Kolkata doctor murder: ಒಂದೇ ರಾತ್ರಿಯಲ್ಲಿ ಎಲ್ಲ ಕನಸುಗಳು ಛಿದ್ರವಾಗಿಬಿಟ್ಟಿತು; ಸಂದರ್ಶನದಲ್ಲಿ ಕಣ್ಣೀರು ಹಾಕಿದ ವೈದ್ಯೆಯ ಅಪ್ಪ
ಆಕೆ ಡಾಕ್ಟರ್ ಆಗುವುದಕ್ಕೆ ಸಿಕ್ಕಾಪಟ್ಟೆ ಪರಿಶ್ರಮ ಪಟ್ಟಿದ್ದಳು. ಅದಕ್ಕಾಗಿ ಅವಳು ಓದುತ್ತಲೇ ಇದ್ದಳು. ಒಂದೇ ರಾತ್ರಿಯಲ್ಲಿ ನಮ್ಮೆಲ್ಲ ಕನಸುಗಳು ಭಗ್ನವಾಗಿವೆ. ನಾವು ಅವಳನ್ನು ಕೆಲಸ ಮಾಡಲು ಕಳುಹಿಸಿದ್ದೇವೆ, ಆಸ್ಪತ್ರೆಯು ಅವಳ ದೇಹವನ್ನು ನಮಗೆ ನೀಡಿತು. ನಮ್ಮ ಪಾಲಿಗೆ ಎಲ್ಲಾ ಮುಗಿದಿದೆ. ನನ್ನ ಮಗಳು ಹಿಂತಿರುಗಿ ಬರಲಾರಳು. ನಾನು ಆಕೆಯ ಮಾತುಗಳನ್ನಾಗಲೀ ನಗುವನ್ನಾಗಲೀ ಕೇಳಲಾರೆ. ನಾನು ಈಗ ಮಾಡಬಹುದಾದು ಒಂದೇ ಸಂಗತಿ ಎಂದರೆ ಅವಳಿಗೆ ನ್ಯಾಯ ಒದಗಿಸಿಕೊಡುವುದು ಎಂದು ವೈದ್ಯೆಯ ಅಪ್ಪ ಹೇಳಿದ್ದಾರೆ.
ಕೋಲ್ಕತ್ತಾ ಆಗಸ್ಟ್ 21: ಕೋಲ್ಕತ್ತಾದ (Kolkata Doctor Death) ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿರಾಮದ ವೇಳೆ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ 31 ವರ್ಷದ ಟ್ರೈನಿ ವೈದ್ಯೆಯ (Kolkata doctor rape-murder) ತಂದೆ ತನ್ನ ಮಗಳ ಬಗ್ಗೆ ನೆನೆದು ಕಣ್ಣೀರು ಹಾಕಿದ್ದಾರೆ. ದಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ ಅವರು, ತಾನು ಬಡ ಕುಟುಂಬಕ್ಕೆ ಸೇರಿದ್ದು, ಮಗಳನ್ನು ತುಂಬಾ ಕಷ್ಟಪಟ್ಟು ಬೆಳೆಸಿದ್ದೇನೆ ಎಂದು ಹೇಳಿದ್ದಾರೆ. “ಆಕೆ ಡಾಕ್ಟರ್ ಆಗುವುದಕ್ಕೆ ಸಿಕ್ಕಾಪಟ್ಟೆ ಪರಿಶ್ರಮ ಪಟ್ಟಿದ್ದಳು. ಅದಕ್ಕಾಗಿ ಅವಳು ಓದುತ್ತಲೇ ಇದ್ದಳು. ಒಂದೇ ರಾತ್ರಿಯಲ್ಲಿ ನಮ್ಮೆಲ್ಲ ಕನಸುಗಳು ಭಗ್ನವಾಗಿವೆ. ನಾವು ಅವಳನ್ನು ಕೆಲಸ ಮಾಡಲು ಕಳುಹಿಸಿದ್ದೇವೆ, ಆಸ್ಪತ್ರೆಯು ಅವಳ ದೇಹವನ್ನು ನಮಗೆ ನೀಡಿತು. ನಮ್ಮ ಪಾಲಿಗೆ ಎಲ್ಲಾ ಮುಗಿದಿದೆ.
