ಇದು ಸಿನಿಮಾ ಕಥೆಯಲ್ಲ, IPS ಮನೋಜ್ ಜೀವನ! ಭಿಕ್ಷುಕರೊಂದಿಗೆ ಮಲಗುತ್ತಿದ್ದ ಟೆಂಪೋ ಡ್ರೈವರ್, ಪಿಯುಸಿಯಲ್ಲಿ ಫೇಲ್, ಕೊನೆಗೆ ಯುಪಿಎಸ್​​​ಸಿ ಸಕ್ಸಸ್, ಪತ್ನಿಯೂ IRS ಅಧಿಕಾರಿ!

ಪಿಯುಸಿಯಲ್ಲಿ ಅನುತ್ತೀರ್ಣರಾಗಿದ್ದ ಐಪಿಎಸ್ ಮನೋಜ್ ಕುಮಾರ್ ಶರ್ಮಾ, ಪರಿಶ್ರಮವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉತ್ತಮ ನಿದರ್ಶನ. 2005ರಲ್ಲಿ ಕಷ್ಟಕರವಾದ UPSC ಪರೀಕ್ಷೆ ಭೇದಿಸಿದವರು! ಮಧ್ಯೆ ಪಿಯುಸಿಯಲ್ಲಿ ಶ್ರದ್ಧಾ ಎಂಬ ಸಹಪಾಠಿಯನ್ನು ಪ್ರೇಮಿಸಿದರು. IRS ಅಧಿಕಾರಿಯಾಗಿರುವ ಶ್ರದ್ಧಾ ಮತ್ತು ಮನೋಜ್ ಸತಿಪತಿ.

ಇದು ಸಿನಿಮಾ ಕಥೆಯಲ್ಲ, IPS ಮನೋಜ್ ಜೀವನ! ಭಿಕ್ಷುಕರೊಂದಿಗೆ ಮಲಗುತ್ತಿದ್ದ ಟೆಂಪೋ ಡ್ರೈವರ್, ಪಿಯುಸಿಯಲ್ಲಿ ಫೇಲ್, ಕೊನೆಗೆ ಯುಪಿಎಸ್​​​ಸಿ ಸಕ್ಸಸ್, ಪತ್ನಿಯೂ IRS ಅಧಿಕಾರಿ!
IRS ಅಧಿಕಾರಿಯಾಗಿರುವ ಶ್ರದ್ಧಾ ಮತ್ತು IPS ಮನೋಜ್ ಸತಿಪತಿ
Follow us
ಸಾಧು ಶ್ರೀನಾಥ್​
|

Updated on: Jun 05, 2023 | 6:15 PM

12ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದ ಐಪಿಎಸ್ ಮನೋಜ್ ಕುಮಾರ್ ಶರ್ಮಾ (IPS Manoj Kumar Sharma) ಅವರು ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇಂದು ಉತ್ತಮ ನಿದರ್ಶನ. ಐಪಿಎಸ್ ಅಧಿಕಾರಿಯಾಗಲು ಅವರು ದೇಶದ ಅತ್ಯಂತ ಕಷ್ಟಕರವಾದ UPSC ಪರೀಕ್ಷೆ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೀವನದಲ್ಲಿ ಅಡೆತಡೆಗಳ ಹೊರತಾಗಿಯೂ, UPSC ಆಕಾಂಕ್ಷಿಗಳು IAS ಮತ್ತು IPS ಆಗಲು ಸ್ಪಷ್ಟ ಗುರಿ ಮತ್ತು ಕಠಿಣ ಅಧ್ಯಯನ ಮಾಡಬೇಕು. ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ತಮ್ಮ ಗುರಿಗಳ ದಾರಿಯಲ್ಲಿಅಡ್ಡಗಲ್ಲು, ಅಡ್ಡಗಾಲು ಆಗಲು ಬಿಡದವರು ಯಶಸ್ವಿಯಾಗುತ್ತಾರೆ. 12ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದ ಐಪಿಎಸ್ ಮನೋಜ್ ಕುಮಾರ್ ಶರ್ಮಾ ಅವರ ಪರಿಶ್ರಮಕ್ಕೆ ಇಲ್ಲಿದೆ ನಿದರ್ಶನ. ಐಪಿಎಸ್ ಅಧಿಕಾರಿಯಾಗಲು ಅವರು ದೇಶದ ಅತ್ಯಂತ ಕಷ್ಟಕರವಾದ UPSC ಪರೀಕ್ಷೆ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಯಶೋಗಾಥೆ ಆಕರ್ಷಕವಾಗಿದೆ ಮತ್ತು ಇವರ ಯಶೋಗಾಥೆ ನಿಜವಾಗಿಯೂ ಯುವಕರನ್ನು ಪ್ರೇರೇಪಿಸುತ್ತದೆ.

