AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುದುರೆಮುಖದಲ್ಲಿ ಸ್ವತಂತ್ರ ದಿನಾಚರಣೆ ವಿಶೇಷ ಆಫ್ ರೋಡ್ ಸಾಹಸಯಾತ್ರೆ: ಆಯೋಜಕರಿಗೆ ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶವಾದ ಕುದುರೆಮುಖದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಾರಾಂತ್ಯದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ 'ಆಫ್-ರೋಡ್ ಅಡ್ವೆಂಚರ್ ಡ್ರೈವ್'ಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಸಾಹಸಯಾತ್ರೆಯಿಂದ ಜಲಮೂಲಗಳು ಕಲುಷಿತಗೊಂಡರೆ ಅಥವಾ ಗ್ರಾಮೀಣ ರಸ್ತೆಗಳು ಹಾಳಾದರೆ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಎಚ್ಚರಿಸಿದ್ದಾರೆ.

ಕುದುರೆಮುಖದಲ್ಲಿ ಸ್ವತಂತ್ರ ದಿನಾಚರಣೆ ವಿಶೇಷ ಆಫ್ ರೋಡ್ ಸಾಹಸಯಾತ್ರೆ: ಆಯೋಜಕರಿಗೆ ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ
ಕುದುರೆಮುಖ
ಭಾವನಾ ಹೆಗಡೆ
|

Updated on: Aug 14, 2026 | 8:57 AM

Share

ಮುಖ್ಯಾಂಶಗಳು

  • ಸ್ವಾತಂತ್ರ್ಯ ದಿನದ ವಿಶೇಷ ಸಾಹಸಯಾತ್ರೆಗೆ ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ.
  • ಜಲಮೂಲ ಕಲುಷಿತಗೊಳಿಸಿದರೆ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ.
  • ಶಬ್ದ ಮಾಲಿನ್ಯ ತಡೆದು ಪ್ರಕೃತಿ ಕಾಪಾಡಲು ಅಧಿಕಾರಿಗಳಿಗೆ ಸಚಿವರ ಸೂಚನೆ.

ಚಿಕ್ಕಮಗಳೂರು, ಆಗಸ್ಟ್ 14: ಜಿಲ್ಲೆಯ ಕುದುರೆಮುಖದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಆಫ್-ರೋಡ್ ಅಡ್ವೆಂಚರ್ ಡ್ರೈವ್’ (Off-road Adventure Drive) ಸಾಹಸಯಾತ್ರೆಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಈವೆಂಟ್‌ನಿಂದಾಗಿ ಗ್ರಾಮೀಣ ರಸ್ತೆಗಳಿಗೆ ಹಾನಿಯಾದರೂ ಅಥವಾ ಜಲಮೂಲಗಳು ಕಲುಷಿತಗೊಂಡರೂ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈಶ್ವರ್ ಖಂಡ್ರೆ ಅವರು ಲಿಖಿತ ನಿರ್ದೇಶನ

ಬೆಂಗಳೂರು ಮೂಲದ ಸಾಹಸ ಹವ್ಯಾಸಿಗಳ ಗುಂಪೊಂದು ಕುದುರೆಮುಖ ಭಾಗದಲ್ಲಿ ಈ ಆಫ್-ರೋಡ್ ಚಾಲನಾ ಈವೆಂಟ್ ಅನ್ನು ಆಯೋಜಿಸಿದೆ ಎನ್ನಲಾಗಿದೆ. ಮಳೆಯಿಂದಾಗಿ ಈಗಾಗಲೇ ಕೆಸರಾಗಿರುವ ಕಡಿದಾದ ಗುಡ್ಡಗಾಡು ಪ್ರದೇಶಗಳು, ನದಿ ಮತ್ತು ತೊರೆಗಳನ್ನು ದಾಟುವಂತಹ ಸಾಹಸ ಕೃತ್ಯಗಳು ಇದರಲ್ಲಿ ಸೇರಿವೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (CEO) ಸಚಿವ ಈಶ್ವರ್ ಖಂಡ್ರೆ ಅವರು ಲಿಖಿತ ನಿರ್ದೇಶನ ನೀಡಿದ್ದಾರೆ. ಈ ಸಾಹಸ ಕೃತ್ಯವು ಯಾವುದೇ ಕಾರಣಕ್ಕೂ ಪರಿಸರಕ್ಕೆ ಮಾರಕವಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ಪ್ರಮುಖವಾಗಿ ಕುಡಿಯುವ ನೀರಿನ ಮೂಲಗಳಾಗಿರುವ ನದಿಗಳು, ತೊರೆಗಳು ಮತ್ತು ನಾಲೆಗಳಿಗೆ ಇಂತಹ ಆಫ್-ರೋಡ್ ವಾಹನಗಳು ಪ್ರವೇಶಿಸದಂತೆ ತಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.

