ಮಣಿಪುರ ಮತ್ತೆ ಉದ್ವಿಗ್ನ: ಇಂಟರ್ನೆಟ್ ಸ್ಥಗಿತ, ಕರ್ಫ್ಯೂ ವಿಧಿಸಿದ ಸರ್ಕಾರ
ಹಿಂಸಾಚಾರ ಭುಗಿಲೆದ್ದಿದ್ದ ರಾಜ್ಯದ ಕೆಲವು ಪ್ರದೇಶಗಳಲ್ಲಿ ಅತ್ಯಾಧುನಿಕ ಡ್ರೋನ್ ಮತ್ತು ರಾಕೆಟ್ ದಾಳಿಯ ನಂತರ ಪ್ರತಿಭಟನೆ ಭುಗಿಲೆದ್ದಿತು. ಮಣಿಪುರದಲ್ಲಿ ಡ್ರೋನ್ ಮತ್ತು ರಾಕೆಟ್ ದಾಳಿ ಸೇರಿದಂತೆ ನಡೆದ ಹಿಂಸಾಚಾರದಲ್ಲಿ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದು, 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇಂಫಾಲ್ ಸೆಪ್ಟೆಂಬರ್ 10: ಮಣಿಪುರದ ಪೊಲೀಸ್ ಮುಖ್ಯಸ್ಥರನ್ನು ಪದಚ್ಯುತಗೊಳಿಸಬೇಕು ಎಂಬ ಬೇಡಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತಮ್ಮ ಪ್ರತಿಭಟನಾ ಮೆರವಣಿಗೆಯ ನಡುವೆ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದರಿಂದ ಮಣಿಪುರ (Manipur) ಸರ್ಕಾರ ಮಂಗಳವಾರ ಐದು ದಿನಗಳ ಕಾಲ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದೆ. ಸರ್ಕಾರವು ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಮತ್ತು ತೌಬಲ್‌ನಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದೆ.
ಹಿಂಸಾಚಾರ ಭುಗಿಲೆದ್ದಿದ್ದ ರಾಜ್ಯದ ಕೆಲವು ಪ್ರದೇಶಗಳಲ್ಲಿ ಅತ್ಯಾಧುನಿಕ ಡ್ರೋನ್ ಮತ್ತು ರಾಕೆಟ್ ದಾಳಿಯ ನಂತರ ಪ್ರತಿಭಟನೆ ಭುಗಿಲೆದ್ದಿತು. ಮಣಿಪುರದಲ್ಲಿ ಡ್ರೋನ್ ಮತ್ತು ರಾಕೆಟ್ ದಾಳಿ ಸೇರಿದಂತೆ ನಡೆದ ಹಿಂಸಾಚಾರದಲ್ಲಿ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದು, 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮಣಿಪುರದಲ್ಲಿನ ಬೆಳವಣಿಗೆಗಳ ಅಪ್ಡೇಟ್ಸ್
- ದ್ವೇಷದ ಚಿತ್ರಗಳು, ಭಾಷಣ ಮತ್ತು ವಿಡಿಯೋಗಳನ್ನು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ತಡೆಯಲು ಗೃಹ ಇಲಾಖೆಯು ಇಂಟರ್ನೆಟ್ ಅನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಸೆಪ್ಟೆಂಬರ್ 15 ರಂದು ನಿಷೇಧವನ್ನು ತೆಗೆದುಹಾಕುವ ಸಾಧ್ಯತೆಯಿದೆ.
- ಸೆಪ್ಟೆಂಬರ್ 10ರ ಮಧ್ಯಾಹ್ನ 3 ರಿಂದ ಸೆಪ್ಟೆಂಬರ್ 15 ಸಂಜೆ 3 ರವರೆಗೆ ಜಾರಿಗೆ ಬರುವಂತೆ ಐದು ದಿನಗಳ ಕಾಲ ಮಣಿಪುರ ರಾಜ್ಯದ ಪ್ರಾದೇಶಿಕ ವ್ಯಾಪ್ತಿಯಲ್ಲಿ ಲೀಸ್ ಲೈನ್‌ಗಳು, ವಿಎಸ್‌ಎಟಿಗಳು, ಬ್ರಾಡ್‌ಬ್ಯಾಂಡ್‌ಗಳು ಮತ್ತು ವಿಪಿಎನ್ ಸೇವೆಗಳನ್ನು ಒಳಗೊಂಡಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
- ಇಂದು ಬೆಳಗ್ಗೆ ಪ್ರತಿಭಟನಾಕಾರರು ರಾಜಭವನದ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ ವಿದ್ಯಾರ್ಥಿಗಳು ಮತ್ತು ಮಹಿಳಾ ಪ್ರತಿಭಟನಾಕಾರರು ಅವರೊಂದಿಗೆ ಘರ್ಷಣೆ ನಡೆಸಿದ್ದರಿಂದ ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು. ಅವರು ಡಿಜಿಪಿ ಮತ್ತು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರರನ್ನು ವಜಾಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
- ಸೋಮವಾರದಿಂದ ಖ್ವೈರಾಂಬಂಡ್ ಮಹಿಳಾ ಮಾರುಕಟ್ಟೆಯಲ್ಲಿ ಮೊಕ್ಕಾಂ ಹೂಡಿರುವ ನೂರಾರು ವಿದ್ಯಾರ್ಥಿಗಳು ಬಿಟಿ ರಸ್ತೆಯ ಮೂಲಕ ರಾಜಭವನದತ್ತ ಮೆರವಣಿಗೆ ನಡೆಸಲು ಯತ್ನಿಸಿದರಾದರೂ ಕಾಂಗ್ರೆಸ್ ಭವನದ ಬಳಿ ಭದ್ರತಾ ಪಡೆಗಳು ತಡೆದರು.
