Coronavirus cases in India: ಭಾರತದಲ್ಲಿ 22,842 ಹೊಸ ಕೊವಿಡ್ ಪ್ರಕರಣ ಪತ್ತೆ, 244 ಸಾವು

Covid-19: ಕಳೆದ 24 ಗಂಟೆಗಳಲ್ಲಿ ಭಾರತವು 22,842 ಹೊಸ ಕೊರೊನಾವೈರಸ್ ಸೋಂಕುಗಳನ್ನು ವರದಿ ಮಾಡಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 3,38,13,903 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Coronavirus cases in India: ಭಾರತದಲ್ಲಿ 22,842 ಹೊಸ ಕೊವಿಡ್ ಪ್ರಕರಣ ಪತ್ತೆ, 244 ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 03, 2021 | 10:48 AM

ದೆಹಲಿ: ಜನವರಿಯಲ್ಲಿ ದೇಶದಲ್ಲಿ ಲಸಿಕೆ ವಿತರಣೆ ಪ್ರಾರಂಭವಾದಾಗಿನಿಂದ ಭಾರತವು ಶನಿವಾರ 90 ಕೋಟಿ ಡೋಸ್‌ಗಳನ್ನು ನಿರ್ವಹಿಸುವ ಮಹತ್ವದ ಮೈಲಿಗಲ್ಲನ್ನು ದಾಟಿದೆ. ಇವುಗಳಲ್ಲಿ 65 ಕೋಟಿಗಿಂತಲೂ ಹೆಚ್ಚಿನವು ಮೊದಲ ಡೋಸ್‌ಗಳು ಮತ್ತು 24 ಕೋಟಿಗಿಂತ ಹೆಚ್ಚಿನವುಗಳು ಎರಡನೇ ಡೋಸ್‌ಗಳನ್ನು ನೀಡಲಾಗಿದೆ. ದೇಶವು ದಿನಕ್ಕೆ ಸರಾಸರಿ 60 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡುತ್ತಿದೆ. ಏತನ್ಮಧ್ಯೆ ಕಳೆದ 24 ಗಂಟೆಗಳಲ್ಲಿ ಭಾರತವು 22,842 ಹೊಸ ಕೊರೊನಾವೈರಸ್ (coronavirus) ಸೋಂಕುಗಳನ್ನು ವರದಿ ಮಾಡಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 3,38,13,903 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,70,557 ಕ್ಕೆ ಇಳಿದಿದೆ, ಇದು 199 ದಿನಗಳಲ್ಲಿ ಕಡಿಮೆ. 244 ಹೊಸ ಸಾವು ಪ್ರಕರಣಗಳೊಂದಿಗೆ ಕೊವಿಡ್ -19 ಸಾವಿನ ಸಂಖ್ಯೆ 4,48,817 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಸಕ್ರಿಯ ಪ್ರಕರಣಗಳು ಈಗ ಭಾರತದ ಒಟ್ಟು ಸೋಂಕುಗಳ ಶೇ 0.80 ರಷ್ಟಿದೆ, ಇದು ಮಾರ್ಚ್ 2020 ರ ನಂತರ ಅತ್ಯಂತ ಕಡಿಮೆ ಆಗಿದೆ.

ಕಳೆದ ಕೆಲವು ದಿನಗಳಿಂದ ಭಾರತವು ಪ್ರತಿದಿನ ಕೇವಲ 20,000 ಕ್ಕೂ ಹೆಚ್ಚು ಕೊವಿಡ್ -19 ಪ್ರಕರಣಗಳನ್ನು ವರದಿ ಮಾಡುತ್ತಿದೆ. ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ. ಮಿಜೋರಾಂ ತನ್ನ ಜನಸಂಖ್ಯೆಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ವರದಿ ಮಾಡುತ್ತಿದೆ. ಮಿಜೋರಾಂ ತನ್ನ ಜನಸಂಖ್ಯೆಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ವರದಿ ಮಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಕೇರಳವು ಸಂಪೂರ್ಣ ಸಂಖ್ಯೆಯಲ್ಲಿ ಕುಸಿತ ಕಂಡಿದ್ದರೂ, ಅಂಕಿಅಂಶಗಳು ಇನ್ನೂ 10,000 ಕ್ಕಿಂತ ಹೆಚ್ಚಿದ್ದರೂ ಮಿಜೋರಾಂ ಬದಲಿಗೆ ಪ್ರಕರಣಗಳ ಏರಿಕೆಯನ್ನು ಕಂಡಿದೆ. ಆದಾಗ್ಯೂ, ಎರಡೂ ರಾಜ್ಯಗಳು ಹಬ್ಬದ ಸೀಸನ್‌ಗೆ ಮುಂಚಿತವಾಗಿ ನಿರ್ಬಂಧಗಳಲ್ಲಿ ಮತ್ತಷ್ಟು ಸಡಿಲಿಕೆಗಳನ್ನು ಘೋಷಿಸಿವೆ.