“ನನ್ನ ಮಗಳು ಹಿಂತಿರುಗಿ ಬರಲಾರಳು. ನಾನು ಆಕೆಯ ಮಾತುಗಳನ್ನಾಗಲೀ ನಗುವನ್ನಾಗಲೀ ಕೇಳಲಾರೆ. ನಾನು ಈಗ ಮಾಡಬಹುದಾದು ಒಂದೇ ಸಂಗತಿ ಎಂದರೆ ಅವಳಿಗೆ ನ್ಯಾಯ ಒದಗಿಸಿಕೊಡುವುದು ಎಂದು ಅವರು ಹೇಳಿದ್ದಾರೆ.
ಆಗಸ್ಟ್ 9 ರಂದು ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆಯ ಶವ ಪತ್ತೆಯಾಗಿತ್ತು. ಮರುದಿನ ಅಪರಾಧಕ್ಕೆ ಸಂಬಂಧಿಸಿದಂತೆ ಸಂಜೋಯ್ ರಾಯ್ ಎಂಬ ನಾಗರಿಕ ಸ್ವಯಂಸೇವಕನನ್ನು ಬಂಧಿಸಲಾಯಿತು. ನಂತರ, ಕಲ್ಕತ್ತಾ ಹೈಕೋರ್ಟ್ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಿತು.
ಆಗಸ್ಟ್ 9 ರಂದು ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯರ ಅತ್ಯಾಚಾರ ಮತ್ತು ಕೊಲೆ, ಮತ್ತು ನಂತರದ ಅಧಿಕಾರಿಗಳು ಪ್ರಕರಣವನ್ನು ನಿಭಾಯಿಸಿದ್ದು, ಭಾರತದಾದ್ಯಂತ ವೈದ್ಯರ ಪ್ರತಿಭಟನೆಗಳು ಮತ್ತು ಮುಷ್ಕರಗಳಿಗೆ ಕಾರಣವಾಯಿತು. ವೈದ್ಯಕೀಯ ವೃತ್ತಿ ತನ್ನ ಏಕೈಕ ಮಗುವಿನ ಬಹುದಿನದ ಕನಸು ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ. 31 ನೇ ವಯಸ್ಸಿನಲ್ಲಿ, ಆಕೆ ಭಾರತದ ವೈದ್ಯಕೀಯ ಕಾಲೇಜುಗಳಲ್ಲಿನ ಸರಿಸುಮಾರು 107,000 ಸ್ಥಾನಗಳಲ್ಲಿ ಒಂದನ್ನು ಪಡೆದುಕೊಳ್ಳುವ ಬಗ್ಗೆ ಕನಸು ಕಂಡಿದ್ದಳು. ಅಲ್ಲಿ ಪ್ರತಿ ವರ್ಷ ಮಿಲಿಯನ್‌ಗಿಂತಲೂ ಹೆಚ್ಚು ಮಹತ್ವಾಕಾಂಕ್ಷಿ ವೈದ್ಯರು ಸ್ಪರ್ಧಿಸುತ್ತಾರೆ ಎಂದು ಸಂತ್ರಸ್ತೆಯ ಅಪ್ಪ ಹೇಳಿದ್ದಾರೆ. ಟೈಲರ್ ಆಗಿ ದುಡಿಯುತ್ತಿದ್ದ ಅಪ್ಪ, ಮಗಳ ಎಲ್ಲ ಕನಸುಗಳನ್ನೂ ಪೋಷಿಸುತ್ತಾ ಬಂದಿದ್ದರು.
