AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಶವಪೆಟ್ಟಿಗೆಯಲ್ಲಿ ಮಲಗಿ ಊರು ಬಿಟ್ಟ ವ್ಯಕ್ತಿ, ಸಿಕ್ಕಿಬಿದ್ದಿದ್ಹೇಗೆ?

ಚೀನಾದಲ್ಲಿ ಕುಡಿದು ವಾಹನ ಚಲಾಯಿಸಿದ ವ್ಯಕ್ತಿ ಜೈಲು ಶಿಕ್ಷೆ ತಪ್ಪಿಸಲು, ಶವಪೆಟ್ಟಿಗೆಯಲ್ಲಿ ಸತ್ತಂತೆ ನಟಿಸಿ ನೂರಾರು ಕಿ.ಮೀ. ಪ್ರಯಾಣಿಸಿದ್ದ. ಕುಟುಂಬದವರ ಸಹಾಯದಿಂದ ಸಾವಿನ ನಾಟಕವಾಡಿದರೂ, ಪೊಲೀಸರ ತನಿಖೆಯಿಂದ ಆತನ ನಕಲಿ ಸಾವು ಬಯಲಾಯಿತು. ಕೊನೆಗೆ ಪೊಲೀಸರು ಆತನನ್ನು ಬಂಧಿಸಿ, ಜೈಲು ಶಿಕ್ಷೆ ವಿಧಿಸಿದರು. ಕುಟುಂಬದ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಶವಪೆಟ್ಟಿಗೆಯಲ್ಲಿ ಮಲಗಿ ಊರು ಬಿಟ್ಟ ವ್ಯಕ್ತಿ, ಸಿಕ್ಕಿಬಿದ್ದಿದ್ಹೇಗೆ?
ಶವ ಪೆಟ್ಟಿಗೆ
ನಯನಾ ರಾಜೀವ್
|

Updated on: Jul 22, 2026 | 2:05 PM

Share

ಬೀಜಿಂಗ್, ಜುಲೈ 22: ಕುಡಿದು ವಾಹನ ಚಲಾಯಿಸಿದ್ದ ವ್ಯಕ್ತಿ ಜೈಲು(Jail) ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಚೀನಾದ ವ್ಯಕ್ತಿಯೊಬ್ಬ ತಾನೇ ಸತ್ತಂತೆ ನಟಿಸಿ, ಶವ ಪೆಟ್ಟಿಗೆಯೊಳಗೆ ಮಲಗಿ ನೂರಾರು ಕಿ.ಮೀ ದೂರ ಅದರಲ್ಲಿ ಹೋಗಿ ಅಲ್ಲಿಂದ ಕಾಲ್ಕಿತ್ತಿರುವ ಘಟನೆ ಹೆನಾನ್ ಪ್ರಾಂತ್ಯದ ಅನ್ಯಾಂಗ್​ನಲ್ಲಿ ನಡೆದಿದೆ. ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಈಗ ಸಖತ್ ವೈರಲ್ ಆಗಿದೆ.

ಈ ವ್ಯಕ್ತಿ ಹಿಂದೆ ಎರಡು ಬಾರಿ ಚಾಲನಾ ಪರವಾನಗಿ ಇಲ್ಲದೆ ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದ. ಕಳೆದ ವರ್ಷದ ಜನವರಿಯಲ್ಲಿ ಮೂರನೇ ಬಾರಿಗೆ ಮದ್ಯಪಾನ ಮಾಡಿ ವಾಹನ ಚಲಾಯಿಸುವಾಗ ಪೊಲೀಸರು ಈತನನ್ನು ಬಂಧಿಸಿದ್ದರು. ಚೀನಾದ ಕಠಿಣ ಕಾನೂನಿನ ಪ್ರಕಾರ, ಕುಡಿದು ವಾಹನ ಚಲಾಯಿಸುವುದು ಗುರುತರ ಅಪರಾಧವಾಗಿದ್ದು, 6 ತಿಂಗಳ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲಾಗುತ್ತದೆ. ಸಾಲದ ಸುಳಿಯಲ್ಲಿದ್ದ ಈ ವ್ಯಕ್ತಿ ಮತ್ತೊಮ್ಮೆ ಜೈಲು ಶಿಕ್ಷೆಯಾದರೆ ತನ್ನ ಜೀವನವೇ ನಾಶವಾಗುತ್ತದೆ ಎಂದು ಹೆದರಿ ಈ ಯೋಜನೆ ರೂಪಿಸಿದ್ದ.