22,842 ಹೊಸ ಕೊವಿಡ್ ಪ್ರಕರಣಗಳು ಮತ್ತು 244 ಸಾವುಗಳಲ್ಲಿ, ಕೇರಳವು ನಿನ್ನೆ 13,217 ಪ್ರಕರಣಗಳು ಮತ್ತು 121 ಸಾವುಗಳನ್ನು ವರದಿ ಮಾಡಿದೆ. ಎರ್ನಾಕುಲಂ ಮೊದಲ ಡೋಸ್‌ನೊಂದಿಗೆ ಶೇ 100 ಲಸಿಕೆಯನ್ನು ಪೂರ್ಣಗೊಳಿಸಿದ ಕೇರಳದ ಮೊದಲ ಜಿಲ್ಲೆಯಾಗಿದೆ ಎಂದು ಕೇರಳ ಸಚಿವ ಪಿ ರಾಜೀವ್ ಹೇಳಿವೆ. ಅಸ್ಸಾಂನಲ್ಲಿ 246 ಹೊಸ ಕೊವಿಡ್ -19 ಪ್ರಕರಣಗಳು, 272 ಚೇತರಿಕೆ ಮತ್ತು ನಾಲ್ಕು ಸಾವುಗಳನ್ನು ವರದಿ ಮಾಡಿದೆ. ಇಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,971 ಆಗಿದ್ದು  5,92,514 ಮಂದಿ ಚೇತರಿಸಿಕೊಂಡಿದ್ದು ಸಾವಿನ ಸಂಖ್ಯೆ 5,880 ಆಗಿದೆ.

ಹರ್ಯಾಣದಲ್ಲಿ ಕೊವಿಡ್ ಸಂಬಂಧಿತ ಸಾವು ವರದಿಯಾಗಿಲ್ಲ. ಶನಿವಾರ 14 ಹೊಸ ಪ್ರಕರಣಗಳು ದಾಖಲಾಗಿದ್ದರೂ, ರಾಜ್ಯದಲ್ಲಿ ಪ್ರಕರಣಗಳನ್ನು 7,70,904 ಕ್ಕೆ ತಳ್ಳಿದೆ. ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್ ಪ್ರಕಾರ ಸಾವಿನ ಸಂಖ್ಯೆ 9,874 ಆಗಿದೆ. ಹೊಸ ಪ್ರಕರಣಗಳಲ್ಲಿ ಎಂಟು ಗುರುಗ್ರಾಮ್ ಜಿಲ್ಲೆಯಿಂದ ವರದಿಯಾಗಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 111 ಆಗಿದ್ದರೆ ಒಟ್ಟಾರೆ ಚೇತರಿಕೆ 7,60,746 ಕ್ಕೆ ತಲುಪಿದೆ. ಚೇತರಿಕೆಯ ದರವು 98.68 ಶೇಕಡಾ ಎಂದು ಬುಲೆಟಿನ್ ತಿಳಿಸಿದೆ.

ಇದನ್ನೂ ಓದಿಕರ್ನಾಟಕಕ್ಕೆ ‘ಕೊವಿಡ್ ವಿರುದ್ಧ ಹೋರಾಡುತ್ತಿರುವ ಅತ್ಯುತ್ತಮ ರಾಜ್ಯ’ ವಿಭಾಗದ ಇಂಡಿಯಾ ಟುಡೇ ಹೆಲ್ತ್ ಗಿರಿ ಪ್ರಶಸ್ತಿ ಪ್ರದಾನ

ಇದನ್ನೂ ಓದಿ:ಕೊವಿಡ್ ಬಳಿಕ ಕುಟುಂಬಗಳ ಸಾಮೂಹಿಕ ಆತ್ಮಹತ್ಯೆ ವಿಚಾರ: ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳುತ್ತೇವೆ ಎಂದ ಸಿಎಂ ಬೊಮ್ಮಾಯಿ

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