AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘2019ರಲ್ಲಿ ಬಿಜೆಪಿ ಪ್ರಸ್ತಾಪ ನಿರಾಕರಿಸಿದ್ದ ಜೆಡಿಯು ಈಗ ಕೇಂದ್ರಕ್ಕೆ ಸೇರಲು ಉತ್ಸುಕವಾಗಿದೆ’: ಸುಳಿವು ನೀಡಿದ ಜೆಡಿಯು ನೇತಾರ

Nitish Kumar: ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಆರ್.ಸಿ.ಪಿ. ಸಿಂಗ್ ಅವರು ತಮ್ಮ ಪಕ್ಷ ಮತ್ತು ಬಿಜೆಪಿ ಬಿಹಾರದಲ್ಲಿ ಅಧಿಕಾರ ಹಂಚಿಕೊಳ್ಳುತ್ತಿದ್ದಾರೆ. ಜೆಡಿಯು ಕೇಂದ್ರ ಸಚಿವ ಸಂಪುಟಕ್ಕೆ ಬೇಗ ಅಥವಾ ನಂತರ ಸೇರ್ಪಡೆಗೊಂಡರೆ ಆಶ್ಚರ್ಯವೇನಿಲ್ಲ ಎಂದು ಹೇಳಿದ್ದಾರೆ. 

‘2019ರಲ್ಲಿ ಬಿಜೆಪಿ ಪ್ರಸ್ತಾಪ ನಿರಾಕರಿಸಿದ್ದ ಜೆಡಿಯು ಈಗ ಕೇಂದ್ರಕ್ಕೆ ಸೇರಲು ಉತ್ಸುಕವಾಗಿದೆ’: ಸುಳಿವು ನೀಡಿದ ಜೆಡಿಯು ನೇತಾರ
ನಿತೀಶ್ ಕುಮಾರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 22, 2021 | 3:40 PM

ಪಟ್ನಾ: ನರೇಂದ್ರ ಮೋದಿಯವರ ನೇತೃತ್ವದಲ್ಲಿ 2019 ರಲ್ಲಿ ಎನ್‌ಡಿಎ ಎರಡನೇ ಸರ್ಕಾರ ರಚಿಸಿದ ಕೂಡಲೇ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಬಿಜೆಪಿಯ ಪ್ರಸ್ತಾಪವನ್ನು ನಿರಾಕರಿಸಿದ್ದ ಜೆಡಿಯು, ಈಗ ಕೇಂದ್ರಕ್ಕೆ ಸೇರಲು ಉತ್ಸುಕವಾಗಿದೆ. ಬಿಹಾರ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ನಿತೀಶ್ ಕುಮಾರ್ ಅವರು ಮಂಗಳವಾರ ದೆಹಲಿ ಭೇಟಿ ನೀಡಿದ್ದು ಕೇಂದ್ರ ಸಚಿವ ಸಂಪುಟ ಪುನರ್ರಚನೆಯ ಊಹಾಪೋಹಗಳ ನಡುವೆಯೇ ಈ ಸುದ್ದಿ ಕೇಳಿಬಂದಿದೆ. ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಆರ್.ಸಿ.ಪಿ. ಸಿಂಗ್ ಅವರು ತಮ್ಮ ಪಕ್ಷ ಮತ್ತು ಬಿಜೆಪಿ ಬಿಹಾರದಲ್ಲಿ ಅಧಿಕಾರ ಹಂಚಿಕೊಳ್ಳುತ್ತಿದ್ದಾರೆ. ಜೆಡಿಯು ಕೇಂದ್ರ ಸಚಿವ ಸಂಪುಟಕ್ಕೆ ಬೇಗ ಅಥವಾ ನಂತರ ಸೇರ್ಪಡೆಗೊಂಡರೆ ಆಶ್ಚರ್ಯವೇನಿಲ್ಲ ಎಂದು ಹೇಳಿದ್ದಾರೆ.  ಆದಾಗ್ಯೂ, ನಿತೀಶ್ ಅವರ ದೆಹಲಿ ಭೇಟಿ ವೈಯಕ್ತಿಕ ಆಗಿತ್ತು. ಯಾವುದೇ ರಾಜಕೀಯಕ್ಕೆ  ಸಂಬಂಧಿಸಿದಲ್ಲ ಎಂದು ಸಿಂಗ್ ಒತ್ತಿ ಹೇಳಿದರು.

ಜೆಡಿಯು 16 ಲೋಕಸಭೆ ಮತ್ತು ಐದು ರಾಜ್ಯಸಭಾ ಸಂಸದರನ್ನು ಹೊಂದಿದ್ದು, ಕೇಂದ್ರ ಸರ್ಕಾರಕ್ಕೆ ಸೇರುವ ಬಗ್ಗೆ ಪಕ್ಷವು ಬಿಜೆಪಿಯಿಂದ ಸಹಮತ ಪಡೆದಿರುವುದು ತಿಳಿದುಬಂದಿದೆ ಎಂದು ದಿ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಬಿಜೆಪಿಯು (ಮುಂದಿನ ವರ್ಷದ) ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರಬಹುದು. ಪೂರ್ವಾಂಚಲ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಒಬಿಸಿ, ಪಟೇಲ್ / ಕುರ್ಮಿ ಮತಗಳನ್ನು ಸೆಳೆಯುವಲ್ಲಿ ನಿತೀಶ್ ಕುಮಾರ್ ಪ್ರಮುಖ ಪಾತ್ರ ವಹಿಸಬಹುದು ಎಂದು ಎನ್ ಡಿಎ ನಾಯಕರೊಬ್ಬರು ಹೇಳಿದ್ದಾರೆ.

