AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನೊಳಗೊಂದು ಲವ್ ಸ್ಟೋರಿ! ಕೊಲೆ ಅಪರಾಧಿಯನ್ನು ಮದುವೆಯಾದ ಜೈಲು ಅಧಿಕಾರಿ

ಪ್ರೀತಿ ಕುರುಡು ಅಂತಾರೆ. ಕೆಲವು ಪ್ರಕರಣಗಳನ್ನು ನೋಡಿದಾಗ ಅದು ನಿಜವೆನಿಸದೇ ಇರದು. ಮಧ್ಯಪ್ರದೇಶದ ಜೈಲು ಅಧಿಕಾರಿ ಜೈಲಿನಲ್ಲಿ ಭೇಟಿಯಾದ ಮಾಜಿ ಕೊಲೆ ಅಪರಾಧಿಯನ್ನು ಪ್ರೀತಿಸಿ, ಆತನ ಶಿಕ್ಷೆ ಮುಗಿದು ಬಳಿಕ ಆತನನ್ನೇ ಮದುವೆಯಾಗಿದ್ದಾರೆ. ಈ ವಿಚಿತ್ರವಾದ ಲವ್ ಸ್ಟೋರಿ ನಡೆದಿರುವುದು ಮಧ್ಯಪ್ರದೇಶದಲ್ಲಿ. ಕೆಲವು ಪ್ರೇಮಕಥೆಗಳು ಕೆಫೆಗಳು, ಕಚೇರಿಗಳು ಅಥವಾ ಕಾಲೇಜು ಕ್ಯಾಂಪಸ್‌ಗಳಲ್ಲಿ ಪ್ರಾರಂಭವಾಗುತ್ತವೆ. ಆದರೆ ಈ ಲವ್ ಸ್ಟೋರಿ ಜೈಲಿನೊಳಗೆ ಆರಂಭವಾಗಿತ್ತು.

ಜೈಲಿನೊಳಗೊಂದು ಲವ್ ಸ್ಟೋರಿ! ಕೊಲೆ ಅಪರಾಧಿಯನ್ನು ಮದುವೆಯಾದ ಜೈಲು ಅಧಿಕಾರಿ
Jail Officer Wedding
ಸುಷ್ಮಾ ಚಕ್ರೆ
|

Updated on:May 09, 2026 | 4:49 PM

Share

ನವದೆಹಲಿ, ಮೇ 9: ಆತ ಕೊಲೆ ಮಾಡಿದ್ದ ಜೈಲು ಸೇರಿದ್ದ ಅಪರಾಧಿ. ಆಕೆ ಆ ಜೈಲಿನ ಅಧಿಕಾರಿ. ಅವರಿಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು ಎಂದರೆ ನೀವು ನಂಬಲು ಸಾಧ್ಯವೇ? ಆ ಅಪರಾಧಿಯ ಶಿಕ್ಷೆಯ ಅವಧಿ ಮುಗಿದ ಬಳಿಕ ಆಕೆ ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಾರೆ. ಅದಕ್ಕೆ ಆಕೆಯ ಮನೆಯವರು ಸುತಾರಾಂ ಒಪ್ಪಲಿಲ್ಲ. ಆದರೂ ಹಠ ಮಾಡಿ ಆತನನ್ನೇ ಮದುವೆಯಾಗಿದ್ದಾರೆ. ಆಕೆ ಮುಸ್ಲಿಂ ಮಹಿಳೆಯಾಗಿದ್ದರೆ ಆತ ಹಿಂದೂ. ಇದೀಗ ಆಕೆ ಹಿಂದೂ ಸಂಪ್ರದಾಯದಂತೆ ಅದ್ದೂರಿಯಾಗಿಯೇ ಆತನನ್ನು ಮದುವೆಯಾಗಿದ್ದಾರೆ.

