ಮಹಾತ್ಮ ಗಾಂಧಿ ಉಡುಗೊರೆಯಾಗಿ ನೀಡಿದ್ದ ರಾಷ್ಟ್ರಧ್ವಜವನ್ನು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾರೆ ಮಸ್ಸೂರಿಯ ಈ ವೈದ್ಯರು

ಈ ಹಿಂದೆ ನಾವು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡುತ್ತಿದ್ದೆವು, ಆದರೆ ಈ ವರ್ಷ ‘ಹರ್ ಘರ್ ತಿರಂಗ’ದಿಂದಾಗಿ ಈ ಅಮೂಲ್ಯ ಧ್ವಜವನ್ನು ಮನೆಯಲ್ಲಿ ಹಾರಿಸಲು ನಮಗೆ ಖುಷಿಯಾಗಿದೆ ಎಂದು ವೇಣು ಸನನ್ ಹೇಳಿದರು.

ಮಹಾತ್ಮ ಗಾಂಧಿ ಉಡುಗೊರೆಯಾಗಿ ನೀಡಿದ್ದ ರಾಷ್ಟ್ರಧ್ವಜವನ್ನು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾರೆ ಮಸ್ಸೂರಿಯ ಈ ವೈದ್ಯರು
ತ್ರಿವರ್ಣ ದ್ವಜವನ್ನು ತೋರಿಸುತ್ತಿರುವ ಡಾ ಸುನಿಲ್ ಸನನ್ Image Credit source: hindustantimes
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 19, 2022 | 7:45 AM

75 ನೇ ಸ್ವಾತಂತ್ರ್ಯ ದಿನಾಚರಣೆಯ (75th Independence Day) ಪೂರ್ವಭಾವಿಯಾಗಿ ಆಗಸ್ಟ್ 13 ರಂದು ಪ್ರಾರಂಭವಾದ ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗ’  (Har Ghar Tiranga)ಅಭಿಯಾನದ ಯಶಸ್ಸು ಆಗಿದ್ದರೂ  ಮನೆಗಳಲ್ಲಿ ಹಾರಿಸಲಾದ ಧ್ವಜಗಳ ವಿಲೇವಾರಿ ಮತ್ತು ಸಂರಕ್ಷಣೆ ಅನೇಕರನ್ನು ಚಿಂತೆಗೀಡು ಮಾಡಿದೆ. ಆದರೆ ದೆಹಲಿ ಮೂಲದ ಕುಟುಂಬವೊಂದು ಮಹಾತ್ಮ ಗಾಂಧೀಜಿಯವರಿಂದ ನೇರವಾಗಿ ಉಡುಗೊರೆಯಾಗಿ ಪಡೆದ ಖಾದಿ ತ್ರಿವರ್ಣ ಧ್ವಜವನ್ನು ವಂಶಪಾರಂಪರ್ಯವಾಗಿ ಸಂರಕ್ಷಿಸುವುದನ್ನು ಕಾಯಕ ಮಾಡಿದೆ. ಇಬ್ಬರು ವೈದ್ಯರು ವರ್ಷಗಳಿಂದ ಈ ಧ್ವಜವನ್ನು ಕಾಪಾಡಿಕೊಂಡು ಬಂದಿದ್ದಾರೆ.ಗಾಂಧಿಯವರ ಕಟ್ಟಾ ಅನುಯಾಯಿಗಳಾಗಿದ್ದ ವ್ಯಕ್ತಿಯೊಬ್ಬರು ಗಾಂಧಿ ಮಸ್ಸೂರಿಗೆ ಭೇಟಿ ನೀಡಿದಾಗಲೆಲ್ಲಾ ಅವರ ಪ್ರಾರ್ಥನಾ ಸಭೆಗಳನ್ನು ಭಾಗವಹಿಸುತ್ತಿದ್ದರು. ಆಗ ಗಾಂಧಿ ಅವರಿಗೆ ನೀಡಿದ ಉಡುಗೊರೆಯ ಆಮೇಲೆ ಈ ವೈದ್ಯರ ಜೀವನದ ಭಾಗವಾಯಿತು. ವೃತ್ತಿಯಲ್ಲಿ ವೈದ್ಯರಾದ ವೇಣು ಮತ್ತು ಸುನೀಲ್ ಸನನ್ ಮಸ್ಸೂರಿ ಸಮೀಪದ ಹಳ್ಳಿಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ಟೋಬರ್ 1942 ರಲ್ಲಿ ಸಿಲ್ವರ್ಟನ್ ಎಸ್ಟೇಟ್ ಅನ್ನು ಖರೀದಿಸಿದ ಲಾಲಾ ಮುಕುಂದ್ ಲಾಲ್ ಮತ್ತು ಜೈಪ್ರಕಾಶ್ ಅಗರ್ವಾಲ್ ಅವರ ಕುಟುಂಬ  ನಮಗೆ ನೀಡಿದ ಮಹಾತ್ಮ ಗಾಂಧಿಯವರ ಅಮೂಲ್ಯವಾದ ಉಡುಗೊರೆಯನ್ನು ಸಂರಕ್ಷಿಸಿದ್ದಕ್ಕಾಗಿ ಹೆಮ್ಮೆಪಡುತ್ತೇವೆ. ಗಾಂಧಿಯವರು 1946 ರಲ್ಲಿ ತಮ್ಮ ಪ್ರಾರ್ಥನಾ ಸಭೆಗಳನ್ನು ನಡೆಸಿ ಜನರನ್ನು ಉದ್ದೇಶಿಸಿ ಮಾತನಾಡಿದ್ದು ಸಿಲ್ವರ್ಟನ್ ಎಸ್ಟೇಟ್ ನಲ್ಲಾಗಿತ್ತು.

