ಜಾರ್ಖಂಡ್​: ಬಿಜೆಪಿ ಸೇರಿದ ಕಾಂಗ್ರೆಸ್​ನ ಏಕೈಕ ಸಂಸದೆ ಗೀತಾ ಕೋಡಾ

ಜಾರ್ಖಂಡ್‌ನ ಸಿಂಗ್‌ಭೂಮ್‌ನ ಕಾಂಗ್ರೆಸ್ ಸಂಸದೆ, ಜಾರ್ಖಂಡ್‌ನ ಮಾಜಿ ಸಿಎಂ ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ ಅವರು ತಮ್ಮ ಪಕ್ಷವನ್ನು ತೊರೆದ ನಂತರ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಮೈತ್ರಿ ಮಾಡಿಕೊಂಡಿರುವ ಬಗ್ಗೆ ಸಿಂಗ್‌ಭೂಮ್ ಸಂಸದರು ಅತೃಪ್ತರಾಗಿದ್ದರು ಎಂದು ವರದಿಯಾಗಿದೆ.

ಜಾರ್ಖಂಡ್​: ಬಿಜೆಪಿ ಸೇರಿದ ಕಾಂಗ್ರೆಸ್​ನ ಏಕೈಕ ಸಂಸದೆ ಗೀತಾ ಕೋಡಾ
ಗೀತಾ ಕೋಡಾ
Image Credit source: India Today

Updated on: Feb 26, 2024 | 2:38 PM

ಲೋಕಸಭಾ ಚುನಾವಣೆ(Lok Sabha Election) ಹೊಸ್ತಿಲಿನಲ್ಲಿ ಕಾಂಗ್ರೆಸ್​ಗೆ ಮತ್ತೊಂದು ಹೊಡೆತ ಬಿದ್ದಿದೆ. ಭಾನುವಾರದವರೆಗೂ ಕಾಂಗ್ರೆಸ್​ ಸಭೆಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಜಾರ್ಖಂಡ್​ನ ಕಾಂಗ್ರೆಸ್​ ಸಂಸದೆ ಗೀತಾ ಕೋಡಾ ಏಕಾಏಕಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಜಾರ್ಖಂಡ್​ನ ಏಕೈಕ ಕಾಂಗ್ರೆಸ್​ ಸಂಸದೆ ಗೀತಾ ಕೋಡಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್, ಜೆಎಂಎಂ ಮತ್ತು ಆರ್‌ಜೆಡಿ ಮೈತ್ರಿಕೂಟದ ಬಗ್ಗೆ ಗೀತಾ ಕೋಡಾ ಅತೃಪ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೀತಾ ಕೋಡಾ ಅವರು ಜಾರ್ಖಂಡ್​ನ ಮಾಜಿ ಮುಖ್ಯಮಂತ್ರಿ ಮಧುಕೋಡಾ ಅವರ ಪತ್ನಿ.

ಗೀತಾ ಗೋಡಾ ಅವರು 2009 ರಿಂದ 2019 ರವರೆಗೆ ಎರಡು ಬಾರಿ ಶಾಸಕರಾಗಿದ್ದರು. ಅವರು ಮೊದಲ ಬಾರಿಗೆ ಸಿಂಗ್ಭೂಮ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಮಧು ಕೋಡಾ ಅವರು ಸೆಪ್ಟೆಂಬರ್ 2006 ರಿಂದ ಆಗಸ್ಟ್ 2008 ರವರೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು.

ಗೀತಾ ಕೋಡ ಅವರು ಭಾನುವಾರದವರೆಗೂ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಫೆಬ್ರವರಿ 16 ರಂದು ನಡೆದ ಸಂಪುಟ ವಿಸ್ತರಣೆಯಲ್ಲಿ, ಚಂಪೈ ಸೊರೆನ್ ಅವರು ಹಿಂದಿನ ಹೇಮಂತ್ ಸರ್ಕಾರದಲ್ಲಿ ಸಚಿವರಾಗಿದ್ದ ಕಾಂಗ್ರೆಸ್ ಕೋಟಾದ ಅದೇ 4 ಶಾಸಕರನ್ನು ಸಚಿವರನ್ನಾಗಿ ಮಾಡಿದರು. ಇದರಿಂದ ಕುಪಿತಗೊಂಡ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿದರು.

ಮತ್ತಷ್ಟು ಓದಿ: 3 ರಾಜ್ಯಗಳು ಬಿಜೆಪಿ ತೆಕ್ಕೆಗೆ, ಕಾಂಗ್ರೆಸ್​ನ್ನು ತರಾಟೆಗೆ ತೆಗೆದುಕೊಂಡ ಇಂಡಿಯಾ ಒಕ್ಕೂಟ

ರಾಜ್ಯ ಪಕ್ಷದ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು. 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಜಾರ್ಖಂಡ್‌ನ 14 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದವು.
ಗೀತಾ ಕೋಡಾ ಅವರು ಸಿಂಗ್‌ಭೂಮ್ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

ಈ ಹಿಂದೆ ಅವರು 2009 ರಲ್ಲಿ ತಮ್ಮ ಪತಿ ಮಧು ಕೋಡಾ ಅವರು ಸ್ಥಾಪಿಸಿದ ಜೈ ಭಾರತ್ ಸಮಂತ ಪಕ್ಷದ ಸದಸ್ಯರಾಗಿದ್ದರು. 2009 ರ ಜಾರ್ಖಂಡ್ ಅಸೆಂಬ್ಲಿ ಚುನಾವಣೆಯಲ್ಲಿ ಜಗನಾಥಪುರ ಕ್ಷೇತ್ರವನ್ನು ಗೆದ್ದ ಕಾರಣ ಗೀತಾ ಕೋಡಾ ಜೈ ಭಾರತ್ ಸಮಂತ ಪಕ್ಷದ ಏಕೈಕ ಶಾಸಕರಾಗಿದ್ದರು. ಆದರೆ, 2018ರ ನವೆಂಬರ್‌ನಲ್ಲಿ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us