Coronavirus cases in India: ದೇಶದಲ್ಲಿ 48,786 ಹೊಸ ಕೊವಿಡ್ ಪ್ರಕರಣ ಪತ್ತೆ, 1,005 ಮಂದಿ ಸಾವು

Covid 19: ಗುರುವಾರದ ಮಾಹಿತಿ ಪ್ರಕಾರ ಕೊವಿಡ್ -19 ನಿಂದ 61,588 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಚೇತರಿಕೆ ಸಂಖ್ಯೆ 29,488, 918 ಕ್ಕೆ ತಲುಪಿದೆ. ಇದು ಒಟ್ಟು ಕೊವಿಡ್ ಪ್ರಕರಣದ ಶೇಕಡಾ 96.97 ರಷ್ಟಿದೆ. ಸಕ್ರಿಯ ಪ್ರಕರಣಗಳು ಶೇಕಡಾ 1.77 ರಷ್ಟು ಇಳಿಕೆಯಾಗಿದ್ದು, 5,23,257 ಕ್ಕೆ ತಲುಪಿದೆ.

Coronavirus cases in India: ದೇಶದಲ್ಲಿ 48,786 ಹೊಸ ಕೊವಿಡ್ ಪ್ರಕರಣ ಪತ್ತೆ, 1,005 ಮಂದಿ ಸಾವು
ಕೊವಿಡ್ ಲಸಿಕೆ ಪಡೆಯುತ್ತಿರುವ ಮಹಿಳೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 01, 2021 | 10:46 AM

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 48,786 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ವರದಿ ಆಗಿದೆ .ದೇಶದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 30,411,634 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಇದೇ ಅವಧಿಯಲ್ಲಿ ಕೊವಿಜ್ ಕಾಯಿಲೆಯಿಂದಾಗಿ, 1,005 ಜನರು ಸಾವನ್ನಪ್ಪಿದರು, ಸಾವಿನ ಸಂಖ್ಯೆ 399,459 ಕ್ಕೆ ತಲುಪಿದೆ. ಜೈಡಸ್ ಕ್ಯಾಡಿಲಾ ಕೊವಿಡ್ -19 ಲಸಿಕೆಯ ತುರ್ತು ಬಳಕೆಯ ಅನುಮೋದನೆಗಾಗಿ ದೇಶದ ಔಷಧ ನಿಯಂತ್ರಕಕ್ಕೆ ಅರ್ಜಿ ಸಲ್ಲಿಸಿದೆ ಮತ್ತು ವಾರ್ಷಿಕವಾಗಿ 120 ಮಿಲಿಯನ್ ಡೋಸ್ ಲಸಿಕೆ ತಯಾರಿಸಲು ಚಿಂತನೆ ನಡೆಸಿದೆ ಎಂದು ಹೇಳಿದೆ.

ಜೈಡಸ್ ಕ್ಯಾಡಿಲಾ ಕಂಪನಿಯ ಲಸಿಕೆ ZyCoV-D ಅನುಮೋದನೆಯು ಮಾಡರ್ನಾ, ಅಸ್ಟ್ರಾಜೆನೆಕಾ ಮತ್ತು ಪಾಲುದಾರ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್, ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಮತ್ತು ರಷ್ಯಾದ ಗಮಲೇಯ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ನಂತರ ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದ ಐದನೇ ಲಸಿಕೆಯಾಗಿದೆ.

ಗುರುವಾರದ ಮಾಹಿತಿ ಪ್ರಕಾರ ಕೊವಿಡ್ -19 ನಿಂದ 61,588 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಚೇತರಿಕೆ ಸಂಖ್ಯೆ 29,488, 918 ಕ್ಕೆ ತಲುಪಿದೆ. ಇದು ಒಟ್ಟು ಕೊವಿಡ್ ಪ್ರಕರಣದ ಶೇಕಡಾ 96.97 ರಷ್ಟಿದೆ. ಸಕ್ರಿಯ ಪ್ರಕರಣಗಳು ಶೇಕಡಾ 1.77 ರಷ್ಟು ಇಳಿಕೆಯಾಗಿದ್ದು, 5,23,257 ಕ್ಕೆ ತಲುಪಿದೆ.

