ಚಂಡಮಾರುತ ಪೀಡಿತ ಶ್ರೀಲಂಕಾಕ್ಕೆ ಆಪರೇಷನ್ ಸಾಗರ್ ಬಂಧು ಅಡಿ ಭಾರತದಿಂದ ಸಹಾಯಹಸ್ತ
ದಿತ್ವಾ ಚಂಡಮಾರುತದ ಅಬ್ಬರಕ್ಕೆ ಶ್ರೀಲಂಕಾ ನಲುಗಿದೆ. ಇದುವರೆಗೂ ಚಂಡಮಾರುತದಿಂದ 56 ಶ್ರೀಲಂಕನ್ನರು ಪ್ರಾಣ ಕಳೆದುಕೊಂಡಿದ್ದಾರೆ. ಶ್ರೀಲಂಕಾದಲ್ಲಿ ಉಂಟಾದ ಜೀವಹಾನಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಹಾಗೇ, ಆಪರೇಷನ್ ಸಾಗರ್ ಬಂಧು ಅಡಿ ಪರಿಹಾರ ನೆರವು ಕಳುಹಿಸಿದ್ದಾರೆ. ಇದು ಅಗತ್ಯದ ಸಮಯದಲ್ಲಿ ಶ್ರೀಲಂಕಾದೊಂದಿಗೆ ದೃಢವಾಗಿ ನಿಲ್ಲುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.

ನವದೆಹಲಿ, ನವೆಂಬರ್ 28: ದಿತ್ವಾ ಚಂಡಮಾರುತದಿಂದ (Cyclone Ditwah) ಶ್ರೀಲಂಕಾದಲ್ಲಿ ಸಂಭವಿಸಿದ ಜೀವಹಾನಿಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಹಾಗೇ, ನೆರೆಯ ದ್ವೀಪ ರಾಷ್ಟ್ರವಾದ ಶ್ರೀಲಂಕಾಕ್ಕೆ ‘ಆಪರೇಷನ್ ಸಾಗರ್ ಬಂಧು’ ಅಡಿಯಲ್ಲಿ ನೆರವು ನೀಡಿದ್ದಾರೆ. ಚಂಡಮಾರುತದಿಂದ ನಲುಗಿರುವ ಶ್ರೀಲಂಕಾಕ್ಕೆ ಭಾರತ ಮೊದಲ ಹಂತದ ಪರಿಹಾರ ಸಾಮಗ್ರಿಗಳು ಮತ್ತು HADR ಬೆಂಬಲವನ್ನು ರವಾನಿಸಿದೆ. ಪರಿಸ್ಥಿತಿ ಹದಗೆಟ್ಟರೆ ಹೆಚ್ಚಿನ ನೆರವು ಮತ್ತು ಸಹಾಯವನ್ನು ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.
“ದಿತ್ವಾ ಚಂಡಮಾರುತದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಶ್ರೀಲಂಕಾದ ಜನರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಪ್ರಾಣ ಕಳೆದುಕೊಂಡವರ ಕುಟುಂಬಗಳ ಸುರಕ್ಷತೆ ಮತ್ತು ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ. ನಮ್ಮ ಹತ್ತಿರದ ಕಡಲ ನೆರೆಯವರೊಂದಿಗೆ ಭಾರತವು ಸದಾ ನಿಲ್ಲುತ್ತದೆ. ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಭಾರತ ಶ್ರೀಲಂಕಾಕ್ಕೆ ಪರಿಹಾರ ಸಾಮಗ್ರಿಗಳು ಮತ್ತು ಪ್ರಮುಖ HADR ಬೆಂಬಲವನ್ನು ತುರ್ತಾಗಿ ರವಾನಿಸಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ನೆರವು ಮತ್ತು ಸಹಾಯವನ್ನು ಒದಗಿಸಲು ನಾವು ಸಿದ್ಧರಾಗಿದ್ದೇವೆ” ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕೃಷ್ಣನೂರು ಉಡುಪಿಯಲ್ಲಿ ಪ್ರಧಾನಿ ಮೋದಿ ಹವಾ: ರೋಡ್ ಶೋ, ಗೀತಾ ಪಾರಾಯಣ, ಕನಕನ ಕಿಂಡಿಯ ಸ್ವರ್ಣ ಕವಚ ಲೋಕಾರ್ಪಣೆ
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಐಎನ್ಎಸ್ ವಿಕ್ರಾಂತ್ ಮತ್ತು ಐಎನ್ಎಸ್ ಉದಯಗಿರಿ ಮೂಲಕ ಶ್ರೀಲಂಕಾಕ್ಕೆ ಕಳುಹಿಸಲಾದ ಪರಿಹಾರ ನೆರವಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಪ್ರವಾಹ ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾರತೀಯ ವಿಮಾನವಾಹಕ ನೌಕೆ INS ವಿಕ್ರಾಂತ್ ಅನ್ನು ನಿಯೋಜಿಸಲಾಗುವುದು ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ.