ಸ್ವತಃ ಶವಪೆಟ್ಟಿಗೆಯನ್ನು ಮುಂಚಿತವಾಗಿಯೇ ಖರೀದಿಸಿದ ಈತ, ಮನೆಯಲ್ಲಿ ಮಾತ್ರೆಗಳನ್ನು ಸೇವಿಸಿ ಸತ್ತಂತೆ ನಟಿಸಲು ಖಾಲಿ ಔಷಧ ಬಾಟಲಿಗಳನ್ನು ಹರಡಿದ್ದ. ದೇಹ ತಣ್ಣಗಾಗಿಸಲು ಕೂಲಿಂಗ್ ಉಪಕರಣಗಳನ್ನು ಬಳಸಿ, ಉಸಿರು ಬಿಗಿಹಿಡಿದು ಶವಪೆಟ್ಟಿಗೆಯಲ್ಲಿ ಮಲಗಿದ್ದ.

ಆತನ ಮುಖ ವಿರೂಪಗೊಂಡಿದೆ ಎಂದು ಹೇಳಿ ತಾಯಿ ಮತ್ತು ಅಜ್ಜಿ ಮುಖವನ್ನು ಸಂಪೂರ್ಣವಾಗಿ ಮುಚ್ಚಿದ್ದರು. ರಾತ್ರಿಯಾಗುತ್ತಿದ್ದಂತೆ ಯಾರೂ ನೋಡದಂತೆ ಆತನನ್ನು ರಹಸ್ಯವಾಗಿ ಎಬ್ಬಿಸಿ, ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯಕ್ಕೆ ಕಳುಹಿಸಿಕೊಟ್ಟರು. ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ತಿಳಿದು ಪೊಲೀಸರು ತನಿಖೆಗೆ ಬಂದಾಗ ಅನುಮಾನ ಹುಟ್ಟಿತ್ತು.

ಮತ್ತಷ್ಟು ಓದಿ: ಅರೆಸ್ಟ್​​ ಆಗಿದ್ದ ಆರೋಪಿ 6 ಗಂಟೆಯಲ್ಲೇ ಪೊಲೀಸ್​ ಠಾಣೆಯಿಂದ ಎಸ್ಕೇಪ್! ನಿರ್ಲಕ್ಷ್ಯ ಆರೋಪ

ವ್ಯಕ್ತಿ ಸತ್ತಾಗ ಕುಟುಂಬದವರು ಯಾವುದೇ ವೈದ್ಯರಿಗಾಗಲಿ, ತುರ್ತು ಆಂಬ್ಯುಲೆನ್ಸ್‌ಗಾಗಲಿ ಕರೆ ಮಾಡಿರಲಿಲ್ಲ. ಯಾವುದೇ ಅಧಿಕೃತ ಮರಣ ಪ್ರಮಾಣಪತ್ರ ಅಥವಾ ದಹನ ದಾಖಲೆ ಇರಲಿಲ್ಲ. ತಾಯಿ ಮತ್ತು ಅಜ್ಜಿಯನ್ನು ಹೊರತುಪಡಿಸಿ ಬೇರೆ ಯಾರೂ ಶವವನ್ನು ನೋಡಿರಲಿಲ್ಲ. ಪೋಲಿಸರು ಸಿಸಿಟಿವಿ ದೃಶ್ಯಾವಳಿ, ಬ್ಯಾಂಕ್ ವಹಿವಾಟು ಹಾಗೂ ಫೋನ್ ಡೇಟಾವನ್ನು ಆಧರಿಸಿ ತನಿಖೆ ನಡೆಸಿದಾಗ ಆತ ಜೀವಂತವಾಗಿರುವುದು ಖಾತ್ರಿಯಾಯಿತು.

ಸಿಕ್ಕಿಬಿದ್ದ ಆರೋಪಿ: ತಾಯಿ-ಅಜ್ಜಿ ವಿರುದ್ಧವೂ ಕ್ರಿಮಿನಲ್ ಕೇಸ್ ದೀರ್ಘ ಶೋಧದ ನಂತರ ಈ ವರ್ಷದ ಏಪ್ರಿಲ್‌ನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದರು. ನ್ಯಾಯಾಲಯ ಆತನಿಗೆ 5 ತಿಂಗಳ ಜೈಲು ಶಿಕ್ಷೆ ಹಾಗೂ 20,000 ಯುವಾನ್ ( ಅಂದರೆ ಸುಮಾರು 2.35 ಲಕ್ಷ ರೂ.) ದಂಡ ವಿಧಿಸಿದೆ.

ಅಷ್ಟೇ ಅಲ್ಲದೆ, ಅಪರಾಧಿಗೆ ರಕ್ಷಣೆ ನೀಡಿ, ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಜೂನ್ 11 ರಂದು ಆತನ ತಾಯಿ ಮತ್ತು ಅಜ್ಜಿಯ ವಿರುದ್ಧವೂ ಕ್ರಿಮಿನಲ್ ತನಿಖೆ ಆರಂಭಿಸಲಾಗಿದೆ. “ಸಣ್ಣ ತಪ್ಪನ್ನು ಮುಚ್ಚಿಡಲು ಹೋಗಿ ಇಡೀ ಕುಟುಂಬವೇ ಜೈಲು ಸೇರುವಂತಾಯಿತು” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