಲಿಮರಿಗೆ ಅನುಕೂಲ ಆಗಲಿದೆ, ಕಾಂಗ್ರೆಸ್ ಅವಧಿಯಲ್ಲಿ ವಕ್ಫ್ ನಿಯಮಗಳನ್ನು ಬದಲಾಯಿಸಲಾಗಿತ್ತು.
ವೋಟ್ಬ್ಯಾಂಕ್ಗಾಗಿ ವಕ್ಫ್ ನಿಯಮಗಳನ್ನು ಬದಲಾಯಿಸಲಾಗಿತ್ತು, ವಕ್ಫ್ ಹೆಸರಲ್ಲಿ ಭೂಮಿಯನ್ನು ಕಬಳಿಕೆ ಮಾಡುತ್ತಿದ್ದರು, ಬಡವರ ಭೂಮಿಯನ್ನು ವಕ್ಫ್ ಭೂಮಾಫಿಯಾ ಲೂಟಿ ಮಾಡಿದೆ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಮತ್ತಷ್ಟು ಓದಿ: ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಈ ಹಿಂದೆ ವಕ್ಫ್ ಕಾನೂನು ರೂಪಿಸಿತ್ತು: ಮೋದಿ
ವೋಟ್ಬ್ಯಾಂಕ್ ರಾಜಕಾರಣ
2013 ರಲ್ಲಿ ಚುನಾವಣಾ ಲಾಭಕ್ಕಾಗಿ ಕಾಂಗ್ರೆಸ್ ವಕ್ಫ್ ಕಾನೂನನ್ನು ಬದಲಾಯಿಸಿದೆ, ತಿದ್ದುಪಡಿಯನ್ನು ಅದರ ಸಾಂವಿಧಾನಿಕ ಪರಿಣಾಮಗಳನ್ನು ಪರಿಗಣಿಸದೆ ತರಾತುರಿಯಲ್ಲಿ ಮಾಡಲಾಗಿದೆ ಎಂದು ಹೇಳಿದರು. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ, ಕಾಂಗ್ರೆಸ್ ವಕ್ಫ್ ಕಾನೂನನ್ನು ಬದಲಾಯಿಸಿತು ಮತ್ತು ಅದನ್ನು ಬಾಬಾ ಸಾಹೇಬ್ ರಚಿಸಿದ ಸಂವಿಧಾನಕ್ಕಿಂತ ಶ್ರೇಷ್ಠ ಎಂದು ಕರೆಯಿತು. ಇದು ಬಾಬಾ ಸಾಹೇಬ್‌ಗೆ ಮಾಡಿದ ದೊಡ್ಡ ಅವಮಾನ ಎಂದರು.
ಅವರು ಮುಸ್ಲಿಮರ ಪರವಾಗಿ ಹಾಗೆ ಮಾಡಿದ್ದಾರೆಂದು ಹೇಳುತ್ತಾರೆ. ಈ ಮತಬ್ಯಾಂಕ್ ಹಸಿದ ರಾಜಕಾರಣಿಗಳನ್ನು ನಾನು ಕೇಳಲು ಬಯಸುತ್ತೇನೆ ಅವರಿಗೆ ನಿಜವಾಗಿಯೂ ಮುಸ್ಲಿಮರ ಬಗ್ಗೆ ಸಹಾನುಭೂತಿ ಇದ್ದರೆ, ಕಾಂಗ್ರೆಸ್ ಮುಸ್ಲಿಮರನ್ನು ಪಕ್ಷದ ಅಧ್ಯಕ್ಷರನ್ನಾಗಿ ಏಕೆ ನೇಮಿಸುವುದಿಲ್ಲ ಎಂದು ಪ್ರಶ್ನಿಸಿದರು.
ಅವರು ತಮ್ಮ ಟಿಕೆಟ್‌ಗಳಲ್ಲಿ ಶೇಕಡಾ 50 ರಷ್ಟು ಮುಸ್ಲಿಮರಿಗೆ ಏಕೆ ನೀಡುವುದಿಲ್ಲ ಅವರು ಹಾಗೆ ಮಾಡಲು ಅವರಿಗೆ ಇಷ್ಟವಿಲ್ಲ, ಆದರೆ ದೇಶದ ಶೇಕಡಾ 50 ರಷ್ಟು ಹಕ್ಕುಗಳನ್ನು ಬಿಟ್ಟುಕೊಡಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ. ಇದನ್ನು ಅದರ ಉದ್ದೇಶಕ್ಕೆ ತಕ್ಕಂತೆ ಬಳಸಿದ್ದರೆ, ಇಂದು ನನ್ನ ಮುಸ್ಲಿಂ ಯುವಕರು ಸೈಕಲ್‌ಗಳ ಪಂಕ್ಚರ್‌ಗಳನ್ನು ಸರಿಪಡಿಸುವುದರಲ್ಲಿ ತಮ್ಮ ಜೀವನವನ್ನು ಕಳೆಯಬೇಕಾಗುತ್ತಿರಲಿಲ್ಲ.
ಇದರಿಂದ ಭೂ ಮಾಫಿಯಾಗಳಿಗೆ ಮಾತ್ರ ಲಾಭವಾಯಿತು, ಬಡವರು ಅಥವಾ ಪಾಶ್ಮಾಂಡ ಮುಸ್ಲಿಮರಿಗಲ್ಲ ಎಂದು ಅವರು ಹೇಳಿದರು. ವಕ್ಫ್ ಮಂಡಳಿಯ ಮೂಲ ಉದ್ದೇಶವನ್ನು ವಿವರಿಸಿದ ಪ್ರಧಾನಿ ಮೋದಿ, ಬಡವರು ಮತ್ತು ಅಂಚಿನಲ್ಲಿರುವ ಮುಸ್ಲಿಮರನ್ನು, ವಿಶೇಷವಾಗಿ ಮಹಿಳೆಯರನ್ನು ಉನ್ನತೀಕರಿಸುವುದು ಇದರ ಉದ್ದೇಶ ಎಂದು ಹೇಳಿದರು.
ವಕ್ಫ್ ಆಸ್ತಿಗಳ ದುರುಪಯೋಗವನ್ನು ಎತ್ತಿ ತೋರಿಸಿ ಸಾವಿರಾರು ಮುಸ್ಲಿಂ ಮಹಿಳೆಯರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಇದು ಕಾನೂನಿಗೆ ತಿದ್ದುಪಡಿ ತರಲು ಕಾರಣವಾಯಿತು ಎಂದರು.
ಒಕ್ಕಲಿಗರು, ಮುಸ್ಲಿಮರು, ಲಿಂಗಾಯತರು, ಹಿಂದುಳಿದ ತಳ ಸಮುದಾಯಗಳು ಸೇರಿದಂತೆ ಇತರೆ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ವಿವಿಧ ಜಾತಿಗಳ ಮೀಸಲಾತಿಯನ್ನು ಮರುವರ್ಗೀಕರಣ ಮಾಡಿ, ಈಗಿರುವ ಮೀಸಲು ಪ್ರಮಾಣವನ್ನು ಹೆಚ್ಚಿಸುವಂತೆ ಕೆ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗ ಸರ್ಕಾರಕ್ಕೆ ಇತ್ತೀಚೆಗಷ್ಟೇ ಶಿಫಾರಸು ಮಾಡಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:12 pm, Mon, 14 April 25








