AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಕೋಳಗಳ ಬದಲು ಹೂಮಾಲೆ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜೋಡಿಯ ‘ಜೈಲು ಕಲ್ಯಾಣ’

ಜೋಧ್‌ಪುರ ಓಪನ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮುಲಾರಾಮ್ ಮತ್ತು ಸೀಮಾ ಎಂಬ ಕೈದಿಗಳು ಮದುವೆಯಾಗಿದ್ದಾರೆ. ರಾಜಸ್ಥಾನ ಹೈಕೋರ್ಟ್‌ನ ವಿಶೇಷ ಅನುಮತಿಯೊಂದಿಗೆ ಜೈಲಿನಲ್ಲೇ ನಡೆದ ಈ ವಿವಾಹ, ಕೈದಿಗಳ ಸುಧಾರಣೆಗೆ ಮತ್ತು ಎರಡನೇ ಅವಕಾಶ ನೀಡುವ ತೆರೆದ ಜೈಲು ಪರಿಕಲ್ಪನೆಯನ್ನು ಎತ್ತಿಹಿಡಿಯುತ್ತದೆ. ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಈ ಜೋಡಿಗೆ ಇದು ಹೊಸ ಬಾಳಿನ ಭರವಸೆಯಾಗಿದೆ.

ಕೈಕೋಳಗಳ ಬದಲು ಹೂಮಾಲೆ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜೋಡಿಯ 'ಜೈಲು ಕಲ್ಯಾಣ'
ಮದುವೆ
ನಯನಾ ರಾಜೀವ್
|

Updated on: Jul 23, 2026 | 7:23 AM

Share

ಜೈಪುರ, ಜುಲೈ 23: ಸಾಮಾನ್ಯವಾಗಿ ಜೈಲು(Jail) ಎಂದರೆ ಕಟ್ಟುನಿಟ್ಟಿನ ಶಿಸ್ತು, ಎತ್ತರದ ಕಲ್ಲಿನ ಗೋಡೆಗಳು ಹಾಗೂ ತಾವೆಸಗಿದ ಅಪರಾಧಗಳ ಕಹಿ ನೆನಪುಗಳನ್ನು ಬಿಟ್ಟು ಕೈದಿಗಳಿಗೆ ಮತ್ತೇನು ಸಿಗಲು ಸಾಧ್ಯ. ಆದರೆ ಜೋಧ್​ಪುರದ ಮಂಡೋರ್ ಓಪನ್ ಜೈಲಿನಲ್ಲಿ ಜೈಲಾಧಿಕಾರಿಗಳ ಆಜ್ಞೆಯ ಬದಲು ಮದುವೆಯ ಮಂತ್ರಗಳು ಮೊಳಗಿವೆ, ಕೈಕೋಳ ಧರಿಸಿದ್ದ ಕೈಗಳಲ್ಲಿ ಕೈದಿಗಳು ಹೂಮಾಲೆ ವಿನಿಮಯ ಮಾಡಿಕೊಂಡಿದ್ದಾರೆ.

ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮುಲಾರಾಮ್ ಮತ್ತು ಸೀಮಾ ಎಂಬ ಇಬ್ಬರು ಕೈದಿಗಳು, ರಾಜಸ್ಥಾನ ಹೈಕೋರ್ಟ್‌ನ ವಿಶೇಷ ಅನುಮತಿ ಪಡೆದು ಜೈಲಿನ ಅಂಗಳದಲ್ಲೇ ದಂಪತಿಯಾಗಿ ಹೊಸ ಬಾಳಿಗೆ ಪಾದಾರ್ಪಣೆ ಮಾಡಿದ್ದಾರೆ.

ಕತ್ತಲೆಯ ಜೈಲಿನಲ್ಲಿ ಚಿಗುರಿದ ಪ್ರೇಮಕಥೆ

ಮುಲಾರಾಮ್ ಮತ್ತು ಸೀಮಾ ಇಬ್ಬರೂ ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದವರು. ಆದರೆ ಜೈಲಿನಲ್ಲಿ ಅವರ ಉತ್ತಮ ನಡವಳಿಕೆಯನ್ನು ಕಂಡು, ಅವರನ್ನು ಶಿಕ್ಷೆ ತಿದ್ದುಪಡಿಗಾಗಿ ನಿರ್ಮಿಸಲಾದ ‘ಮಂಡೋರ್ ಓಪನ್ ಜೈಲಿಗೆ’ ವರ್ಗಾಯಿಸಲಾಗಿತ್ತು. ಇದೇ ಓಪನ್ ಜೈಲಿನಲ್ಲಿ ಇಬ್ಬರ ನಡುವೆ ಪರಿಚಯವಾಗಿ, ಕಾಲಕ್ರಮೇಣ ಅದು ಪ್ರೇಮವಾಗಿ ಬದಲಾಯಿತು. ಜೈಲಿನ ಕತ್ತಲೆಯಿಂದ ಹೊರಬಂದು ತಮ್ಮ ಜೀವನವನ್ನು ಹೊಸದಾಗಿ ಪುನರ್ನಿರ್ಮಿಸಿಕೊಳ್ಳಲು ನಿರ್ಧರಿಸಿದ ಈ ಜೋಡಿ, ಒಟ್ಟಿಗೆ ಬಾಳುವ ನಿರ್ಧಾರಕ್ಕೆ ಬಂದರು.

