ನಿಜ್ಜರ್ ಹತ್ಯೆಗೆ ಅಮಿತ್ ಶಾ, ಜೈಶಂಕರ್ ಮತ್ತು ಸಂಜಯ್ ವರ್ಮಾ ಕಾರಣ ಎಂದು ಆರೋಪ; ಖಲಿಸ್ತಾನಿ ಉಗ್ರ ಗುರುಪತವಂತ್ ಪನ್ನುನಿಂದ ಭಾರತಕ್ಕೆ ಬೆದರಿಕೆ

ಅಮಿತ್ ಶಾ, ಎಸ್ ಜೈಶಂಕರ್ ಮತ್ತು ಸಂಜಯ್ ವರ್ಮಾ ಅವರ ಫೋಟೊಗಳಿರುವ ಪೋಸ್ಟರ್ ಒಂದನ್ನು ಪನ್ನು ಬಿಡುಗಡೆ ಮಾಡಿದ್ದಾನೆ. ಪೋಸ್ಟರ್ ಮೇಲೆ ನಿಜ್ಜರ್ ಫೋಟೋದ ಕೆಳಗೆ ಮೂವರ ಫೋಟೋ ಇದ್ದು, ವಾಟೆಂಡ್ ಎಂದು ಬರೆಯಲಾಗಿದೆ.

ನಿಜ್ಜರ್ ಹತ್ಯೆಗೆ ಅಮಿತ್ ಶಾ, ಜೈಶಂಕರ್ ಮತ್ತು ಸಂಜಯ್ ವರ್ಮಾ ಕಾರಣ ಎಂದು ಆರೋಪ; ಖಲಿಸ್ತಾನಿ ಉಗ್ರ ಗುರುಪತವಂತ್ ಪನ್ನುನಿಂದ ಭಾರತಕ್ಕೆ ಬೆದರಿಕೆ
ಗುರುಪತವಂತ್ ಪನ್ನು

Updated on: Jul 18, 2023 | 8:14 PM

ದೆಹಲಿ ಜುಲೈ18: ಸಿಖ್ಖರು ಶಸ್ತ್ರಾಸ್ತ್ರಗಳನ್ನು ಹಿಡಿಯುವುದನ್ನು ಇನ್ನೂ ಮರೆತಿಲ್ಲ ಎಂದು ಸಿಖ್ ಫಾರ್ ಜಸ್ಟಿಸ್ (SFJ) ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ್ ಪನ್ನು (Gurpatwant singh pannu) ಮತ್ತೊಮ್ಮೆ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ. ಇಷ್ಟೇ ಅಲ್ಲ, ಕೆನಡಾದಲ್ಲಿ ಹತನಾದ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಕೆನಡಾದಲ್ಲಿರುವ ಹೈಕಮಿಷನರ್ ಸಂಜಯ್ ವರ್ಮಾ ಅವರೇ ಕಾರಣ ಎಂದು ಪನ್ನು ಆರೋಪಿಸಿದ್ದಾನೆ.

$1.25 ಲಕ್ಷ ಬಹುಮಾನ ಘೋಷಣೆ

ಅಮಿತ್ ಶಾ, ಎಸ್ ಜೈಶಂಕರ್ ಮತ್ತು ಸಂಜಯ್ ವರ್ಮಾ ಅವರ ಫೋಟೊಗಳಿರುವ ಪೋಸ್ಟರ್ ಒಂದನ್ನು ಪನ್ನು ಬಿಡುಗಡೆ ಮಾಡಿದ್ದಾನೆ. ಪೋಸ್ಟರ್ ಮೇಲೆ ನಿಜ್ಜರ್ ಫೋಟೋದ ಕೆಳಗೆ ಮೂವರ ಫೋಟೋ ಇದ್ದು, ವಾಟೆಂಡ್ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಪ್ರತಿಪಕ್ಷಗಳಿಗೆ ಕುಟುಂಬವೇ ಮೊದಲು, ದೇಶ ಏನೂ ಅಲ್ಲ: ಪ್ರಧಾನಿ ಮೋದಿ ವಾಗ್ದಾಳಿ

ಈ ಬಗ್ಗೆ ಮಾಹಿತಿ ನೀಡಿದವರಿಗೆ 1.25 ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಪನ್ನು ಹೇಳಿದ್ದಾನೆ. ಅಲ್ಲದೆ ಈ ಮೂವರು ಖಲಿಸ್ತಾನಿಗಳ ಗುರಿಯಲ್ಲಿದ್ದಾರೆ, ಬುಲೆಟ್‌ಗೆ ಬುಲೆಟ್‌ನಿಂದಲೇ ಉತ್ತರ ನೀಡಲಾಗುವುದು ಎಂದು ಆತ ಬೆದರಿಕೆಯೊಡ್ಡಿದ್ದಾನೆ.ಕಳೆದ 15 ದಿನಗಳಲ್ಲಿ ಎರಡು ಬಾರಿ ವಿಡಿಯೊ ಬಿಡುಗಡೆ ಮಾಡಿ ಬೆದರಿಕೆ ಹಾಕಿದ್ದಾನೆ ಈತ. ಏತನ್ಮಧ್ಯೆ ಜುಲೈ 16 ರಂದು ಜನಾಭಿಪ್ರಾಯ ಸಂಗ್ರಹಿಸುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ ಎಂದು ಟಿವಿ9 ಪಂಜಾಬಿ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Tue, 18 July 23