Indian Navy Helicopter Crashes: ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಪತನ, ಮೂವರು ಸಿಬ್ಬಂದಿಗಳ ರಕ್ಷಣೆ
ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಮುಂಬೈ ಕರಾವಳಿಯಲ್ಲಿ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ನಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಮುಂಬೈ: ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ (Indian Navy Helicopter) ಮುಂಬೈ ಕರಾವಳಿಯಲ್ಲಿ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ನಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ. ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಇಂದು ಮುಂಬೈ ಕರಾವಳಿಯಲ್ಲಿ ಅಪಘಾತಕ್ಕೀಡಾಗಿದ್ದು, ಸುಧಾರಿತ ಲಘು ಹೆಲಿಕಾಪ್ಟರ್ ದಿನನಿತ್ಯದ ವಿಹಾರದಲ್ಲಿದ್ದಾಗ (ALH) ಈ ಘಟನೆ ಸಂಭವಿಸಿದೆ. ಹೆಲಿಕಾಪ್ಟರ್‌ನ ಮೂವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
Indian Navy ALH, on a routine sortie off Mumbai, met with an accident close to the coast. Immediate search and rescue ensured the safe recovery of a crew of three by Naval patrol craft. An inquiry to investigate the incident has been ordered: Indian Navy pic.twitter.com/MhgFgDka14
— ANI (@ANI) March 8, 2023
ಭಾರತೀಯ ನೌಕಾಪಡೆ ALH ಮುಂಬೈನ ಕರಾವಳಿ ತೀರಕ್ಕೆ ಬರುತ್ತಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡು ಹೆಲಿಕಾಪ್ಟರ್ ಅಪಘಾತಗೊಂಡಿದೆ. ತಕ್ಷಣ ಪಾರುಗಾಣಿಕಾ ನೌಕಾ ಗಸ್ತು ಕ್ರಾಫ್ಟ್ ಮೂಲಕ ಮೂವರ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ನೌಕಾಪಡೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿಸಿದೆ. ಈ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.
Published On - 12:34 pm, Wed, 8 March 23