ಅಂದೊಮ್ಮೆ ಅವಳು ನನ್ನಲ್ಲಿ, ಪಪ್ಪಾ ವೈದ್ಯೆಯಾಗಿ ಇತರರಿಗೆ ಸಹಾಯ ಮಾಡುವುದು ಒಳ್ಳೆಯದು. ನಿಮಗೇನನಿಸುತ್ತದೆ?’ಎಂದು ಕೇಳಿದ್ದಳು. ‘ಸರಿ, ಮಾಡು. ನಾವು ನಿಮಗೆ ಸಹಾಯ ಮಾಡುತ್ತೇವೆ.’ ಎಂದು ನಾನು ಹೇಳಿದ್ದೆ. ಈಗ ಏನಾಯಿತು ಎಂದು ನೋಡಿ ಎಂದು ಅಪ್ಪ ತನ್ನ ಮಗಳನ್ನು ನೆನೆದು ಅತ್ತಿದ್ದಾರೆ.
ಕೋಲ್ಕತ್ತಾ ಅತ್ಯಾಚಾರ-ಕೊಲೆ: ಆರೋಪಿಯ ಅತ್ತೆ ಹೇಳಿದ್ದೇನು?
ಸಂಜಯ್ ರಾಯ್ ಒಬ್ಬನೇ ಈ ಕೃತ್ಯ ಎಸಗಲು ಸಾಧ್ಯವಿಲ್ಲ ಎಂದು ಆರೋಪಿಯ ಅತ್ತೆ ಹೇಳಿದ್ದಾರೆ. ಸೋಮವಾರ ಸುದ್ದಿ ಸಂಸ್ಥೆ ಎಎನ್ಐ ಜತೆ ಮಾತನಾಡಿದ ಅವರು ಸಂಜೋಯ್ ರಾಯ್ ಜೊತೆಗಿನ ತನ್ನ ಮಗಳ ಅನುಭವವನ್ನು ವಿವರಿಸಿದ್ದು ಅವರ ಸಂಬಂಧ ಚೆನ್ನಾಗಿರಲಿಲ್ಲ. ಸಂಜೋಯ್ ರಾಯ್ ತನ್ನ ಮಗಳಿಗೆ ಥಳಿಸಿದ್ದು,, ಅದರ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Badlapur News: ಬದ್ಲಾಪುರ ಶಾಲೆ ದೌರ್ಜನ್ಯ ಪ್ರಕರಣ ಮುಚ್ಚಿಡಲು ಪ್ರಯತ್ನಿಸಿದೆ: ಮಕ್ಕಳ ಹಕ್ಕುಗಳ ಸಮಿತಿ ಮುಖ್ಯಸ್ಥ
ಆರಂಭದಲ್ಲಿ, 6 ತಿಂಗಳುಗಳವರೆಗೆ ಎಲ್ಲವೂ ಚೆನ್ನಾಗಿತ್ತು. ಅವಳು 3 ತಿಂಗಳ ಗರ್ಭಿಣಿಯಾಗಿದ್ದಾಗ, ಅವನು ಗರ್ಭಪಾತ ಮಾಡಿದ್ದ. ಆಕೆಗೆ ಥಳಿಸಿದ್ದು, ಪೊಲೀಸ್ ದೂರು ದಾಖಲಾಗಿದೆ. ಇದರ ನಂತರ, ನನ್ನ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಳು, ಅವಳ ಎಲ್ಲಾ ಔಷಧಿಗಳ ವೆಚ್ಚವನ್ನು ನಾನು ಭರಿಸಿದ್ದೇನೆ. “ಸಂಜಯ್ ಕೆಟ್ಟವನು. ಅವನನ್ನು ನೇಣಿಗೆ ಹಾಕಿ ಅಥವಾ ಅವನೊಂದಿಗೆ ನೀವು ಏನು ಬೇಕಾದರೂ ಮಾಡಿ. ಅಪರಾಧದ ಬಗ್ಗೆ ನಾನು ಮಾತನಾಡುವುದಿಲ್ಲ. ಅವನು ಅದನ್ನು ಒಬ್ಬನೇ ಮಾಡಿರಲ್ಲ.ಅವನು ಅದನ್ನು ಒಬ್ಬನೇ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Wed, 21 August 24