AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

43 ವರ್ಷಗಳಿಂದ ಭಾರತದಲ್ಲೇ ನೆಲೆಸಿರುವ ಪಾಕಿಸ್ತಾನದ ಇಬ್ಬರು ವೃದ್ಧ ಸಹೋದರಿಯರ ಕಣ್ಣೀರ ಕಥೆ..!

ಭಾರತದಲ್ಲಿ 43 ವರ್ಷಗಳಿಂದ ವಾಸಿಸುತ್ತಿದ್ದ ಇಬ್ಬರು ವೃದ್ಧ ಪಾಕಿಸ್ತಾನಿ ಸಹೋದರಿಯರನ್ನು ಭಾರತ ಸರ್ಕಾರ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುತ್ತಿದೆ. ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಅವರಿಗೆ ಪೌರತ್ವ ದೊರೆತಿಲ್ಲ. ಪಾಕಿಸ್ತಾನದಲ್ಲಿ ಅವರಿಗೆ ಸಂಬಂಧಿಕರಿಲ್ಲದಿರುವುದು ಈಗ ಚಿಂತೆಯಾಗಿದೆ. ಈ ಘಟನೆ ಮಾನವೀಯತೆಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಮತ್ತು ಪೌರತ್ವ ಪ್ರಕ್ರಿಯೆಯಲ್ಲಿನ ವಿಳಂಬಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.

43 ವರ್ಷಗಳಿಂದ ಭಾರತದಲ್ಲೇ ನೆಲೆಸಿರುವ ಪಾಕಿಸ್ತಾನದ ಇಬ್ಬರು ವೃದ್ಧ ಸಹೋದರಿಯರ ಕಣ್ಣೀರ ಕಥೆ..!
ಭಾರತ-ಪಾಕಿಸ್ತಾನ ಗಡಿ
ವಿವೇಕ ಬಿರಾದಾರ
|

Updated on:May 01, 2025 | 4:58 PM

Share

ಶ್ರೀನಗರ, ಮೇ 01: ಪಾಕಿಸ್ತಾನದ (Pakistan) ಅನೇಕ ಮುಸ್ಲಿಮರು (Muslim) ಭಾರತಕ್ಕೆ ವಲಸೆ ಬಂದು ಸುಮಾರು ವರ್ಷಗಳಿಂದ ನೆಲೆಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಭಾರತಕ್ಕೆ ಬಂದು ನೆಲೆಸಿರುವ ಅನೇಕ ಮುಸ್ಲಿಮರು ಇಲ್ಲಿನ ಪ್ರಜೆಗಳಂತೆ ವಾಸಿಸುತ್ತಿದ್ದಾರೆ. ಆದರೆ, ಉಗ್ರರು ಮಾಡಿರುವ ದೇಶದ್ರೋಹಿ ಕೃತ್ಯಗಳ ಪರಿಣಾಮ ಕೇಂದ್ರ ಸರ್ಕಾರದ (Central Government) ಆದೇಶದಂತೆ ಅನೇಕರು ಭಾರತ (India) ತೊರೆದು ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆ. ಇವರಲ್ಲಿ, ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ 43 ವರ್ಷಗಳಿಂದ ವಾಸಿಸುತ್ತಿರುವ ಇಬ್ಬರು ವೃದ್ಧ ಸಹೋದರಿಯರೂ ಸೇರಿದ್ದಾರೆ.

ಇದೀಗ, ಈ ವೃದ್ಧ ಸಹೋದರಿಯರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ. ಇದರಿಂದ ವೃದ್ಧ ಸಹೋದರಿಯರ ಕುಟುಂಬದಲ್ಲಿ ನಿರಾಶೆಯ ಕಾರ್ಮೋಡ ಆವರಿಸಿದೆ. ಕಳೆದ 43 ವರ್ಷಗಳಿಂದ ರಾಜೌರಿಯಲ್ಲಿ ವಾಸಿಸುತ್ತಿರುವ ಇಬ್ಬರು ಸಹೋದರಿಯರನ್ನು ಭಾರತ ಸರ್ಕಾರ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುತ್ತಿದೆ. ಅಟ್ಟಾರಿ-ವಾಘಾ ಗಡಿಯಲ್ಲಿ ಅವರನ್ನು ಬಿಡಲು ಬಂದಿದ್ದ ಅವರ ಸೋದರಸಂಬಂಧಿ ಎಂಎಚ್ ಷಾ, ಇಬ್ಬರೂ ಸಹೋದರಿಯರು 1983 ರಲ್ಲಿ ಭಾರತಕ್ಕೆ ಬಂದಿದ್ದಾರೆ ಎಂದರು.

