AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಸಲ್ವಾರ್ ಧರಿಸಿ ರಸ್ತೆಯಲ್ಲಿ ನಿಂತಿದ್ದ ಮಹಿಳಾ ಐಪಿಎಸ್ ಅಧಿಕಾರಿಗೆ 40 ಪುರುಷರಿಂದ ಕಿರುಕುಳ!

ತೆಲಂಗಾಣದ ಐಪಿಎಸ್ ಅಧಿಕಾರಿಯಾದ ಬಿ. ಸುಮತಿ ರಾತ್ರಿ ರಹಸ್ಯ ಕಾರ್ಯಾಚರಣೆ ನಡೆಸಲು ಏಕಾಂಗಿಯಾಗಿ ರಸ್ತೆಗಳಲ್ಲಿ ಓಡಾಡಿದ್ದಾರೆ. ಮಹಿಳೆಯರ ಸುರಕ್ಷತೆಯ ಬಗ್ಗೆ ತಾವೇ ಖುದ್ದಾಗಿ ತಿಳಿಯಲು ಸಲ್ವಾರ್ ಧರಿಸಿ ಮಾಮೂಲಿ ಮಹಿಳೆಯಂತೆ ಹೋಗಿದ್ದ ಅವರಿಗೆ ಕೇವಲ 3 ಗಂಟೆಗಳಲ್ಲಿ 40 ಪುರುಷರು ಕಿರುಕುಳ ನೀಡಿದ್ದಾರೆ. ಹೀಗಾಗಿ, ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕ್ರಮ ತೆಗೆದುಕೊಳ್ಳಲು ಅವರು ಸೂಚಿಸಿದ್ದಾರೆ.

ರಾತ್ರಿ ಸಲ್ವಾರ್ ಧರಿಸಿ ರಸ್ತೆಯಲ್ಲಿ ನಿಂತಿದ್ದ ಮಹಿಳಾ ಐಪಿಎಸ್ ಅಧಿಕಾರಿಗೆ 40 ಪುರುಷರಿಂದ ಕಿರುಕುಳ!
SP B Sumati
ಸುಷ್ಮಾ ಚಕ್ರೆ
|

Updated on: May 07, 2026 | 9:41 PM

Share

ಹೈದರಾಬಾದ್, ಮೇ 7: ತೆಲಂಗಾಣದಲ್ಲಿ (Telangana) ಹೊಸದಾಗಿ ನೇಮಕವಾದ ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತರಾದ ಬಿ. ಸುಮತಿ ಅವರು ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಪರಿಶೀಲಿಸಲು ತಡರಾತ್ರಿ ಅಂಡರ್​ಕವರ್ ಕಾರ್ಯಾಚರಣೆ ನಡೆಸಿದ್ದಾರೆ. ಸಾಮಾನ್ಯ ಮಹಿಳೆಯಂತೆ ರಾತ್ರಿ ಓಡಾಡುತ್ತಿದ್ದ ಅವರಿಗೆ 3 ಗಂಟೆಯಲ್ಲಿ 40 ಪುರುಷರು ಕಿರುಕುಳ ನೀಡಿದ್ದಾರೆ. ಐಪಿಎಸ್ ಅಧಿಕಾರಿ ನಡೆಸಿದ ಈ ರಹಸ್ಯ ಕಾರ್ಯಾಚರಣೆಯ ಬಳಿಕ ನಗರದಾದ್ಯಂತ ಮಹಿಳೆಯರ ಭದ್ರತೆಗೆ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ಹೆಚ್ಚಿಸಲು ಅವರು ಸೂಚಿಸಿದ್ದಾರೆ.

ಹೊಸದಾಗಿ ನೇಮಕಗೊಂಡ ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತರಾದ ಬಿ. ಸುಮತಿಗೆ ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ನಿರ್ಣಯಿಸಲು ನಡೆಸಿದ ರಹಸ್ಯ ಕಾರ್ಯಾಚರಣೆಯ ಸಂದರ್ಭದಲ್ಲಿ ಸಲ್ವಾರ್ ಕಮೀಜ್‌ನಲ್ಲಿ ಸಾಮಾನ್ಯ ಮಹಿಳೆಯಂತೆ ಹೋಗಿದ್ದಾಗ ಸುಮಾರು 40 ಪುರುಷರು ಕಿರುಕುಳ ನೀಡಿದ್ದಾರೆ. ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಬುದ್ಧಿ ಹೇಳಲಾಗಿದೆ. ಹಾಗೇ, ಮಹಿಳೆಯರ ಜೊತೆ ಯಾವ ರೀತಿ ವರ್ತಿಸಬೇಕೆಂದು ಕೌನ್ಸಿಲಿಂಗ್ ಕೂಡ ಕೊಡಲಾಗುತ್ತಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಭೀಕರ ಕೃತ್ಯ, ಮಾಂಸದ ಅಡುಗೆ ವಿಚಾರಕ್ಕೆ ದಂಪತಿ ನಡುವೆ ವಾಗ್ವಾದ, ಪತಿಯನ್ನೇ ಕೊಂದ ಪತ್ನಿ

ತಮ್ಮ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ತಿಳಿಯಲು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಮಧ್ಯರಾತ್ರಿ ದಿಲ್ಸುಖ್‌ನಗರದ ಬಸ್ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ನಿಂತಿದ್ದರು. ಈ 3 ಗಂಟೆಗಳ ಅವಧಿಯಲ್ಲಿ ಪುರುಷರ ಗುಂಪುಗಳು ಅವರನ್ನು ಸಂಪರ್ಕಿಸಿದವು. ಹಲವರು ಮದ್ಯ ಅಥವಾ ಡ್ರಗ್ಸ್ ಪ್ರಭಾವದಲ್ಲಿ ಮತ್ತು ಅಸಭ್ಯ ಹೇಳಿಕೆಗಳನ್ನು ನೀಡಿ ಕಿರುಕುಳ ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಸೇರಿದಂತೆ ಹೆಚ್ಚಿನ ಯುವಕರಿಗೆ ತಾವು ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡುತ್ತಿದ್ದೇವೆಂದು ತಿಳಿದಿರಲಿಲ್ಲ.

ಇದನ್ನೂ ಓದಿ: ಮಾನವೀಯತೆ ಅಂದ್ರೆ ಇದು: ಸುಡುವ ಬಿಸಿಲಿನಿಂದ ರಕ್ಷಿಸಲು ತನ್ನ ಅಂಗಡಿಯೊಳಗೆ ಬೀದಿ ನಾಯಿಗಳಿಗೆ ಆಶ್ರಯ ನೀಡಿದ ವ್ಯಕ್ತಿ

ಸುಮತಿ ಅವರು ಸುದ್ದಿಯಲ್ಲಿರುವುದು ಇದೇ ಮೊದಲಲ್ಲ. ಸುಮಾರು 25 ವರ್ಷಗಳ ಹಿಂದೆ ಅವರು ಮೊದಲು ಕಾಜಿಪೇಟೆ ರೈಲ್ವೆ ನಿಲ್ದಾಣದ ಬಳಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪ್ರಾರಂಭಿಸಿದಾಗ ಮಹಿಳೆಯರ ಸುರಕ್ಷತೆಯನ್ನು ತಿಳಿಯಲು ಇದೇ ರೀತಿಯಲ್ಲಿ ಮಫ್ತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More