ಈ ಬಗ್ಗೆ ನೆನಪಿನ ಸುರುಳಿ ಬಿಚ್ಚಿದ ಸುನಿಲ್ ಸನನ್, ಮಸ್ಸೂರಿಯಲ್ಲಿ ಸಿಲ್ವರ್ಟನ್ ಎಸ್ಟೇಟ್ ಖರೀದಿಸಿದ್ದ ಮಹಾತ್ಮ ಗಾಂಧಿಯವರ ಕಟ್ಟಾ ಅನುಯಾಯಿ ಜೈಪ್ರಕಾಶ್ ಅಗರ್ವಾಲ್ ಅವರ ಕುಟುಂಬಕ್ಕೆ ವೈದ್ಯಕೀಯ ನೆರವು ನೀಡಿದ್ದೇನೆ. ಮೇ 1971 ರಂದು ಅಗರ್ವಾಲ್ ಅವರ ಮರಣದ ನಂತರ, ಅವರ ಪತ್ನಿ ಸ್ವರಾಜ್ ದೇವಿ ಅವರು 1947-48 ರಲ್ಲಿ ದೆಹಲಿಯಲ್ಲಿ ಮಹಾತ್ಮ ಗಾಂಧಿಯವರು ತಮ್ಮ ಪತಿಗೆ ಉಡುಗೊರೆಯಾಗಿ ನೀಡಿದ ಖಾದಿ ರಾಷ್ಟ್ರಧ್ವಜವನ್ನು ನನಗೆ ಹಸ್ತಾಂತರಿಸಿದರು. ತ್ರಿವರ್ಣ ಧ್ವಜದ ಬಗ್ಗೆ ನೀವು ದೇಶಭಕ್ತಿ ಮತ್ತು ಆಳವಾದ ಗೌರವವನ್ನು ಹೊಂದಿದ್ದೀರಿ. ನೀವು ಅದನ್ನು ಸಂಪೂರ್ಣ ಗೌರವದಿಂದ ಸುರಕ್ಷಿತವಾಗಿರಿಸುತ್ತೀರಿ ಎಂದು ನನಗೆ ಖಾತ್ರಿಯಿದೆ ಎಂದು 1994 ರಲ್ಲಿ ನನಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸುವಾಗ ಸ್ವರಾಜ್ ದೇವಿ ಹೇಳಿದ್ದರು ಎನ್ನುತ್ತಾರೆ ಸುನಿಲ್.

ಈ ಹಿಂದೆ ನಾವು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡುತ್ತಿದ್ದೆವು, ಆದರೆ ಈ ವರ್ಷ ‘ಹರ್ ಘರ್ ತಿರಂಗ’ದಿಂದಾಗಿ ಈ ಅಮೂಲ್ಯ ಧ್ವಜವನ್ನು ಮನೆಯಲ್ಲಿ ಹಾರಿಸಲು ನಮಗೆ ಖುಷಿಯಾಗಿದೆ ಎಂದು ವೇಣು ಸನನ್ ಹೇಳಿದರು.

