Haryana Politics: ಹರಿಯಾಣ ರಾಜಕೀಯ ಬಿಕ್ಕಟ್ಟು; ಬಿಜೆಪಿ ಸರ್ಕಾರದ ವಿರುದ್ಧ ಮತ ಚಲಾಯಿಸಲು ಜೆಜೆಪಿ ನಿರ್ಧಾರ
ಹರಿಯಾಣದ ಬಿಜೆಪಿ ಸರ್ಕಾರ ಪತನವಾಗುವ ಭೀತಿ ಎದುರಾಗಿದ್ದು, ಹರಿಯಾಣ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಮೂವರು ಪಕ್ಷೇತರ ಶಾಸಕರು ವಾಪಾಸ್ ಪಡೆದ ಬಳಿಕ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬಹುಮತ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹರಿಯಾಣದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ನಿರ್ಧರಿಸಲಾಗಿದೆ.
ನವದೆಹಲಿ: ಹರಿಯಾಣ ಸರ್ಕಾರಕ್ಕೆ (Haryana Government) ಪತನವಾಗುವ ಭೀತಿ ಎದುರಾಗಿದೆ. 2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ (Haryana Assembly Election) ಬಿಜೆಪಿ 90 ಸ್ಥಾನಗಳಲ್ಲಿ ಒಟ್ಟು 40 ಸ್ಥಾನಗಳನ್ನು ಗೆದ್ದಿದೆ. ಸರ್ಕಾರ ರಚಿಸಲು ಯಾವುದೇ ಪಕ್ಷಕ್ಕೆ 45 ಶಾಸಕರ ಬೆಂಬಲ ಬೇಕು. ಆದರೆ, ಮೂವರು ಪಕ್ಷೇತರ ಶಾಸಕರು ತಮ್ಮ ಬೆಂಬಲವನ್ನು ಹಿಂತೆಗೆದುಕೊಳ್ಳುವುದರೊಂದಿಗೆ ನಯಾಬ್ ಸಿಂಗ್ ಸೈನಿ (Nayab Singh Saini) ನೇತೃತ್ವದ ಸರ್ಕಾರ ಅಸ್ಥಿರವಾಗಿದೆ. ಹೀಗಾಗಿ, ಹರಿಯಾಣ ಸರ್ಕಾರಕ್ಕೆ ಬಹುಮತ ಇಲ್ಲದಂತಾಗಿದೆ.
ಮೂವರು ಪಕ್ಷೇತರ ಶಾಸಕರು ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಹರಿಯಾಣದಲ್ಲಿ ಬಿಜೆಪಿ ಸರ್ಕಾರವು ತನ್ನ ಬಹುಮತವನ್ನು ಕಳೆದುಕೊಂಡ ಬೆನ್ನಲ್ಲೇ ಒಂದು ವೇಳೆ ಅವಿಶ್ವಾಸ ನಿರ್ಣಯ ನಡೆದರೆ ಜನನಾಯಕ್ ಜನತಾ ಪಕ್ಷದ (ಜೆಜೆಪಿ) ನಾಯಕ ದುಶ್ಯಂತ್ ಚೌತಾಲಾ ಬುಧವಾರ ನಯಾಬ್ ಸಿಂಗ್ ಸೈನಿ ನೇತೃತ್ವದ ಸರ್ಕಾರದ ವಿರುದ್ಧ ಪಕ್ಷವು ಮತ ಚಲಾಯಿಸುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಹರಿಯಾಣ ಸರ್ಕಾರಕ್ಕೆ ಕೈ ಕೊಟ್ಟು ಕಾಂಗ್ರೆಸ್‌ಗೆ ಬೆಂಬಲ ನೀಡಿದ ಮೂವರು ಸ್ವತಂತ್ರ ಶಾಸಕರು
ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದುಶ್ಯಂತ್ ಚೌತಾಲಾ, ‘ಬಿಜೆಪಿ ಸರ್ಕಾರವನ್ನು ಬೇಗ ಉರುಳಿಸಿದರೆ, ಸರ್ಕಾರದ ಪತನಕ್ಕೆ ಅನುಕೂಲವಾಗುವಂತೆ ಕಾಂಗ್ರೆಸ್‌ಗೆ ಹೊರಗಿನಿಂದ ಬೆಂಬಲ ನೀಡುತ್ತೇವೆ’ ಎಂದು ಹೇಳಿದ್ದಾರೆ.
ತಮ್ಮ ವಿಪ್‌ಗೆ ಅಧಿಕಾರ ಇರುವವರೆಗೆ ಹೊರಗಿನಿಂದ ಬೆಂಬಲ ನೀಡುತ್ತೇವೆ ಮತ್ತು ವಿಪ್ ಸೂಚನೆಗಳ ಪ್ರಕಾರ ತಮ್ಮ ಶಾಸಕರು ಮತ ಚಲಾಯಿಸುತ್ತಾರೆ ಎಂದು ಚೌತಾಲಾ ಸ್ಪಷ್ಟಪಡಿಸಿದ್ದಾರೆ. ಇಂದು ವಿಶ್ವಾಸಮತ ಯಾಚನೆ ನಡೆದರೆ, ಜೆಜೆಪಿ ಶಾಸಕರು ಸರ್ಕಾರ ಉರುಳಿಸಲು ಮತ ಚಲಾಯಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Haryana Political Crisis: ಹರಿಯಾಣದಲ್ಲಿ ರಾಷ್ಟ್ರಪತಿ ಆಳ್ವಿಕೆ? ಬಿಜೆಪಿ ಸರ್ಕಾರಕ್ಕೆ ಪತನದ ಭೀತಿ
ಈ ಹಿಂದೆ ಬಿಜೆಪಿ ಪರ ನಿಂತಿದ್ದ ಮೂವರು ಪಕ್ಷೇತರ ಅಭ್ಯರ್ಥಿಗಳು ಈಗ ತಮ್ಮ ಬೆಂಬಲವನ್ನು ಹಿಂಪಡೆದು ಕಾಂಗ್ರೆಸ್‌ಗೆ ವಿಸ್ತರಿಸಿದ್ದಾರೆ. ವರದಿಗಳ ಪ್ರಕಾರ, ದಾದ್ರಿಯಿಂದ ಶಾಸಕ ಸೋಂಬಿರ್ ಸಾಂಗ್ವಾನ್, ನಿಲೋಖೇರಿಯಿಂದ ಶಾಸಕ ಧರಂಪಾಲ್ ಗೊಂಡರ್ ಮತ್ತು ಪುಂಡ್ರಿಯಿಂದ ರಣಧೀರ್ ಗೋಲನ್ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ ಎಂದು ಮಾಜಿ ಸಿಎಂ ಹೂಡಾ ಮತ್ತು ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಉದಯ್ ಭಾನ್ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