ಈ ನಗರದ ನಿವಾಸಿಗಳ ಮನೆ ಬಾಗಿಲಿಗೆ ಬರಲಿದೆ ದೇಶಿ- ವಿದೇಶಿ ಮದ್ಯ; ಷರತ್ತುಗಳು ಅನ್ವಯ

ಈ ನಗರದ ನಿವಾಸಿಗಳ ಮನೆ ಬಾಗಿಲಿಗೆ ಬರಲಿದೆ ದೇಶಿ- ವಿದೇಶಿ ಮದ್ಯ; ಷರತ್ತುಗಳು ಅನ್ವಯ
ಪ್ರಾತಿನಿಧಿಕ ಚಿತ್ರ

Liquor Home Delivery: ಹೊಸ ಅಬಕಾರಿ ನಿಯಮಗಳ ಪ್ರಕಾರ ಯಾವುದೇ ಹಾಸ್ಟೆಲ್, ಕಚೇರಿ ಮತ್ತು ಸಂಸ್ಥೆಗೆ ವಿತರಣೆಯನ್ನು ಮಾಡಲಾಗುವುದಿಲ್ಲ ಎಂದು ಹೇಳುತ್ತದೆ. ಮೊಬೈಲ್ ಅಪ್ಲಿಕೇಶನ್ ಅಥವಾ ಆನ್‌ಲೈನ್ ವೆಬ್ ಪೋರ್ಟಲ್ ಮೂಲಕ ಆದೇಶವನ್ನು ಸ್ವೀಕರಿಸಿದರೆ ಮಾತ್ರ ಮದ್ಯದ ಪರವಾನಗಿದಾರರು ಮನೆ ವಿಳಾಸದಲ್ಲಿ ಮಾತ್ರ ಆರ್ಡರ್ ಡೆಲಿವರಿ ಮಾಡುತ್ತಾರೆ.

Rashmi Kallakatta

| Edited By: Apurva Kumar Balegere

Jun 01, 2021 | 12:30 PM

ದೆಹಲಿ: ದೆಹಲಿ ಸರ್ಕಾರವು ಮಂಗಳವಾರ ರಾಷ್ಟ್ರೀಯ ರಾಜಧಾನಿಯಲ್ಲಿ ಭಾರತೀಯ ಮತ್ತು ವಿದೇಶಿ ಬ್ರಾಂಡ್‌ಗಳ ಮದ್ಯವನ್ನು ಮನೆಗೆ ತಲುಪಿಸಲು ಅವಕಾಶ ನೀಡಿದೆ. ಜನರು ಮೊಬೈಲ್ ಅಪ್ಲಿಕೇಶನ್ ಅಥವಾ ಆನ್‌ಲೈನ್ ವೆಬ್ ಪೋರ್ಟಲ್ ಮೂಲಕ ಮದ್ಯಕ್ಕೆ ಆರ್ಡರ್ ನೀಡಬೇಕಿದ್ದು, ನಿರ್ದಿಷ್ಟ ಷರತ್ತು ಅನ್ವಯವಾಗಲಿದೆ. ಸೋಮವಾರ ದೆಹಲಿ ಸರ್ಕಾರದ ಅಧಿಸೂಚನೆಯಲ್ಲಿ ದೆಹಲಿ ಅಬಕಾರಿ (ತಿದ್ದುಪಡಿ) ನಿಯಮಗಳು, 2021 ರಲ್ಲಿ ಕಾನೂನು ನಿಬಂಧನೆಯನ್ನು ಸೇರಿಸಲಾಗಿದೆ. ದೆಹಲಿ ಅಬಕಾರಿ ನೀತಿ, 2021 ರಲ್ಲಿ ಬದಲಾವಣೆಗಳಿಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಅನುಮೋದನೆ ಪಡೆದ ಒಂದು ವಾರದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಹೊಸ ನಿಯಮಗಳ ಪ್ರಕಾರ ಪ್ರತಿ ಮದ್ಯ ಚಿಲ್ಲರೆ ವ್ಯಾಪಾರಿಗಳಿಗೆ ಮನೆ ಮದ್ಯ ವಿತರಣೆಯನ್ನು ನಡೆಸಲು ಅನುಮತಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಮದ್ಯವನ್ನು ಮನೆಗೆ ತಲುಪಿಸಲು ನಿರ್ದಿಷ್ಟ ರೀತಿಯ ಪರವಾನಗಿ ಹೊಂದಿರುವವರಿಗೆ ಮಾತ್ರ ಅನುಮತಿಸಲಾಗುತ್ತದೆ. ದೆಹಲಿಯಲ್ಲಿ, ನಾವು ಈಗ ಎಲ್ -13 ಪರವಾನಗಿ ಹೊಂದಿರುವವರಿಗೆ ಮಾತ್ರ ಮದ್ಯವನ್ನು ಮನೆಗೆ ತಲುಪಿಸಲು ಅನುಮತಿ ನೀಡಿದ್ದೇವೆ “ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದು ಹೊಸ ಪರವಾನಗಿ ಕೆಟಗರಿ ಅಲ್ಲ, ಹಿಂದಿನ ಅಬಕಾರಿ ನಿಯಮಗಳಲ್ಲೂ ಎಲ್ -13 ಪರವಾನಗಿಗಳು ಅಸ್ತಿತ್ವದಲ್ಲಿದ್ದವು. ಆದರೆ ಷರತ್ತುಗಳಲ್ಲಿನ ಸಂಕೀರ್ಣತೆಗಳ ಕಾರಣದಿಂದಾಗಿ ಅಂತಹ ಯಾವುದೇ ಪರವಾನಗಿಯನ್ನು ಇಲ್ಲಿಯವರೆಗೆ ನೀಡಲಾಗಿಲ್ಲ. ಅದು ಮದ್ಯವನ್ನು ಫ್ಯಾಕ್ಸ್ ಅಥವಾ ಇಮೇಲ್‌ಗಳ ಮೂಲಕ ಮಾತ್ರ ಮನೆಗಳಿದ ತಲುಪಿಸಬಹುದು ಎಂದು ಹೇಳಿದೆ ಎಂದು ಹೆಸರು ಹೇಳಲು ಬಯಸದ ಹಿರಿಯ ಅಬಕಾರಿ ಅಧಿಕಾರಿಯೊಬ್ಬರು ಹೇಳಿದರು.