ಪಾಕಿಸ್ತಾನದಲ್ಲಿ ಈಗ ಇವರ ಸಂಬಂಧಿಗಳು ಯಾರೂ ಇಲ್ಲ. ಅವರು ಎಲ್ಲಿ ಹೋಗಬೇಕು ಎಂದು ಸೋದರ ಸಂಬಂಧಿ ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ. ಈ ಇಬ್ಬರು ಸಹೋದರಿಯರಾದ ಸೈದಾ ಜಮೀರ್ ಫಾತಿಮಾ ಅವರಿಗೆ 67 ವರ್ಷ ಮತ್ತು ಇನ್ನೊಬ್ಬರು ಸೈದಾ ಸಘೀರ್ ಫಾತಿಮಾ ಅವರಿಗೆ 64 ವರ್ಷವಾಗಿದೆ.

ಇದನ್ನೂ ಓದಿ
Image
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
Image
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
Image
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
Image
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಅವರು 43 ವರ್ಷಗಳಿಂದ ಭಾರತದ ಶ್ರೀನಗರದ ರಾಜೌರಿಯಲ್ಲಿ ವಾಸಿಸುತ್ತಿದ್ದಾರೆ. ಈ ಸಹೋದರಿಯರು ತಮ್ಮ ತಂದೆಯೊಂದಿಗೆ ಚಿಕ್ಕವಯಸ್ಸಿನಲ್ಲಿಯೇ ಭಾರತಕ್ಕೆ ಬಂದಿದ್ದರು. ಭಾರತೀಯ ಪೌರತ್ವಕ್ಕಾಗಿ ಈ ಸಹೋದರಿಯರು ಮನವಿ ಮಾಡಿದ್ದಾರೆ. ಇದಕ್ಕಾಗಿ ಶುಲ್ಕವನ್ನು ಸಹ ಪಾವತಿಸಲಾಗಿದೆ. ಆದರೆ, ಇವರಿಗೆ ಇನ್ನೂ ಪೌರತ್ವ ಸಿಕ್ಕಿಲ್ಲ. ಇಬ್ಬರೂ ಜೀವನದ ಕೊನೆ ಹಂತದಲ್ಲಿದ್ದಾರೆ. ಆದರೆ, ಈಗ ಸರ್ಕಾರ ಇವರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದೆ. ಆದರೆ, ಪಾಕಿಸ್ತಾನದಲ್ಲಿ ಎಲ್ಲಿ ಹೋಗಬೇಕು ಎಂಬುದೆ ಈ ವೃದ್ಧ ಸಹೋದರಿಯರಿಗೆ ಈಗ ಯಕ್ಷ ಪ್ರಶ್ನೆಯಾಗಿದೆ.