ಮಹಾತ್ಮ ಗಾಂಧಿಯವರು 1929 ರಲ್ಲಿ ಮತ್ತು 1946 ರಲ್ಲಿ ಮಸ್ಸೂರಿಗೆ ಭೇಟಿ ನೀಡಿದ್ದರು. ಅವರು 1946 ರಲ್ಲಿ ಮೇ 28-ಜೂನ್ 8 ರವರೆಗೆ ಬಿರ್ಲಾ ಹೌಸ್‌ನಲ್ಲಿ ತಂಗಿದ್ದರು, ಸಿಲ್ವರ್ಟನ್ ಹೋಟೆಲ್‌ನಲ್ಲಿ ಆಗಾಗ್ಗೆ ಪ್ರಾರ್ಥನೆಗಳನ್ನು ನಡೆಸಿದ್ದರು. ಮಸ್ಸೂರಿಯಲ್ಲಿ ಅವರನ್ನು ಭೇಟಿಯಾಗಲು ಬಂದಿದ್ದ ದೆಹಲಿಯ ಕಟ್ಟಾ ಅನುಯಾಯಿಗಳನ್ನು ಅವರು ಭೇಟಿ ಮಾಡಿದ್ದರು ಎಂದು ಮಸ್ಸೂರಿಯ ಇತಿಹಾಸಕಾರರಾದ ಗೋಪಾಲ್ ಭಾರದ್ವಾಜ್ ಹೇಳಿದ್ದಾರೆ. “ಹರ್ ಘರ್ ತಿರಂಗ ಅಭಿಯಾನವು ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ವಿಶೇಷವಾಗಿ ನಾವು ನಮ್ಮ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ ಅಸಂಖ್ಯಾತ ಜನರು ಮಾಡಿದ ತ್ಯಾಗವನ್ನು ದೇಶವಾಸಿಗಳಿಗೆ ನೆನಪಿಸುವ ಮಾರ್ಗವಾಗಿದೆ ಎಂದು ಸುನಿಲ್ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಯೊಂದು ಪ್ರಮುಖ ಘಟನೆಯ ನಂತರ, ನಾವು ಭಾರತದ ಧ್ವಜ ಸಂಹಿತೆಯಲ್ಲಿ ವ್ಯಾಖ್ಯಾನಿಸಲಾದ ರೀತಿಯಲ್ಲಿ ರಾಷ್ಟ್ರಧ್ವಜವನ್ನು ಮಡಚಿ ನಮ್ಮ ಸೇಫ್‌ನಲ್ಲಿರುವ ಫೋಲ್ಡರ್‌ನಲ್ಲಿ ಇರಿಸುತ್ತೇವೆ, ಮುಂದಿನ ವರ್ಷ ಮಾತ್ರ ಅದನ್ನು ಹೊರತೆಗೆಯುವುದು ಅಂತಾರೆ ಈ ವೈದ್ಯರು.

ರಾಷ್ಟ್ರಧ್ವಜವನ್ನು ಬಳಸಿದ ನಂತರ ಮುಂದಿನ ವರ್ಷ ರಾಷ್ಟ್ರೀಯ ಮಹತ್ವದ ಕಾರ್ಯಕ್ರಮಗಳ ಸಂದರ್ಭದಲ್ಲಿ ಅದನ್ನು ಬಳಸಿಕೊಳ್ಳುವ ರೀತಿಯಲ್ಲಿ ಸಂರಕ್ಷಿಸುವುದು ನಮ್ಮ ಕರ್ತವ್ಯ. ದೇಶಭಕ್ತಿಯ ಉತ್ಸಾಹವಿದ್ದರೆ ಅದನ್ನು ಪೂರ್ಣ ಗೌರವದಿಂದ ಮಾಡಬಹುದು ಎಂಬುದಕ್ಕೆ ಸನೋನ್‌ಗಳು ಧ್ವಜವನ್ನು ಸಂರಕ್ಷಿಸಿದ ರೀತಿಯೇ ಉದಾಹರಣೆ ಎಂದು ಮಸ್ಸೂರಿ ನಿವಾಸಿ ವಿಜಯ್ ಪ್ರಕಾಶ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.  ಏತನ್ಮಧ್ಯೆ, ಮಸ್ಸೂರಿ ಮುನ್ಸಿಪಲ್ ಬೋರ್ಡ್ ಭಾರತದ ಧ್ವಜ ಸಂಹಿತೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ವ್ಯಾಪಾರ ಸಮುದಾಯದಿಂದ ತಮ್ಮ ಘಟಕಗಳಲ್ಲಿ ಬಳಸಿದ ಬಾವುಟ ಸಂಗ್ರಹಿಸಲು ಪ್ರಾರಂಭಿಸಿದೆ.

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು