‘ನಾನು ಅಲ್ಲಿಗೆ ಭೇಟಿ ನೀಡಿದಾಗ ಭಯಗೊಂಡಿದ್ದೆ’: ಜಮ್ಮು ಕಾಶ್ಮೀರ ಭೇಟಿಯನ್ನು ನೆನಪಿಸಿಕೊಂಡ ಕೇಂದ್ರ ಮಾಜಿ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ

2012 ರಲ್ಲಿ ಪಿ ಚಿದಂಬರಂ ನಂತರ ಶಿಂಧೆ ಕೇಂದ್ರ ಗೃಹ ಸಚಿವರಾದರು. ಅವರ ಭೇಟಿಯ ಸಮಯದಲ್ಲಿ, ಕಾಂಗ್ರೆಸ್ ನಾಯಕ ಶ್ರೀನಗರದ ಲಾಲ್ ಚೌಕ್‌ನಲ್ಲಿ ಶಾಪಿಂಗ್ ಮಾಡಿದರು. ಅವರು ತಮ್ಮ ಕುಟುಂಬಕ್ಕಾಗಿ ಶಾಪಿಂಗ್ ಮಾಡಲು ಜಮ್ಮು ಮತ್ತು ಕಾಶ್ಮೀರದ ರಾಜಧಾನಿಯಲ್ಲಿರುವ ಕಾಶ್ಮೀರ ಆರ್ಟ್ಸ್ ಶೋರೂಮ್‌ಗೂ ಹೋಗಿದ್ದರು.ಆಗ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಕೇಂದ್ರ ಸಚಿವರ ಜೊತೆಗಿದ್ದರು.

‘ನಾನು ಅಲ್ಲಿಗೆ ಭೇಟಿ ನೀಡಿದಾಗ ಭಯಗೊಂಡಿದ್ದೆ’: ಜಮ್ಮು ಕಾಶ್ಮೀರ ಭೇಟಿಯನ್ನು ನೆನಪಿಸಿಕೊಂಡ ಕೇಂದ್ರ ಮಾಜಿ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ
ಸುಶೀಲ್ ಕುಮಾರ್ ಶಿಂಧೆ
Follow us
|

Updated on: Sep 10, 2024 | 7:05 PM

ದೆಹಲಿ ಸೆಪ್ಟೆಂಬರ್ 10: ಕೇಂದ್ರದ ಮಾಜಿ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ (Sushilkumar Shinde) ಅವರು ಮಂಗಳವಾರ ತಾವು ಸಚಿವರಾಗಿದ್ದ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಲಾಲ್ ಚೌಕ್‌ಗೆ ಭೇಟಿ ನೀಡಿದಾಗ ಭಯಗೊಂಡಿದ್ದೆ ಎಂದು ಹೇಳಿದ್ದಾರೆ. ‘Five Decades in Politics (ರಾಜಕೀಯದಲ್ಲಿ ಐದು ದಶಕಗಳು)’ ಎಂಬ ತಮ್ಮ ಆತ್ಮಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಶಿಂಧೆ ಅವರು 2012ರಲ್ಲಿ ಕಣಿವೆಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು.

“ಗೃಹ ಸಚಿವರಾಗುವ ಮೊದಲು, ನಾನು ಶಿಕ್ಷಣ ತಜ್ಞ ವಿಜಯ್ ಧಾರ್ ಅವರನ್ನು ಭೇಟಿ ಮಾಡಿದ್ದೆ. ನಾನು ಅವರ ಬಳಿ ಸಲಹೆ ಕೇಳುತ್ತಿದ್ದೆ. ಅವರು ನನಗೆ ಅಲ್ಲಿಲ್ಲಿ ಸುತ್ತುವ ಬದಲು ಲಾಲ್ ಚೌಕ್​​ಗೆ (ಶ್ರೀನಗರದಲ್ಲಿ) ಭೇಟಿ ನೀಡಿ, ಜನರನ್ನು ಭೇಟಿ ಮಾಡಿ ಮತ್ತು ದಾಲ್ ಸರೋವರ ನೋಡಿ ಬನ್ನಿ ಎಂದರು.

ಶಿಂಧೆ ಹೇಳಿದ್ದೇನು?

“ಆ ಸಲಹೆಯು ನನಗೆ ಪ್ರಚಾರವನ್ನು ನೀಡಿತು. ಯಾವುದೇ ಭಯವಿಲ್ಲದೆ ಅಲ್ಲಿಗೆ ಹೋಗುವ ಗೃಹ ಮಂತ್ರಿ ಇಲ್ಲಿದ್ದಾರೆ ಎಂದು ಜನರು ಭಾವಿಸಿದ್ದಾರೆ, ಲೇಖಿನ್ ಮೇರಿ ಫಟ್  ತೀಥಿ ವೋ ಕಿಸ್ಕೋ ಬತಾವೂಂ? (ಆದರೆ ನಾನು ಭಯಗೊಂಡಿದ್ದೇನೆ ಎಂದು ನಾನು ಯಾರಿಗೆ ಹೇಳಲಿ?) ನಾನು ಇದನ್ನು ನಿಮಗೆ ನಗಿಸಲು ಹೇಳಿದ್ದೇನೆ, ಆದರೆ ಒಬ್ಬ ಮಾಜಿ ಪೊಲೀಸ್ ಈ ರೀತಿ ಮಾತನಾಡಲು ಸಾಧ್ಯವಿಲ್ಲ, ”ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

2012 ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತದ ಗೃಹ ಸಚಿವರಾಗಿ ಶಿಂಧೆ ಅವರನ್ನು ನೇಮಿಸಿದರು.