My heartfelt condolences to the people of Sri Lanka who have lost their loved ones due to Cyclone Ditwah. I pray for the safety, comfort and swift recovery of all affected families.
In solidarity with our closest maritime neighbour, India has urgently dispatched relief…
— Narendra Modi (@narendramodi) November 28, 2025
ದಿತ್ವಾ ಚಂಡಮಾರುತವು ಶ್ರೀಲಂಕಾ ಕರಾವಳಿಗೆ ಅಪ್ಪಳಿಸಿದೆ. ಇದರಿಂದ 56 ಜನ ಸಾವನ್ನಪ್ಪಿದ್ದಾರೆ. ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಶ್ರೀಲಂಕಾದಲ್ಲಿ 21 ಜನರು ಕಾಣೆಯಾಗಿದ್ದಾರೆ. ಕಳೆದ 72 ಗಂಟೆಗಳಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ದ್ವೀಪದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಕನಿಷ್ಠ 56 ಜನ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (DMC) ತಿಳಿಸಿದೆ.
ಇದನ್ನೂ ಓದಿ: ಇಂಡೋನೇಷ್ಯಾಗೆ ಅಪ್ಪಳಿಸಿದ ಸೆನ್ಯಾರ್ ಚಂಡಮಾರುತ; ತಮಿಳುನಾಡು, ಆಂಧ್ರ, ಕೇರಳದಲ್ಲಿ ಭಾರೀ ಮಳೆಯ ಎಚ್ಚರಿಕೆ
Operation Sagar Bandhu commences.
INS Vikrant and INS Udaygiri hand over relief material at Colombo. Further steps are underway. #OperationSagarBandhu https://t.co/woMrpfRs3b pic.twitter.com/yrRCmeJsmY
— Dr. S. Jaishankar (@DrSJaishankar) November 28, 2025
ಏನಿದು ಆಪರೇಷನ್ ಸಾಗರ್ ಬಂಧು ಕಾರ್ಯಾಚರಣೆ?:
ಆಪರೇಷನ್ ಸಾಗರ್ ಬಂಧು ಎಂಬುದು ಭಾರತೀಯ ನೌಕಾಪಡೆಯ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಕಾರ್ಯಾಚರಣೆಯಾಗಿದ್ದು, ಇದನ್ನು ನೈಸರ್ಗಿಕ ವಿಕೋಪಗಳು ಅಥವಾ ತುರ್ತು ಸಂದರ್ಭಗಳಲ್ಲಿ ನೆರೆಯ ದೇಶಗಳಿಗೆ ಸಹಾಯ ಮಾಡಲು ಪ್ರಾರಂಭಿಸಲಾಗಿದೆ. “ಸಾಗರ್” ಎಂಬ ಪದವು ಭಾರತದ ಕಡಲ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಇಂದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬೆಂಬಲ ಪಾರ್ಟನರ್ ಆಗಿ ಭಾರತದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಈ ಕಾರ್ಯಾಚರಣೆಯ ಅಡಿ ಭಾರತವು ಚಂಡಮಾರುತಗಳು, ಪ್ರವಾಹಗಳು ಅಥವಾ ಇತರ ಬಿಕ್ಕಟ್ಟುಗಳಿಂದ ಪೀಡಿತ ದೇಶಗಳಿಗೆ ನೌಕಾ ಹಡಗುಗಳು, ವಿಮಾನಗಳು, ವೈದ್ಯಕೀಯ ತಂಡಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸುತ್ತದೆ. ಅವರಿಗೆ ಆಹಾರ, ಔಷಧಿಗಳು, ರಕ್ಷಣಾ ಬೆಂಬಲ ಮತ್ತು ಲಾಜಿಸ್ಟಿಕ್ಸ್‌ನಂತಹ ತಕ್ಷಣದ ಸಹಾಯವನ್ನು ಒದಗಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