ಏತನ್ಮಧ್ಯೆ, ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಪರಾಸ್ ಅನ್ನು ಸಹ ಸೇರಿಸಿಕೊಳ್ಳಬಹುದು ಎಂದು ಎಲ್ಜೆಪಿ ಪಶುಪತಿ ಪರಾಸ್ ಬಣದ ಮೂಲವು ತಿಳಿಸಿದೆ. ಕೇಂದ್ರ ಸಚಿವರಾದರೆ ಎಲ್​ಜೆಪಿ ಬಣದ ಸಂಸದೀಯ ಪಕ್ಷದ ನಾಯಕರಾಗಿ ತ್ಯಜಿಸುವುದಾಗಿ ಪರಾಸ್ ಈಗಾಗಲೇ ಹೇಳಿದ್ದಾರೆ.

ಹದಿನೈದು ದಿನಗಳ ಹಿಂದೆ ಎನ್‌ಡಿಎ ತನ್ನ ಮೈತ್ರಿ ಪಾಲುದಾರರಿಗೆ ಸರಿಯಾದ “ಪಾಲು” ನೀಡುವ ಬಗ್ಗೆ ಮಾತನಾಡಿದ ಜೆಡಿ (ಯು) ನಾಯಕ ಆರ್.ಸಿ.ಪಿ ಸಿಂಗ್ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದು ನಾವು 1996 ರಿಂದ ಬಿಜೆಪಿಯೊಂದಿಗೆ ಇದ್ದೇವೆ ಮತ್ತು ನಮ್ಮ ಉನ್ನತ ನಾಯಕತ್ವಗಳಿಗೆ ಯಾವುದೇ ಒತ್ತಡ ಇಲ್ಲ. ನಾವು ಕೇಂದ್ರ ಸಚಿವ ಸಂಪುಟಕ್ಕೆ ಸೇರಿದಾಗ ಮತ್ತು ಯಾವಾಗಲೂ ಉತ್ತಮ ಸಮನ್ವಯ ಇರುತ್ತದೆ. ನಾವು ಈಗಾಗಲೇ ಬಿಹಾರದ ಅಧಿಕಾರ ನಡೆಸುವಲ್ಲಿ ಒಟ್ಟಿಗೆ ಇದ್ದೇವೆ ಎಂದಿದ್ದಾರೆ.

ಕೇಂದ್ರದಲ್ಲಿ “ಡಬಲ್ ಎಂಜಿನ್” ಸರ್ಕಾರದ ಮಹತ್ವದ ಬಗ್ಗೆ ಕೇಳಿದಾಗ, “ಇದು ಏಕ-ಎಂಜಿನ್ ಸರ್ಕಾರವಾಗಲಿ ಅಥವಾ ಡಬಲ್ ಎಂಜಿನ್ ಸರ್ಕಾರವಾಗಲಿ, ಬಿಹಾರವು ಹೇಗೆ ಪ್ರಗತಿ ಸಾಧಿಸಬಹುದು ಎಂದು  ಯೋಚಿಸುತ್ತಿದ್ದೇವೆ ಎಂದು ಸಿಂಗ್ ಹೇಳಿದರು. ಸಂಭಾವ್ಯ ಸಚಿವ ಅಭ್ಯರ್ಥಿಗಳ ಹೆಸರಿನ ಬಗ್ಗೆ ಕೇಳಿದಾಗ ಅವರು ನನ್ನ ಹೆಸರು 2017 ರಿಂದ ಕೇಳಿಬರುತ್ತಿದೆ. ಜನರು ಊಹಿಸಲಿ. ನಮ್ಮ ಉನ್ನತ ನಾಯಕರು ಸರಿಯಾದ ಚರ್ಚೆಯ ನಂತರ ಅಂತಹ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದಿದ್ದಾರೆ.

ಹಿರಿಯ ಜೆಡಿಯು ಮುಖಂಡ ಮತ್ತು ಮುಂಗರ್ ಸಂಸದ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್, ಕೇಂದ್ರ ಸಚಿವ ಸ್ಥಾನಕ್ಕೆ ಮತ್ತೊಬ್ಬ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಕ್ಯಾಬಿನೆಟ್ ವಿಸ್ತರಿಸುವುದು ಪ್ರಧಾನಮಂತ್ರಿಯ ವಿವೇಚನೆಗೆ ಬಿಟ್ಟಿದ್ದು. ಯಾವುದೇ ಮಿತ್ರರೊಂದಿಗೆ ಸಮಾಲೋಚನೆ ನಡೆಸುವುದು ಅವರ ವಿವೇಚನೆಯಾಗಿದೆ (ಸಂಭವನೀಯ ವಿಸ್ತರಣೆಯಲ್ಲಿ). ಈಗಿನಂತೆ, ಇದು ಎಲ್ಲಾ ಊಹಾಪೋಹಗಳು ಎಂದು ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ ಜೆಡಿಯುನಲ್ಲಿ ಅಸಮಾಧಾನ: ಶೀಘ್ರ 17 ಶಾಸಕರು ಆರ್​ಜೆಡಿಗೆ ಸೇರ್ಪಡೆ?

ಇದನ್ನೂ ಓದಿ: Explainer: ರಾಮ್ ವಿಲಾಸ್ ಪಾಸ್ವಾನ್ ಸ್ಥಾಪಿಸಿದ ಎಲ್​ಜೆಪಿ ಪಕ್ಷ ಮಗ ಚಿರಾಗ್ ಪಾಸ್ವಾನ್ ಕೈಯಿಂದ ಜಾರಿದ್ದು ಹೇಗೆ?

ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