2012ರಲ್ಲಿ ಲಾಲ್ ಚೌಕ್‌ಗೆ ಭೇಟಿ ನೀಡಿದ್ದರು ಶಿಂಧೆ

2012 ರಲ್ಲಿ ಪಿ ಚಿದಂಬರಂ ನಂತರ ಶಿಂಧೆ ಕೇಂದ್ರ ಗೃಹ ಸಚಿವರಾದರು. ಅವರ ಭೇಟಿಯ ಸಮಯದಲ್ಲಿ, ಕಾಂಗ್ರೆಸ್ ನಾಯಕ ಶ್ರೀನಗರದ ಲಾಲ್ ಚೌಕ್‌ನಲ್ಲಿ ಶಾಪಿಂಗ್ ಮಾಡಿದರು. ಅವರು ತಮ್ಮ ಕುಟುಂಬಕ್ಕಾಗಿ ಶಾಪಿಂಗ್ ಮಾಡಲು ಜಮ್ಮು ಮತ್ತು ಕಾಶ್ಮೀರದ ರಾಜಧಾನಿಯಲ್ಲಿರುವ ಕಾಶ್ಮೀರ ಆರ್ಟ್ಸ್ ಶೋರೂಮ್‌ಗೂ ಹೋಗಿದ್ದರು.ಆಗ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಕೇಂದ್ರ ಸಚಿವರ ಜೊತೆಗಿದ್ದರು.

ಶಿಂಧೆ ಶ್ರೀನಗರದ ಗಡಿಯಾರ ಗೋಪುರಕ್ಕೂ ಭೇಟಿ ನೀಡಿದ್ದರು. ‘ಘಂಟಾ ಘರ್’ ಎಂದೂ ಕರೆಯಲ್ಪಡುವ ಗಡಿಯಾರ ಗೋಪುರವನ್ನು ಮಾಜಿ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾ ಅವರ ಕೋರಿಕೆಯ ಮೇರೆಗೆ 1978 ರಲ್ಲಿ ನಿರ್ಮಿಸಲಾಯಿತು. 2008 ಮತ್ತು 2010 ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಾಗ, ಗೋಪುರದ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಿದ ಸಂದರ್ಭಗಳಿವೆ.

ಗೃಹ ಸಚಿವರಾಗಿದ್ದ ಶಿಂಧೆ ಅವರ ಅಧಿಕಾರಾವಧಿಯಲ್ಲಿ 26/11 ಮುಂಬೈ ದಾಳಿಕೋರ ಅಜ್ಮಲ್ ಕಸಬ್ ಮತ್ತು ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರು ಮತ್ತು 2012 ರ ದೆಹಲಿ ಗ್ಯಾಂಗ್ರೇಪ್ ಪ್ರಕರಣದ ವಿಚಾರಣೆಗಳು ನಡೆದು ಅಪರಾಧಿಗಳನ್ನು ಗಲ್ಲಿಗೇರಿಸಲಾಗಿತ್ತು.

ಶಿಂಧೆ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ

ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ ಅವರು ಎಕ್ಸ್ ಪೋಸ್ಟ್‌ನಲ್ಲಿ, ಯುಪಿಎ ಯುಗದ ಗೃಹ ಸಚಿವ ಸುಶೀಲ್ ಶಿಂಧೆ ಅವರು ಜಮ್ಮು ಕಾಶ್ಮೀರಕ್ಕೆ ಹೋಗಲು ಹೆದರುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಅವರು ಕಾಶ್ಮೀರಕ್ಕೆ ಹೋಗಿ ದಾಲ್ ಸರೋವರದಲ್ಲಿ ಫೋಟೊ ತೆಗೆಸಿಕೊಳ್ಳುವಂತೆ ಹೇಳಿ,ಯುಪಿಎ ಅದನ್ನು ದೊಡ್ಡದಾಗಿ ಬಿಂಬಿಸಿತು.. ಆದರೆ ನನಗೆ ಭಯವಾಯಿತು ಎಂದಿದ್ದಾರೆ. ಇಂದು ರಾಹುಲ್ ಗಾಂಧಿ ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ಮತ್ತು ಸ್ನೋ ಫೈಟ್ ನ್ನು ಆರಾಮವಾಗಿ ನೋಡಿದ್ದಾರೆ! ಆದರೆ ಎನ್ ಸಿ ಮತ್ತು ಕಾಂಗ್ರೆಸ್ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯ ದಿನಗಳಿಗೆ ಹಿಂತಿರುಗಿಸಲು ಬಯಸುತ್ತವೆ ಎಂದು ಬರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್