ಪತಾಂಜಲಿಯ ಕೊರೋನಿಲ್ ಅನ್ನು ಕೋವಿಡ್ ಔಷಧಿ ಕಿಟ್​ನಲ್ಲಿ ಸೇರಿಸದಿರುವಂತೆ ಐಎಮ್​ಎ ಆಗ್ರಹ

ಈಗ ಜಾರಿಯಲ್ಲಿರುವ ತಿಕ್ಕಾಟದ ನಡುವೆಯೇ ಉತ್ತರಾಖಂಡ್ ಕೋವಿಡ್-10ಕಿಟ್​ನಲ್ಲಿ ಕೊರೋನಿಲ್ ಸೇರಿಸಬೇಕೆನ್ನುವ ಪ್ರಸ್ತಾಪವನ್ನು ಪತಾಂಜಲಿ ಮಾಡಿದೆ. ಅಲೋಪಥಿ ಮತ್ತು ಅಯುರ್ವೇದವನ್ನು ಬೆರೆಸುವುದು ವೈದ್ಯಕೀಯ ಪ್ರಮಾದ ಎಂದು ಐಎಮ್​ಎ ಹೇಳಿದೆ.

ಪತಾಂಜಲಿಯ ಕೊರೋನಿಲ್ ಅನ್ನು ಕೋವಿಡ್ ಔಷಧಿ ಕಿಟ್​ನಲ್ಲಿ ಸೇರಿಸದಿರುವಂತೆ ಐಎಮ್​ಎ ಆಗ್ರಹ
ಪತಾಂಜಲಿಯ ಕೊರೋನಾ ಕಿಟ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jun 06, 2021 | 1:44 AM

ಭಾರತೀಯ ವೈದ್ಯಕೀಯ ಸಂಸ್ಥೆ (ಐಎಮ್​ಎ)ಯ ಉತ್ತರಾಖಂಡ್ ಚಾಪ್ಟರ್ ಪತಾಂಜಲಿ ಆಯುರ್ವೇದ ಸಂಸ್ಥೆಯ ಕೊರೋನಿಲ್ ಔಷಧಿಯನ್ನು ಉತ್ತರಾಖಂಡ್ ಸರ್ಕಾರದ ಕೋವಿಡ್-19 ಕಿಟ್​ನಲ್ಲಿ ಸೇರಿಸುವುದನ್ನು ವಿರೋಧಿಸಿದೆ. ವೈದ್ಯರ ಮಂಡಳಿಯು ಕರೋನಿಲ್ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಪಡೆದಿಲ್ಲ ಮತ್ತ ಭಾರತದ ಔಷಧ ಮಹಾ ನಿಯಂತ್ರಕರಿಂದಲೂ (ಡಿಸಿಜಿಐ ) ಅದೊಂದು ಔಷಧಿ ಎಂಬಂತೆ ದೃಢಪಟ್ಟಿಲ್ಲ ಎಂದು ಹೇಳಿದೆ. ‘ಆದರೆ ಕೇಂದ್ರ ಸರ್ಕಾರದ ಆಯುಷ್ ವಿಭಾಗದಿಂದ ಕೊರೋನಿಲ್ ಒಂದು ಪೂರಕ ಆಹಾರ ವಸ್ತುವಾಗಿ ಅಂಗೀಕೃತಗೊಂಡಿದೆ ಮತ್ತು ಬಾಬಾ ರಾಮದೇವ್ ಅವರು ರಾಷ್ಟ್ರೀಯ ಟಿವಿ ಚ್ಯಾನಲ್​ಗಳಲ್ಲಿ ಪ್ರತಿಗಂಟೆ ಜಾಹೀರಾತುಗಳ ಮೂಲಕ ದಾವೆ ಮಾಡುತ್ತಿರುವ ಹಾಗೆ ಅದು ಡ್ರಗ್ ಅಥವಾ ಔಷಧಿ ಅಲ್ಲ,’ ಎಂದು ಉತ್ತರಾಖಂಡ್ ಐಎಮ್​ಎನ ರಾಜ್ಯ ಕಾರ್ಯದರ್ಶಿಯಾಗಿರುವ ಡಾ ಅಜಯ ಖನ್ನಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಅಲೋಫೆಥಿಕ್ ಔಷಧಿಗಳ ಬಗ್ಗೆ ಯೋಗ ಗುರು ಬಾಬಾ ರಾಮ್​​ದೇವ್ ಅವರು ಹಗುರವಾಗಿ ಮಾತಾಡಿದ ನಂತರ ರೊಚ್ಚಿಗೆದ್ದಿರುವ ಭಾರತೀಯ ವೈದ್ಯಕೀಯ ಸಂಸ್ಥೆ ಅವರ ವಿರುದ್ಧ ಯುದ್ಧವನ್ನೇ ಸಾರಿದೆ. ವಿವಾದ ಇನ್ನೂ ಬಿಸಿಯಾಗಿದ್ದು ರಾಮ್​ದೇವ್ ಅವರ ವಿರುದ್ಧ ಐಎಮ್​ಎ ದೂರುಗಳನ್ನು ದಾಖಲಿಸಿದೆ.