ಯಾರಿದು ಮನೋಜ್ ಕುಮಾರ್ ಶರ್ಮಾ, ಐಪಿಎಸ್?

ಮನೋಜ್ ಶರ್ಮಾ ಮಧ್ಯಪ್ರದೇಶದ ಮೊರೆನಾ ಪ್ರದೇಶದವರು. ಚಿಕ್ಕಂದಿನಿಂದಲೂ ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದವರು. ದುರದೃಷ್ಟವಶಾತ್, ಅವರು 12 ನೇ ತರಗತಿಯಲ್ಲಿ ಅನುತ್ತೀರ್ಣರಾದರು. ಹೆಚ್ಚು‘ವರಿ’ಯಾಗಿ 9 ಮತ್ತು 10 ನೇ ತರಗತಿಗಳಲ್ಲಿ ಥರ್ಡ್​​ ಕ್ಲಾಸ್​​​ನಲ್ಲಿ ಪಾಸಾದರು. ಸಾಲದು ಅಂತಾ, ಮನೋಜ್ 12 ನೇ ತರಗತಿಯಲ್ಲಿ ಹಿಂದಿ ಹೊರತುಪಡಿಸಿ ಎಲ್ಲಾ ವಿಷಯಗಳಲ್ಲಿಯೂ ಡುಮ್ಕಿ ಪಡೆದರು!

ಪಿಯುಸಿಯಲ್ಲಿ LOVEly ಜೀವನ:

ಮನೋಜ್ 12 ನೇ ತರಗತಿಯಲ್ಲಿ ಓದುತ್ತಿದ್ದಾಗ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದರಂತೆ. ಆದರೆ ಅವರಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ಏಕಪಕ್ಷೀಯ ಪ್ರೀತಿಯಿಂದ ಮುದುಡಿ, ಹೆದರುತ್ತಿದ್ದರಂತೆ. ಕೊನೆಗೆ ಆ ಹುಡುಗಿಗೆ ಪ್ರಪೋಸ್ ಮಾಡಿದ ಶರ್ಮಡು, ನೀನು ಒಪ್ಪಿಗೆ ಸೂಚಿಸಿದರೆ ಇಡೀ ಜಗತ್ತನ್ನೇ ತಿರುಗಿಸುತ್ತೇನೆ ಎಂದಿದ್ದರಂತೆ. ಅಂದಹಾಗೆ, ಈ ಹುಡುಗಿ ಬೇರೆ ಯಾರೂ ಅಲ್ಲ, ಈಗ ಅವನ ಹೆಂಡತಿಯಾಗಿರುವ ಶ್ರದ್ಧಾ ಜೋಷಿ (IRS Shraddha Joshi). ಅವರ ಪತ್ನಿ ಶ್ರದ್ಧಾ ಕೂಡ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿ.