ಹೊಸ ಅಬಕಾರಿ ನಿಯಮಗಳ ಪ್ರಕಾರ ಯಾವುದೇ ಹಾಸ್ಟೆಲ್, ಕಚೇರಿ ಮತ್ತು ಸಂಸ್ಥೆಗೆ ವಿತರಣೆಯನ್ನು ಮಾಡಲಾಗುವುದಿಲ್ಲ ಎಂದು ಹೇಳುತ್ತದೆ. ಮೊಬೈಲ್ ಅಪ್ಲಿಕೇಶನ್ ಅಥವಾ ಆನ್‌ಲೈನ್ ವೆಬ್ ಪೋರ್ಟಲ್ ಮೂಲಕ ಆದೇಶವನ್ನು ಸ್ವೀಕರಿಸಿದರೆ ಮಾತ್ರ ಮದ್ಯದ ಪರವಾನಗಿದಾರರು ಮನೆ ವಿಳಾಸದಲ್ಲಿ ಮಾತ್ರ ಆರ್ಡರ್ ಡೆಲಿವರಿ ಮಾಡುತ್ತಾರೆ.

ಈ ಆದೇಶದ ಬಗ್ಗೆ ದೆಹಲಿ ಸರ್ಕಾರ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಅಂಗಡಿಗಳಲ್ಲಿ ಭಾರಿ ಜನಸಂದಣಿಯನ್ನು ಕಂಡ ಲಾಕ್‌ಡೌನ್‌ಗಳ ಹಿನ್ನೆಲೆಯಲ್ಲಿ ಮದ್ಯ ತಯಾರಕರು ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರವನ್ನು ಮನೆಗೆ ತಲುಪಿಸಲು ಅನುಮತಿ ನೀಡುವಂತೆ ಕೇಳಿದ ನಂತರ ಈ ಕ್ರಮವು ಕೈಗೊಳ್ಳಲಾಗಿದೆ.

