AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯ ಕೆಲಸಗಾರನಂತೆ ನಮ್ಮನ್ನು ಕಾಣುತ್ತಿದ್ದರು: ಉದ್ಧವ್ ಠಾಕ್ರೆ ವಿರುದ್ಧ ಏಕನಾಥ್​ ಶಿಂಧೆ ವಾಗ್ದಾಳಿ

ಉದ್ಧವ್ ಠಾಕ್ರೆ(Uddhav Thackeray) ನಮ್ಮನ್ನು ಮನೆಯ ಕೆಲಸಗಾರನಂತೆ ಕಾಣಲಾರಂಭಿಸಿದ್ದರು, ಆದರೆ ಶಿವಸೇನೆಯಲ್ಲಿ ಮಾಲಿಕ ಅಥವಾ ಸೇವಕನೆಂಬ ಪರಿಕಲ್ಪನೆ ಇಲ್ಲ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ(Eknath Shinde) ವಾಗ್ದಾಳಿ ನಡೆಸಿದ್ದಾರೆ. ಶಿವಸೇನೆಯಿಂದ ಬಂಡಾವೇಳಲು ತಮಗಿದ್ದ ಕಾರಣವನ್ನು ಏಕನಾಥ್​ ಶಿಂಧೆ ತಿಳಿಸಿದ್ದಾರೆ. ಉದ್ಧವ್ ಠಾಕ್ರೆಯವರು ಬಾಳಾಸಾಹೇಬ್​ ಠಾಕ್ರೆಯವರ ಸಿದ್ಧಾಂತದಿಂದ ವಿಮುಖರಾಗಿದ್ದಾರೆ.

ಮನೆಯ ಕೆಲಸಗಾರನಂತೆ ನಮ್ಮನ್ನು ಕಾಣುತ್ತಿದ್ದರು: ಉದ್ಧವ್ ಠಾಕ್ರೆ ವಿರುದ್ಧ ಏಕನಾಥ್​ ಶಿಂಧೆ ವಾಗ್ದಾಳಿ
ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆImage Credit source: Amarujala.com
ನಯನಾ ರಾಜೀವ್
|

Updated on: Apr 08, 2024 | 9:42 AM

Share

ಉದ್ಧವ್ ಠಾಕ್ರೆ(Uddhav Thackeray) ನಮ್ಮನ್ನು ಮನೆಯ ಕೆಲಸಗಾರನಂತೆ ಕಾಣಲಾರಂಭಿಸಿದ್ದರು, ಆದರೆ ಶಿವಸೇನೆಯಲ್ಲಿ ಮಾಲಿಕ ಅಥವಾ ಸೇವಕನೆಂಬ ಪರಿಕಲ್ಪನೆ ಇಲ್ಲ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ(Eknath Shinde) ವಾಗ್ದಾಳಿ ನಡೆಸಿದ್ದಾರೆ. ಶಿವಸೇನೆಯಿಂದ ಬಂಡಾವೇಳಲು ತಮಗಿದ್ದ ಕಾರಣವನ್ನು ಏಕನಾಥ್​ ಶಿಂಧೆ ತಿಳಿಸಿದ್ದಾರೆ. ಉದ್ಧವ್ ಠಾಕ್ರೆಯವರು ಬಾಳಾಸಾಹೇಬ್​ ಠಾಕ್ರೆಯವರ ಸಿದ್ಧಾಂತದಿಂದ ವಿಮುಖರಾಗಿದ್ದಾರೆ.

ಶಿಂಧೆ ಸೇರಿದಂತೆ ಹಲವು ಸಚಿವರು 2022ರಲ್ಲಿ ಶಿವಸೇನೆಯಿಂದ ಬಂಡಾಯವೆದ್ದರು. ಇದಾದ ಬಳಿಕ ಉದ್ಧವ್ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಉದ್ಧವ್ ಕೈಬಿಟ್ಟಿದ್ದರಿಂದ ತಾವು ಬಂಡಾಯವೆದ್ದಿದ್ದಾಗಿ ಶಿಂಧೆ ತಿಳಿಸಿದ್ದಾರೆ. ನನಗೆ ಮುಖ್ಯಮಂತ್ರಿಯಾಗುವುದು ಇಷ್ಟವಿರಲಿಲ್ಲ ಆದರೆ ಬಾಳಾಸಾಹೇಬ್ ಠಾಕ್ರೆ ಅವರು ಸಿದ್ಧಾಂತಕ್ಕೆ ಧಕ್ಕೆಯಾಗುತ್ತಿರುವುದನ್ನು ಕಂಡು ಬಂಡಾಯವೆದ್ದೆವು ಎಂದಿದ್ದಾರೆ.

ಶಿಂಧೆ ಅವರು 2022ರ ಜೂನ್​ನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ ಬೇರ್ಪಟ್ಟರು ಹಾಗೂ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದಾರೆ. ನಾಯಕರು ಮನೆಯಲ್ಲಿ ಕೂರುವ ಬದಲು ತಳಮಟ್ಟದ ಕಾರ್ಯಕರ್ತರನ್ನು ತಲುಪಿದಾಗ ಪಕ್ಷ ಮುನ್ನಡೆಯುತ್ತದೆ. ಪ್ರಧಾನಿ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಆಡಳಿತಾರೂಢ ಮೈತ್ರಿಕೂಟಕ್ಕೆ ಮತ ನೀಡುವಂತೆ ಮನವಿ ಮಾಡಿದರು.

ಮತ್ತಷ್ಟು ಓದಿ:ಲೋಕಸಭೆ ಚುನಾವಣೆಗೆ 8 ಅಭ್ಯರ್ಥಿಗಳನ್ನು ಘೋಷಿಸಿದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ

ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿಗೆ ಅಭಿವೃದ್ಧಿಯ ಯಾವುದೇ ಅಜೆಂಡಾವಿಲ್ಲ ಎಂದು ಹೇಳಿದರು. ಆಡಳಿತಾರೂಢ ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆ ಕಾರ್ಯ ಎರಡ್ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ವಿದರ್ಭದಲ್ಲಿ ಮಹಾಯುತಿ ಎಲ್ಲಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