“ಈ ಇಬ್ಬರು ಸಹೋದರಿಯರು ಕಳೆದ 43 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರ ತಂದೆ ನಿಧನರಾಗಿದ್ದಾರೆ ಮತ್ತು ಅವರಿಗೆ ಪಾಕಿಸ್ತಾನದಲ್ಲಿ ಯಾರೂ ಉಳಿದಿಲ್ಲ. ಅವರು ಈಗ ಎಲ್ಲಿಗೆ ಹೋಗುತ್ತಾರೆ? ಅವರ ಭಾರತೀಯ ಪೌರತ್ವಕ್ಕೂ ಅರ್ಜಿ ಸಲ್ಲಿಸಿದ್ದೇನೆ ಮತ್ತು ಸರ್ಕಾರ ಕೇಳಿದ ಶುಲ್ಕವನ್ನು ಸಹ ಠೇವಣಿ ಮಾಡಲಾಗಿದೆ. ಆದರೆ ಅವರಿಗೆ ಇನ್ನೂ ಪೌರತ್ವ ಸಿಕ್ಕಿಲ್ಲ ಮತ್ತು ಈಗ ಇದ್ದಕ್ಕಿದ್ದಂತೆ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗುತ್ತಿದೆ. ಅವರ ವಯಸ್ಸು ಎಷ್ಟಿದೆಯೆಂದರೆ ಅವರು ಸ್ವಂತವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಮತ್ತು ಅವರಿಗೆ ಯಾವುದೇ ಬೆಂಬಲವಿಲ್ಲ. ಅವರಿಗೆ ಪಾಕಿಸ್ತಾನದಲ್ಲಿ ಮನೆ ಅಥವಾ ಕುಟುಂಬವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರದ ಈ ನಡೆ ಮಾನವೀಯತೆಗೆ ವಿರುದ್ಧವಾಗಿದೆ” ಎಂದು ವೃದ್ಧ ಸಹೋದರಿಯರ ಸಂಬಂಧಿ ಎಂ.ಎಚ್. ಷಾ ಹೇಳಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್​ ದಾಳಿ: ಉಗ್ರರಲ್ಲಿ ಒಬ್ಬ ಪಾಕಿಸ್ತಾನ ಸೇನೆಯ ಮಾಜಿ ಕಮಾಂಡೋ

ಅಟ್ಟಾರಿ ಗಡಿಯಲ್ಲಿ ಸಿಲುಕಿದ ಪಾಕಿಸ್ತಾನಿ ನಾಗರಿಕರು

ಉಭಯ ದೇಶಗಳ ನಾಗರಿಕರು ಹಿಂದಿರುಗಲು ನಿಗದಿ ಮಾಡಿದ್ದ ಗಡುವು ಮುಕ್ತಾಯಗೊಂಡಿದ್ದು, ತಮ್ಮ ದೇಶಕ್ಕೆ ಮರಳಲು ಪಾಕಿಸ್ತಾನಿ ನಾಗರಿಕರು ಅಟ್ಟಾರಿ ಬಾಗಾ ಗಡಿಯಲ್ಲಿ ಜಮಾವಣೆಗೊಂಡಿದ್ದಾರೆ. ಪಾಕಿಸ್ತಾನದ ಪಂಜಾಬ್‌ನ ರೆಹಮಾನ್ಯರ್ ಜಿಲ್ಲೆಯ 16 ಸದಸ್ಯರು ಫೆಬ್ರವರಿಯಲ್ಲಿ ತಮ್ಮ ಕುಟುಂಬ ಸದಸ್ಯರ ಚಿತಾಭಸ್ಮದೊಂದಿಗೆ ಭಾರತಕ್ಕೆ ಬಂದಿದ್ದರು. ಈ 16 ಜನರಲ್ಲಿ ಕೆಲವು ಮಹಿಳೆಯರು, ಕೆಲವು ಮಕ್ಕಳೂ ಸೇರಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಚಿತಾಭಸ್ಮವನ್ನು ಹೂಳಲು ಹರಿದ್ವಾರಕ್ಕೆ ಎರಡು ತಿಂಗಳ ಭೇಟಿಗಾಗಿ ಭಾರತಕ್ಕೆ ಬಂದಿದ್ದ ಕುಟುಂಬ ವಿಸಾ ಅವಧಿ ಮುಗಿದ ಹಿನ್ನೆಲೆ ಮತ್ತು ಪಹಲ್ಗಾಮ್‌ನಿಂದಾಗಿ ಪರಿಸ್ಥಿತಿ ಹದಗೆಡುತ್ತಿರುವುದರಿಂದ, ಪಾಕಿಸ್ತಾನಕ್ಕೆ ಹಿಂತಿರುಗುತ್ತಿದೆ.

ವರದಿ: ವಿಲಾಸ್​

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Thu, 1 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