ಈಗ ಜಾರಿಯಲ್ಲಿರುವ ತಿಕ್ಕಾಟದ ನಡುವೆಯೇ ಉತ್ತರಾಖಂಡ್ ಕೋವಿಡ್-10ಕಿಟ್​ನಲ್ಲಿ ಕೊರೋನಿಲ್ ಸೇರಿಸಬೇಕೆನ್ನುವ ಪ್ರಸ್ತಾಪವನ್ನು ಪತಾಂಜಲಿ ಮಾಡಿದೆ. ಅಲೋಪಥಿ ಮತ್ತು ಅಯುರ್ವೇದವನ್ನು ಬೆರೆಸುವುದು ವೈದ್ಯಕೀಯ ಪ್ರಮಾದ ಎಂದು ಐಎಮ್​ಎ ಹೇಳಿದೆ.

‘ಕೊರೋನಿಲ್ ಅನ್ನು ಅಲೋಪೆಥಿಕ್ ಔಷಧಿಗಳೊಂದಿಗೆ ಬೆರಸುವುದು ಮಿಕ್ಸೊಪಥಿಗೆ ಎಡೆಮಾಡಿಕೊಟ್ಟಂತಾಗುತ್ತದೆ ಹಾಗೂ ಗೌರವಾನ್ವಿತ ಸುಪ್ರೀಮ್ ಕೋರ್ಟಿನ ರೂಲಿಂಗ್ ಒಂದರ ಪ್ರಕಾರ ಅಲೋಪಥಿ ಮತ್ತು ಅಯುರ್ವೇದದ ಕಾಕ್​ಟೇಲ್​ಗೆ ಅನುಮತಿಯಿಲ್ಲ. ಅಪೆಕ್ಸ್ ಕೋರ್ಟ್​ ಅಲ್ಲದೆ ವಿವಿಧ ರಾಜ್ಯಗಳಲ್ಲಿನ ಕೋರ್ಟುಗಳೂ ಮಿಕ್ಸೊಪಥಿ ಸಲ್ಲದು ಎಂದು ಹೇಳಿವೆ,’ ಎಂದು ಐಎಮ್​ಎ ಹೇಳಿದೆ.

ಕೊರೋನಿಲ್ ಲಾಂಚ್​ ಆದಾಗಿನಿಂದ ವಿವಾದದಲ್ಲಿ ಮುಳುಗಿದೆ. ಕಳೆದ ವರ್ಷ ಉತ್ತರಾಖಂಡ್ ಸರ್ಕಾರವು ಪತಾಂಜಲಿಗೆ ರೋಗ ಇರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ಪಾದನೆ ತಯಾರಿಸಲು ಅನುಮತಿ ನೀಡಲಾಗಿತ್ತೇ ಹೊರತು ಕೊರೋನಾ ವೈರಸ್​ ಸೋಂಕಿನ ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ಔಷಧಿ ತಯಾರಿಸಲು ಅಲ್ಲವೆಂದು ಹೇಳಿತ್ತು.

ರೂ. 545 ಬೆಲೆಯ ಈ ಕಿಟ್ ಮೂರು ವಸ್ತುಗಳನ್ನು ಹೊಂದಿದೆ-ಕೊರೋನಿಲ್ ಮಾತ್ರೆ, ಸ್ವಸಾರಿ ವಾಟಿ, ಮತ್ತು ಅನು ತೈಲ. ಹರಿಯಾಣ ಸರ್ಕಾರವು ಒಂದು ಲಕ್ಷ ಕೊರೋನಿಲ್ ಕಿಟ್​ಗಳನ್ನು ಕೋವಿಡ್​-19 ಸೋಂಕಿತರಿಗೆ ಉಚಿತವಾಗಿ ಹಂಚಲಾಗುವುದು ಎಂದು ಕಳೆದ ತಿಂಗಳು ಹೇಳಿತ್ತು.

ಇದನ್ನೂ ಓದಿ: Ramdev: ಅಲೋಪತಿ ವೈದ್ಯವನ್ನು ಸ್ಟುಪಿಡ್​ ಅಂದಿದ್ದ ಪತಂಜಲಿ ಬಾಬಾ ರಾಮದೇವ್​​ಗೆ ದೆಹಲಿ ಹೈಕೋರ್ಟ್​ ಸಮನ್ಸ್​

Published On - 1:44 am, Sun, 6 June 21

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು