ಇಂದೋರ್​ನಲ್ಲಿ ರೈಲಿನಲ್ಲಿ ಟ್ರಾಲಿ ಬ್ಯಾಗ್​ಗಳನ್ನು ಕದ್ದ ದಂಪತಿಯ ಬಂಧನ

ಮಧ್ಯಪ್ರದೇಶದ ಇಂದೋರ್‌ನಲ್ಲಿ ರೈಲುಗಳಲ್ಲಿ ಟ್ರಾಲಿ ಬ್ಯಾಗ್‌ಗಳನ್ನು ಕದ್ದ ದಂಪತಿಯನ್ನು ಬಂಧಿಸಿದ್ದಾರೆ. ಅಹಲ್ಯಾನಗರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ದಂಪತಿ ಸಹಾಯದಿಂದ ಟ್ರಾಲಿ ಬ್ಯಾಗ್‌ಗಳನ್ನು ಕದ್ದ ಘಟನೆ ನಡೆದಿದೆ. ಒಂದು ಬ್ಯಾಗ್​ನಲ್ಲಿ ಲಕ್ಷಗಟ್ಟಲೆ ಮೌಲ್ಯದ ಲಿವರ್ ಟೆಸ್ಟಿಂಗ್ ಮಷಿನ್ ಇರುವುದು ಕೂಡ ಬಯಲಾಗಿದೆ.

ಇಂದೋರ್​ನಲ್ಲಿ ರೈಲಿನಲ್ಲಿ ಟ್ರಾಲಿ ಬ್ಯಾಗ್​ಗಳನ್ನು ಕದ್ದ ದಂಪತಿಯ ಬಂಧನ
ರೈಲು

Updated on: Aug 15, 2023 | 2:24 PM

ಮಧ್ಯಪ್ರದೇಶದ ಇಂದೋರ್‌ನಲ್ಲಿ ರೈಲುಗಳಲ್ಲಿ ಟ್ರಾಲಿ ಬ್ಯಾಗ್‌ಗಳನ್ನು ಕದ್ದ ದಂಪತಿಯನ್ನು ಬಂಧಿಸಿದ್ದಾರೆ. ಅಹಲ್ಯಾನಗರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ದಂಪತಿ ಸಹಾಯದಿಂದ ಟ್ರಾಲಿ ಬ್ಯಾಗ್‌ಗಳನ್ನು ಕದ್ದ ಘಟನೆ ನಡೆದಿದೆ. ಒಂದು ಬ್ಯಾಗ್​ನಲ್ಲಿ ಲಕ್ಷಗಟ್ಟಲೆ ಮೌಲ್ಯದ ಲಿವರ್ ಟೆಸ್ಟಿಂಗ್ ಮಷಿನ್ ಇರುವುದು ಕೂಡ ಬಯಲಾಗಿದೆ.

ಈ ಹಿನ್ನೆಲೆಯಲ್ಲಿ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬರು ಟ್ರಾಲಿ ಬ್ಯಾಗ್ ಅನ್ನು ತನ್ನ ಸಹಚರರೊಂದಿಗೆ ಸ್ಕೂಟರ್‌ನಲ್ಲಿ ಸಾಗಿಸುತ್ತಿರುವುದು ಕಂಡುಬಂದಿದೆ.

ನಂತರ ಪೊಲೀಸರು ಆರೋಪಿ ಪೂಜಾ ವರ್ಮಾ ಮತ್ತು ಆಕೆಯ ಪತಿ ರಾಜ್‌ಕುಮಾರ್ ಯಾದವ್ ಅವರನ್ನು ಬಂಧಿಸಿದರು. ಇದಲ್ಲದೆ, ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡರು.

ಮತ್ತಷ್ಟು ಓದಿ: ಆಟೋದಿಂದ ಶಿಕ್ಷಕಿಯನ್ನು ಹೊರದಬ್ಬಿ ಐಫೋನ್ ಕದ್ದು ಪರಾರಿಯಾದ ದುಷ್ಕರ್ಮಿಗಳು

ಅವರ ವಶದಿಂದ ಯಕೃತ್ತು ಪರೀಕ್ಷಿಸುವ ಯಂತ್ರ, ಕದ್ದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಆರ್‌ಪಿ ಪೊಲೀಸರು ಅವರ ಇತರ ಇಬ್ಬರು ಸಹಚರರನ್ನು ಸಕ್ರಿಯವಾಗಿ ಹುಡುಕುತ್ತಿದ್ದಾರೆ.
ರೈಲ್ವೆ ಅಧಿಕಾರಿಯೊಬ್ಬರು ಮಾತನಾಡಿ, ದಂಪತಿ ಈ ಕೆಲಸ ಮಾಡಿರುವುದು ಇದೇ ಮೊದಲಲ್ಲ, ನಾಲ್ಕು ಬಾರಿ ಟ್ರಾಲಿಗಳನ್ನು ಕದ್ದಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us