ಬೆಳಿಗ್ಗೆ 7 ಗಂಟೆಗೆ ಪ್ರಕಟವಾದ ಮಾಹಿತಿಯ ಪ್ರಕಾರ, ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಒಟ್ಟು 33.57 ಕೋಟಿ ಲಸಿಕೆ ಪ್ರಮಾಣವನ್ನು ನೀಡಲಾಗಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳ ಶೇಕಡಾ 1.72 ರಷ್ಟನ್ನು ಒಳಗೊಂಡಂತೆ 5,23,257 ಕ್ಕೆ ಇಳಿದಿದ್ದು ರಾಷ್ಟ್ರೀಯ ಕೊವಿಡ್ -19 ಚೇತರಿಕೆ ಪ್ರಮಾಣವು ಶೇಕಡಾ 96.97 ಕ್ಕೆ ಏರಿದೆ.

ದೇಶದಲ್ಲಿ ಕೊವಿಡ್ ಪತ್ತೆಗಾಗಿ ಇಲ್ಲಿಯವರೆಗೆ ನಡೆಸಿದ ಒಟ್ಟು ಪರೀಕ್ಷೆಗಳನ್ನು 41,20,21,494. ಅದೇ ವೇಳೆ 9,21,450 ಪರೀಕ್ಷೆಗಳನ್ನು ಬುಧವಾರ ನಡೆಸಲಾಯಿತು.

ದೈನಂದಿನ ಸಕಾರಾತ್ಮಕ ದರವು ಶೇಕಡಾ 2.54 ರಷ್ಟಿದೆ. ಸತತ 24 ದಿನಗಳಿಂದ ಇದು ಐದು ಪ್ರತಿಶತಕ್ಕಿಂತ ಕಡಿಮೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ, ಸಾಪ್ತಾಹಿಕ ಸಕಾರಾತ್ಮಕ ದರವು ಶೇಕಡಾ 2.64 ಕ್ಕೆ ಇಳಿದಿದೆ.

ಭಾರತದ ಕೊವಿಡ್ -19 ಮೊತ್ತವು ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು ಮೂವತ್ತು ಲಕ್ಷ, ಸೆಪ್ಟೆಂಬರ್ 5 ರಂದು ನಲುವತ್ತು ಲಕ್ಷ ಮತ್ತು ಸೆಪ್ಟೆಂಬರ್ 16 ರಂದು ಐವತ್ತು ಲಕ್ಷ ದಾಟಿದೆ. ಇದು ಸೆಪ್ಟೆಂಬರ್ 28 ರಂದು ಅರುವತ್ತು ಲಕ್ಷ, ಅಕ್ಟೋಬರ್ 11 ರಂದು ಎಪ್ಪತ್ತು ಲಕ್ಷ, ಅಕ್ಟೋಬರ್ 29 ರಂದು ಎಂಭತ್ತು ಲಕ್ಷ, ನವೆಂಬರ್ 20 ರಂದು ತೊಂಬತ್ತು ಲಕ್ಷ ಮತ್ತು ಡಿಸೆಂಬರ್ 19 ರಂದು 1ಕೋಟಿ ಗಡಿ ದಾಟಿದೆ. ಭಾರತವು ಮೇ 4 ರಂದು 2 ಕೋಟಿ ಮತ್ತು ಜೂನ್ 23 ರಂದು 3 ಕೋಟಿ ಮೈಲಿಗಲ್ಲು ದಾಟಿತ್ತು.

ಇದನ್ನೂ ಓದಿ: ಕೊವಿಡ್​ ಸಾಂಕ್ರಾಮಿಕದ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ; ತರಕಾರಿ ಪ್ಯಾನ್​ಕೇಕ್​ ತಯಾರಿಸುವ ವಿಧಾನ ಇಲ್ಲಿದೆ

ಇದನ್ನೂ ಓದಿ:  Zydus Cadila: 12 ರಿಂದ 18 ವರ್ಷದವರಿಗೆ ಜೈ ಕೋವ್ ಡಿ ಲಸಿಕೆ ಸುರಕ್ಷಿತ; ತುರ್ತು ಬಳಕೆಗೆ ಅನುಮತಿ ಕೋರಿದ ಕ್ಯಾಡಿಲಾ ಹೆಲ್ತ್ ಕೇರ್

(India reports 48,786 new Covid-19 cases 1,005 Covid-related deaths in the last 24 hours)

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