ಅದೇನೇ ಇದ್ದರೂ, ಹಲವಾರು ಹಿನ್ನಡೆಗಳ ಮಧ್ಯೆಯೂ ಮನೋಜ್ ಎಂದಿಗೂ ತಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಅವರು ತಮ್ಮ ಉದ್ದೇಶ ಸಾಧನೆಗಾಗಿ ಶ್ರಮ ಹಾಕುವುದನ್ನು ಮುಂದುವರೆಸಿದರು ಮತ್ತು ರಾಷ್ಟ್ರದ ಅತ್ಯಂತ ಪ್ರತಿಷ್ಠೆಯ ಪರೀಕ್ಷೆಯಾದ UPSC ಗೆ ತಯಾರಾಗಲು ಪ್ರಾರಂಭಿಸಿಬಿಟ್ಟರು.

ಸೂರು ಇರಲಿಲ್ಲ!

“ಟ್ವೆಲ್ತ್ ಫೇಲ್” ಎಂಬ ಪುಸ್ತಕದಲ್ಲಿ ಮನೋಜ್ ತಮ್ಮ ಅನುಭವಗಳನ್ನು ವಿವರಿಸಿದ್ದಾರೆ. ತಾನು ಓದುತ್ತಿದ್ದಾಗ ತನ್ನನ್ನು ಬೆಂಬಲಿಸಲು ಗ್ವಾಲಿಯರ್‌ನಲ್ಲಿ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾನೆ. ಅವರಿಗೆ ಸೂರು ಕೂಡ ಇಲ್ಲದಂತಹ ಸಂಕಷ್ಟದ ಆರ್ಥಿಕ ಪರಿಸ್ಥಿತಿ ಇತ್ತಂತೆ. ಆದಾಗ್ಯೂ, ಅವರ ನಿರಂತರ ಹೋರಾಟವು ಅವರಿಗೆ ಯಶಸ್ವಿಯಾಗಲು ಅನುವು ಮಾಡಿಕೊಟ್ಟಿತು.

ದೆಹಲಿಯಲ್ಲಿ ಲೈಬ್ರರಿ ಪ್ಯೂನ್ ಆಗಿ ಕೆಲಸ ಮಾಡುವಾಗ ಅವರು ಗೋರ್ಕಿ, ಲಿಂಕನ್ ಮತ್ತು ಮುಕ್ತಬೋಧ್ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳ ಜೀವನಚರಿತ್ರೆಗಳನ್ನು ಅಧ್ಯಯನ ಮಾಡುವುದಕ್ಕೆ ಅವಕಾಶ ಸಿಕ್ಕಿತಂತೆ. ಆ ಪುಸ್ತಕಗಳನ್ನು ಓದುತ್ತಾ ಜೀವನದ ಸತ್ಯಗಳನ್ನು ಅರಿತುಕೊಂಡರಂತೆ.

ಯುಪಿಎಸ್‌ಸಿಯನ್ನು ಭೇದಿಸಿ ಗುರಿ ಸಾಧಿಸಿದರು

ಮನೋಜ್ ಕುಮಾರ್ ಶರ್ಮಾ ಯುಪಿಎಸ್‌ಸಿಯಲ್ಲಿ ಯಶಸ್ವಿಯಾಗಲು ಸತತ ನಾಲ್ಕು ಪ್ರಯತ್ನಗಳನ್ನು ಮಾಡಿದರು. ನಾಲ್ಕನೇ ಪ್ರಯತ್ನದಲ್ಲಿ ಅವರು ಅಖಿಲ ಭಾರತ ಮಟ್ಟದಲ್ಲಿ 121 ಶ್ರೇಣಿಯೊಂದಿಗೆ IPS ಆಗುವಲ್ಲಿ ಯಶಸ್ವಿಯಾದರು. ಮನೋಜ್ 2005ರ ಮಹಾರಾಷ್ಟ್ರ ಕೇಡರ್ ಅಧಿಕಾರಿ. ಅವರು ಪ್ರಸ್ತುತ ಮುಂಬೈ ಪೊಲೀಸ್‌ನ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್