ರಾಜಧಾನಿಯಲ್ಲಿ ಮದ್ಯವನ್ನು ಮನೆಗೆ ತಲುಪಿಸಲು ಸಾಧ್ಯವಾಗುವಂತೆ, ಕೆಲವೇ ಕೆಲವು ಮದ್ಯದಂಗಡಿಗಳು ತೆರೆದಿರುವುದರಿಂದ ಜನಸಂದಣಿಯನ್ನು ಕಡಿಮೆ ಮಾಡುವುದಕ್ಕಾಗಿ ಕಳೆದ ವರ್ಷ ದೆಹಲಿ ಸರ್ಕಾರವು ವೆಬ್ ಪೇಜ್ ಸ್ಥಾಪಿಸಲು ಕೆಲಸ ಮಾಡುತ್ತಿದೆ ಮತ್ತು ಮೊಬೈಲ್ ಫೋನ್ ಅಪ್ಲಿಕೇಶನ್ ರಚಿಸುವ ಉದ್ದೇಶಹೊಂದಿದೆ ಎಂದು ಕಳೆದ ವರ್ಷ ಅಧಿಕಾರಿಗಳು ಹೇಳಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಅಲೆಯ ನಂತರ ಲಾಕ್‌ಡೌನ್ ಕ್ರಮಗಳನ್ನು ಸಡಿಲಗೊಳಿಸುವುದರೊಂದಿಗೆ, ಜನರು ಮದ್ಯದಂಗಡಿಗಳನ್ನು ತೆರೆಯಲು ಆರಂಭಿಸಿದ್ದರ. ದೆಹಲಿಯಲ್ಲಿ ಕೊರೊನವೈರಸ್ ಸಾಂಕ್ರಾಮಿಕ ರೋಗದ ಮೂರು ಅಲೆಗಳಲ್ಲಿ ಇದೇ ರೀತಿಯ ಪ್ರವೃತ್ತಿ ಮುಂದುವರೆಯಿತು.

ದೈಹಿಕ ಅಂತರ ಮಾನದಂಡಗಳನ್ನು ಉಲ್ಲಂಘಿಸದಂತೆ ಆನ್‌ಲೈನ್‌ನಲ್ಲಿ ಅಥವಾ ಹೋಮ್ ಡೆಲಿವರಿ ಕಾರ್ಯವಿಧಾನದ ಮೂಲಕ ರಾಜ್ಯಗಳು ಪರೋಕ್ಷವಾಗಿ ಮದ್ಯ ಮಾರಾಟವನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಹೇಳಿತ್ತು.

ಇಲ್ಲಿಯವರೆಗೆ, ಪಂಜಾಬ್, ಛತ್ತೀಸಗಢ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹೋಮ್ ಡೆಲಿವರಿ ಮದ್ಯ ವಿತರಣೆಗೆ ಅನುವು ಮಾಡಿಕೊಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.

ಈ ವರ್ಷ ಕೊವಿಡ್ -19 ಸೋಂಕುಗಳ ತೀವ್ರ ಅಲೆಯನ್ನು ಎದುರಿಸಿದ ನಂತರ ರಾಜ್ಯ ಸರ್ಕಾರವು ಹೋಮ್ ಡೆಲಿವರಿಗೆ ಅನುಮತಿ ನೀಡಿದ ಮತ್ತೊಂದು ರಾಜ್ಯ ಮಹಾರಾಷ್ಟ್ರ. ಕೊರೊನಾವೈರಸ್ ರೋಗ ಹರಡುವುದನ್ನು ತಡೆಯಲು ರಾಜ್ಯವು ಕಠಿಣ ನಿರ್ಬಂಧಗಳನ್ನು ವಿಧಿಸಿದೆ ಮತ್ತು ಮುಂಬಯಿಯಂತಹ ನಗರಗಳಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ.

ಇದನ್ನೂ ಓದಿ: ಗೌತಮ್ ಗಂಭೀರ್​ಗೆ ಕ್ಲೀನ್ ಚಿಟ್ ನೀಡಿದಕ್ಕೆ ಕಾನೂನು ಆಧಾರವಿಲ್ಲ: ಔಷಧ ನಿಯಂತ್ರಕವನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್

Follow us on

Related Stories

Most Read Stories

Click on your DTH Provider to Add TV9 Kannada