AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೊಲೆ ಬೆದರಿಕೆ ಇದೆ’: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಿಎ ವಿರುದ್ಧ ಸಿಡಿದೆದ್ದ ಬಿಗ್ ಬಾಸ್ ಸ್ಪರ್ಧಿ

ಪ್ರಿಯಾಂಕಾ ಅವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಪ್ರಿಯಾಂಕಾ ಪಿಎ ಸಂದೀಪ್ ಬಳಿ ಅರ್ಚನಾ ಅವರು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಯಾಗಿ ಸಿಕ್ಕಿದ್ದು ಬೈಗುಳ.

‘ಕೊಲೆ ಬೆದರಿಕೆ ಇದೆ’: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಿಎ ವಿರುದ್ಧ ಸಿಡಿದೆದ್ದ ಬಿಗ್ ಬಾಸ್ ಸ್ಪರ್ಧಿ
ಅರ್ಚನಾ ಗೌತಮ್-ಪ್ರಿಯಾಂಕಾ ವಾದ್ರಾ
ರಾಜೇಶ್ ದುಗ್ಗುಮನೆ
| Edited By: |

Updated on:Mar 08, 2023 | 3:18 PM

Share

‘ಹಿಂದಿ ಬಿಗ್ ಬಾಸ್ ಸೀಸನ್ 16’ (Bigg Boss Hindi 16) ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಇದರಲ್ಲಿ ಅರ್ಚನಾ ಗೌತಮ್ ಅವರು ಟಾಪ್ 5ರಲ್ಲಿ ಸ್ಥಾನ ಪಡೆದಿದ್ದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು. ಈಗ ಅವರು ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಪಿಎ ಸಂದೀಪ್ ಸಿಂಗ್ ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ. ಅವರಿಂದ ನನಗೆ ಕೊಲೆ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅರ್ಚನಾ ಅವರ ತಂದೆ ಗೌತಮ್ ಬುದ್ಧ ಅವರು ಮೀರತ್​​ನಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡಿದ್ದಾರೆ.

ಸಿನಿಮಾ ಮಾತ್ರವಲ್ಲದೆ ರಾಜಕೀಯದಲ್ಲೂ ಅರ್ಚನಾ ಸಕ್ರಿಯರಾಗಿದ್ದಾರೆ. ಕ್ರಾಂಗ್ರೆಸ್ ಪಕ್ಷದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್​ ಸಮಾವೇಶಕ್ಕೆ ಬರುವಂತೆ ಪ್ರಿಯಾಂಕಾ ಗಾಂಧಿ ಅವರು ಅರ್ಚನಾಗೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಫೆಬ್ರವರಿ 26ರಂದು ಅರ್ಚನಾ ಅವರು ರಾಯಪುರಕ್ಕೆ ತೆರಳಿದ್ದರು. ಪ್ರಿಯಾಂಕಾ ಅವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಪ್ರಿಯಾಂಕಾ ಪಿಎ ಸಂದೀಪ್ ಬಳಿ ಅರ್ಚನಾ ಅವರು ಮನವಿ ಮಾಡಿಕೊಂಡರು.

‘ಸಂದೀಪ್ ನನ್ನ ಮಗಳಿಗೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಕೆಟ್ಟ ಶಬ್ದಗಳಲ್ಲಿ ನನ್ನ ಮಗಳನ್ನು ಬೈದರು. ಅರ್ಚನಾ ವಿರುದ್ಧ ಜಾತಿ ನಿಂದನೆ ಮಾಡಿದರು. ಅವರನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದರು’ ಎಂದು ಅರ್ಚನಾ ತಂದೆ ಗೌತಮ್ ಬುದ್ಧ ದೂರಿನಲ್ಲಿ ಹೇಳಿದ್ದಾರೆ. ಈ ಕುರಿತು ಮೀರತ್​ನ ಎಸ್​ಪಿ ಪಿಯುಷ್ ಸಿಂಗ್ ಮಾತನಾಡಿದ್ದು, ‘ಗೌತಮ್ ಅವರು ನೀಡಿರುವ ದೂರನ್ನು ಸ್ವೀಕರಿಸಿದ್ದೇವೆ. ಎಫ್​ಐಆರ್​ ದಾಖಲಾಗಿದೆ’ ಎಂದಿದ್ದಾರೆ.

ಅರ್ಚನಾ ಗೌತಮ್ ಹಿನ್ನೆಲೆ

ಅರ್ಚನಾ ಅವರು 2014ರಲ್ಲಿ ಮಿಸ್​ ಉತ್ತರ ಪ್ರದೇಶ ಆಗಿ ಹೊರಹೊಮ್ಮಿದರು. 2018ರಲ್ಲಿ ‘ಮಿಸ್ ಬಿಕಿನಿ ಇಂಡಿಯಾ’, ಮಿಸ್​ ಬಿಕಿನಿ ಯೂನಿವರ್ಸ್​ ಇಂಡಿಯಾ’ ಮೊದಲಾದ ಕಿರೀಟವನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ. 2017ರಲ್ಲಿ ರಿಲೀಸ್ ಆದ ‘ಹಸೀನಾ ಪಾರ್ಕರ್’ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಈ ವರ್ಷ ನಡೆದ ‘ಬಿಗ್ ಬಾಸ್ ಕನ್ನಡ ಸೀಸನ್ 16’ರಲ್ಲಿ ಅವರು ಸ್ಪರ್ಧಿಸಿ ಎಲ್ಲರ ಗಮನ ಸೆಳೆದರು. ವಿನ್ ಆಗಲೇಬೇಕು ಎಂದು ಅವರು ಅಂದುಕೊಂಡಿದ್ದರು. ಮೂರನೇ ರನ್ನರ್​ಅಪ್ ಸ್ಥಾನಕ್ಕೆ ಖುಷಿಪಟ್ಟರು.

ರಾಜಕೀಯದಲ್ಲಿ ಆ್ಯಕ್ಟೀವ್

ಅರ್ಚನಾ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 2021 ನವೆಂಬರ್ ತಿಂಗಳಲ್ಲಿ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸೇರಿದರು. 2022ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಿದ್ದರು. ಇವರ ಬಿಜೆಪಿ ಪ್ರತಿಸ್ಪರ್ಧಿಗೆ 1 ಲಕ್ಷ ಮತ ಸಿಕ್ಕರೆ, ಅರ್ಚನಾಗೆ 1 ಸಾವಿರ ಮತಗಳು ಸಿಕ್ಕಿದ್ದವು.

Published On - 11:53 am, Wed, 8 March 23

ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?