ಮತ್ತಷ್ಟು ಓದಿ: ಫೇಸ್​ಬುಕ್​ನಲ್ಲಿ ಸಿಕ್ಕ ಪ್ರೀತಿಗಾಗಿ ವೀಸಾ ಇಲ್ಲದೆ ಪಾಕ್​ಗೆ ಹಾರಿದ್ದ ಯುಪಿ ಯುವಕ, ಹೋದ್ಮೇಲೆ ನೀನ್ಯಾರು ಅಂದ್ಲು, ಆತ ಜೈಲು ಪಾಲು

ಹೈಕೋರ್ಟ್ ಅನುಮತಿ ಮತ್ತು ಅತಿಥಿಗಳಾದ ಜೈಲು ಸಿಬ್ಬಂದಿ

ಕೈದಿಗಳಾಗಿದ್ದರಿಂದ ಇವರ ಮದುವೆಗೆ ನ್ಯಾಯಾಲಯದ ಅನುಮೋದನೆ ಕಡ್ಡಾಯವಾಗಿತ್ತು. ಮಾನವೀಯ ಹಕ್ಕುಗಳು ಹಾಗೂ ಪುನರ್ವಸತಿ ಕಲ್ಪನೆಯನ್ನು ಎತ್ತಿಹಿಡಿದ ರಾಜಸ್ಥಾನ ಹೈಕೋರ್ಟ್, ಅಗತ್ಯ ಪೆರೋಲ್ ನೀಡುವ ಮೂಲಕ ಮದುವೆಗೆ ಅನುಮತಿ ನೀಡಿತು. ಸಪ್ತಪದಿ (ಸಾತ್ ಫೇರೆ) ತುಳಿಯುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಸಾಮಾನ್ಯ ಮದುವೆಗಳಂತೆ ಭಾರಿ ಜನಸ್ತೋಮವಿರಲಿಲ್ಲ. ಜೈಲಾಧಿಕಾರಿಗಳು, ಪೋಲಿಸ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 21 ಜನರಷ್ಟೇ ಈ ಅಪರೂಪದ ಮದುವೆಗೆ ಸಾಕ್ಷಿಯಾದರು. ವಿವಾಹದ ವಿಧಿವಿಧಾನಗಳು ಮುಗಿಯುತ್ತಿದ್ದಂತೆ ಜೈಲು ಸಿಬ್ಬಂದಿಯೇ ಬಂಧುಗಳಂತೆ ದಂಪತಿಯನ್ನು ಆಶೀರ್ವದಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ತೆರೆದ ಜೈಲು ಎಂದರೇನು?

ಸಾಮಾನ್ಯ ಜೈಲುಗಳಂತೆ ಓಪನ್ ಜೈಲುಗಳಲ್ಲಿ ಬಂದಿಖಾನೆಗಳಿರುವುದಿಲ್ಲ. ಉತ್ತಮ ನಡವಳಿಕೆ ತೋರುವ ಕೈದಿಗಳಿಗೆ ಸಾಮಾಜಿಕ ಹೊಣೆಗಾರಿಕೆ, ಶಿಸ್ತು ಮತ್ತು ಜೀವನೋಪಾಯದ ತರಬೇತಿ ನೀಡಿ, ಅವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರಲು ಸಹಾಯ ಮಾಡಲಾಗುತ್ತದೆ. ಕೈದಿಗಳನ್ನು ಕೇವಲ ಅವರು ಮಾಡಿದ ಅಪರಾಧದಿಂದಷ್ಟೇ ನೋಡದೆ, ಅವರಿಗೆ ತಿದ್ದಿಕೊಳ್ಳಲು ಎರಡನೇ ಅವಕಾಶ ನೀಡುವುದು ಈ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ.

ಎರಡನೇ ಅವಕಾಶದ ಸಂಕೇತ

ಮದುವೆಯ ಸಂಭ್ರಮ ಮುಗಿದ ನಂತರ, ದಂಪತಿ ತಮ್ಮ ಜೀವಾವಧಿ ಶಿಕ್ಷೆಯನ್ನು ತೆರೆದ ಜೈಲಿನ ನಿಯಮಗಳಡಿಯಲ್ಲೇ ಮುಂದುವರರೆಸಲಿದ್ದಾರೆ. ಆದರೆ ಈಗ ಅವರು ಪ್ರತ್ಯೇಕ ಕೈದಿಗಳಲ್ಲ, ಬದಲಿಗೆ ಪರಸ್ಪರ ಜೋಡಿಯಾಗಿ ಶಿಕ್ಷೆ ಅನುಭವಿಸಲಿದ್ದಾರೆ. ಜೈಲಿನ ಗೋಡೆಗಳ ಮಧ್ಯೆ ಶಪಥ ಸ್ವೀಕರಿಸಿದ ಈ ಜೋಡಿಗೆ ಇದು ಕೇವಲ ಮದುವೆಯಲ್ಲ, ಬದಲಾಗಿ ಭರವಸೆ, ಘನತೆ ಮತ್ತು ಜೀವನವನ್ನು ಮರುರೂಪಿಸಿಕೊಳ್ಳುವ ಅಪರೂಪದ ಎರಡನೇ ಅವಕಾಶವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