- ಆರೋಗ್ಯ, ಇಂಜಿನಿಯರಿಂಗ್ ವಿಭಾಗ, ಮುನ್ಸಿಪಲ್ ಸಂಸ್ಥೆಗಳು, ವಿದ್ಯುತ್ (MSPCL/MSPDCL), ಪೆಟ್ರೋಲ್ ಪಂಪ್‌ಗಳು, ನ್ಯಾಯಾಲಯಗಳ ಕಾರ್ಯನಿರ್ವಹಣೆ, ವಿಮಾನ ಪ್ರಯಾಣಿಕರು ಮತ್ತು ಮಾಧ್ಯಮಗಳ ಓಡಾಟ, ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವವರ ಮುಕ್ತ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ.
- ಏತನ್ಮಧ್ಯೆ, ಮಣಿಪುರದಲ್ಲಿ ಇತ್ತೀಚಿನ ಡ್ರೋನ್ ಮತ್ತು ಹೈಟೆಕ್ ಕ್ಷಿಪಣಿ ದಾಳಿಯ ನಂತರ ಅತ್ಯಾಧುನಿಕ ರಾಕೆಟ್‌ಗಳ ಬಾಲ ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾವುದೇ ಡ್ರೋನ್‌ಗಳು ಅಥವಾ ರಾಕೆಟ್‌ಗಳನ್ನು ಬಳಸಲಾಗಿಲ್ಲ ಎಂಬ ಅಸ್ಸಾಂ ರೈಫಲ್ಸ್‌ನ ನಿವೃತ್ತ ಡಿಜಿ ಲೆಫ್ಟಿನೆಂಟ್ ಜನರಲ್ ಪಿ ಸಿ ನಾಯರ್ ಅವರ ಹೇಳಿಕೆಗಳನ್ನು ಅವರು ತಳ್ಳಿಹಾಕಿದರು. ನಿವೃತ್ತ ಅಧಿಕಾರಿಯು ಮಣಿಪುರ ಪೊಲೀಸರನ್ನು “ಮೈತಿ ಪೋಲೀಸ್” ಎಂದು ಹೆಸರಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಐಜಿಪಿ (ಆಡಳಿತ) ಕೆ ಜಯಂತ ಸಿಂಗ್, ಈ ಹೇಳಿಕೆ “ಅಪಕ್ವ” ಎಂದು ಹೇಳಿದರು.
- “ಈ ಹೇಳಿಕೆಯು ಅಪಕ್ವವಾಗಿದೆ ಮತ್ತು ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಮತ್ತು ಅಸ್ಸಾಂ ರೈಫಲ್ಸ್ ಅಲ್ಲ ಎಂದು ತೋರುತ್ತದೆ. ನಾವು ಅದನ್ನು ಬಲವಾಗಿ ತಳ್ಳಿಹಾಕುತ್ತೇವೆ. ಡ್ರೋನ್ ಮತ್ತು ಹೈಟೆಕ್ ಕ್ಷಿಪಣಿ ದಾಳಿಯ ಪುರಾವೆಗಳಿವೆ. ಡ್ರೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅತ್ಯಾಧುನಿಕ ರಾಕೆಟ್‌ಗಳನ್ನು ಹಾರಿಸಲಾಗಿದೆ, ಅಂತಹ ಪುರಾವೆಗಳ ಹೊರತಾಗಿಯೂ, ಒಬ್ಬ ಪ್ರತಿಷ್ಠಿತ ಕಮಾಂಡರ್ ಅಂತಹ ಹೇಳಿಕೆಗಳನ್ನು ನೀಡುವುದು ತುಂಬಾ ದುರದೃಷ್ಟಕರ.
- ಐಜಿಪಿ (ಕಾರ್ಯಾಚರಣೆ) ಐಕೆ ಮುಯಿವಾಹ್ ಅವರು ಯಾವುದೇ ಮೈತಿ ಪೊಲೀಸ್ ಅಥವಾ ಕುಕಿ ಪೊಲೀಸ್ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. “ನಾವು ಅದನ್ನು ತಳ್ಳಿಹಾಕಲು ಬಯಸುತ್ತೇವೆ. ಮಣಿಪುರ ಪೊಲೀಸರು ನಾಗಾಗಳು, ಮೈತಿ, ಮಣಿಪುರಿ ಮುಸ್ಲಿಮರು ಮತ್ತು ಮಣಿಪುರೇತರರು ಸೇರಿದಂತೆ ವಿವಿಧ ಸಮುದಾಯಗಳಿಂದ ಕೂಡಿದೆ. ಈ ಪಡೆಯಲ್ಲಿ ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಹಿಂದೂಗಳು ಇದ್ದಾರೆ” ಎಂದು ಅವರು ಹೇಳಿದರು.
- ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ್ ಕಣಿವೆ ಮೂಲದ ಮೈತಿ ಮತ್ತು ಬೆಟ್ಟಗಳ ಮೂಲದ ಕುಕಿಗಳ ನಡುವಿನ ಜನಾಂಗೀಯ ಕಲಹದಲ್ಲಿ 200 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Tue, 10 September 24