ಸತ್ನಾ ಸೆಂಟ್ರಲ್ ಜೈಲಿನಲ್ಲಿದ್ದಾಗ ಆ ಕೈದಿ ಮತ್ತು ಮಹಿಳಾ ಜೈಲು ಅಧಿಕಾರಿ ನಡುವೆ ಪ್ರೀತಿ ಮೂಡಿತ್ತು. ಅದಾದ ನಂತರವೂ ಅವರು ಸಂಪರ್ಕದಲ್ಲಿದ್ದರು. ಇದೀಗ ಛತರ್ಪುರ ಜಿಲ್ಲೆಯಲ್ಲಿ ಅವರ ಮದುವೆ ನಡೆದಿದೆ. ಈ ವಿವಾಹ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದೆ. ಈ ಅಂತರ್ಧರ್ಮೀಯ ಸಮಾರಂಭವು ಮೇ 5ರಂದು ಛತರ್ಪುರ ಜಿಲ್ಲೆಯ ಲವ್ಕುಶ್ನಗರ ಪ್ರದೇಶದಲ್ಲಿ ನಡೆಯಿತು. ಸತ್ನಾ ಕೇಂದ್ರ ಜೈಲಿನಲ್ಲಿ ಸಹಾಯಕ ಸೂಪರಿಂಟೆಂಡೆಂಟ್ ಮತ್ತು ವಾರಂಟ್ ಇನ್-ಚಾರ್ಜ್ ಆಗಿ ಸೇವೆ ಸಲ್ಲಿಸಿದ ಫಿರೋಜಾ ಖಾಟೂನ್, ಜೈಲಿನೊಳಗೆ ತನ್ನ ಅಧಿಕೃತ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಕೊಲೆ ಅಪರಾಧಿಯಾಗಿದ್ದ ಧರ್ಮೇಂದ್ರ ಸಿಂಗ್ ಅವರನ್ನು ಮೊದಲು ಭೇಟಿಯಾಗಿದ್ದರು. ನಂತರ ಅವರಿಬ್ಬರೂ ಪ್ರೀತಿಸತೊಡಗಿದ್ದರು.

ಇದನ್ನೂ ಓದಿ: ರಾತ್ರಿ ಸಲ್ವಾರ್ ಧರಿಸಿ ರಸ್ತೆಯಲ್ಲಿ ನಿಂತಿದ್ದ ಮಹಿಳಾ ಐಪಿಎಸ್ ಅಧಿಕಾರಿಗೆ 40 ಪುರುಷರಿಂದ ಕಿರುಕುಳ!

2007ರಲ್ಲಿ ಚಾಂದಲಾ ನಗರ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಕೃಷ್ಣ ದತ್ ದೀಕ್ಷಿತ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಸಿಂಗ್ ಅವರಿಗೆ ಜೈಲು ಶಿಕ್ಷೆಯಾಗಿತ್ತು. ಧರ್ಮೇಂದ್ರ ಸಿಂಗ್ ಅವರ ಉತ್ತಮ ನಡವಳಿಕೆಯಿಂದಾಗಿ ಜೈಲಿನಲ್ಲಿ ನಂತರ ಕ್ಲೆರಿಕಲ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ಜೈಲಧಿಕಾರಿ ಜೊತೆ ಪ್ರೇಮಾಂಕುರವಾಗಿತ್ತು.

ಛತ್ತರ್‌ಪುರ ಜಿಲ್ಲೆಯ ಚಾಂದಲಾ ನಿವಾಸಿ ಧರ್ಮೇಂದ್ರ ಸಿಂಗ್ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಸುಮಾರು 14 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ಉತ್ತಮ ನಡವಳಿಕೆಯ ಆಧಾರದ ಮೇಲೆ ಸುಮಾರು 4 ವರ್ಷಗಳ ಹಿಂದೆ ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ನಂತರ, ಇಬ್ಬರೂ ಸಂಪರ್ಕದಲ್ಲಿದ್ದರು. ಜೈಲಧಿಕಾರಿಯ ಮನೆಯವರು ಈ ಮದುವೆಗೆ ಒಪ್ಪಲಿಲ್ಲ. ಮದುವೆಗೂ ಬರಲಿಲ್ಲ. ಹೀಗಾಗಿ, ಧರ್ಮೇಂದ್ರ ಸಿಂಗ್ ಅವರ ಸಂಪ್ರದಾಯದಂತೆ ಮದುವೆ ನಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Sat, 9 May 26

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More