ಪರಿಸರ ರಕ್ಷಣೆ ಬಗ್ಗೆ ಸಚಿವರ ಆದೇಶ

ಮಾರ್ಪಾಡು ಮಾಡಲಾದ (Modified) ಮತ್ತು ದೊಡ್ಡ ಆಫ್-ರೋಡ್ ಟೈರ್‌ಗಳನ್ನು ಹೊಂದಿರುವ ಇಂತಹ ವಾಹನಗಳನ್ನು ಮಳೆಯಿಂದ ತೇವಗೊಂಡಿರುವ ಗ್ರಾಮೀಣ ರಸ್ತೆಗಳಲ್ಲಿ ಅತಿ ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಚಲಾಯಿಸುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತವೆ. ಅಷ್ಟೇ ಅಲ್ಲದೆ, ಇದು ತೀವ್ರ ಮಣ್ಣಿನ ಸವೆತಕ್ಕೂ (Soil Erosion) ಕಾರಣವಾಗುತ್ತದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.

ಜೊತೆಗೆ, ಇಂತಹ ಚಟುವಟಿಕೆಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವು ಸ್ಥಳೀಯ ವನ್ಯಜೀವಿಗಳಿಗೆ ತೊಂದರೆ ಉಂಟುಮಾಡಲಿದೆ. ಸಂವಿಧಾನದ ವಿಧಿ 51A(g) ಅನ್ನು ಉಲ್ಲೇಖಿಸಿರುವ ಸಚಿವರು, ಅರಣ್ಯ, ನದಿ, ಸರೋವರ ಹಾಗೂ ವನ್ಯಜೀವಿಗಳನ್ನು ಒಳಗೊಂಡ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ ಎಂದು ನೆನಪಿಸಿದ್ದಾರೆ. ಈ ಹಿಂದೆ ಹಾಸನದ ಸಕಲೇಶಪುರ ಹಾಗೂ ಚಿಕ್ಕಮಗಳೂರಿನ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಇಂತಹ ಆಫ್-ರೋಡಿಂಗ್ ನಡೆಸುತ್ತಿದ್ದವರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಜರುಗಿಸಿ, 40ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿತ್ತು ಎಂಬುದು ಇಲ್ಲಿ ಗಮನಾರ್ಹ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಾರಾಗೃಹ ಅಧಿಕಾರಿಗಳ ದೂರಿನಂತೆ ಮತ್ತೊಂದು ಎಫ್‌ಐಆರ್ ದಾಖಲು
ಕಾರಾಗೃಹ ಅಧಿಕಾರಿಗಳ ದೂರಿನಂತೆ ಮತ್ತೊಂದು ಎಫ್‌ಐಆರ್ ದಾಖಲು
ಶ್ರೀನಗರ-ಲೇಹ್ ಹೈವೇಯಲ್ಲಿ ಭಾರಿ ಮೇಘಸ್ಫೋಟ; ಭೂಕುಸಿತದ ಭೀಕರತೆ ಹೀಗಿತ್ತು
ಶ್ರೀನಗರ-ಲೇಹ್ ಹೈವೇಯಲ್ಲಿ ಭಾರಿ ಮೇಘಸ್ಫೋಟ; ಭೂಕುಸಿತದ ಭೀಕರತೆ ಹೀಗಿತ್ತು
ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಪಡೆದೇ ಕಾರ್ಯಕ್ರಮ ಮಾಡ್ಬೇಕು: ಸಿಎಂ
ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಪಡೆದೇ ಕಾರ್ಯಕ್ರಮ ಮಾಡ್ಬೇಕು: ಸಿಎಂ
ಕರ್ನಾಟಕದಲ್ಲಿ ಗುಟ್ಕಾ ಬ್ಯಾನ್ ಬಗ್ಗೆ ಸಚಿವ ಯುಟಿ ಖಾದರ್ ಹೇಳಿದ್ದಿಷ್ಟು
ಕರ್ನಾಟಕದಲ್ಲಿ ಗುಟ್ಕಾ ಬ್ಯಾನ್ ಬಗ್ಗೆ ಸಚಿವ ಯುಟಿ ಖಾದರ್ ಹೇಳಿದ್ದಿಷ್ಟು
ಉತ್ತರಾಖಂಡದ ಚಮೋಲಿಯಲ್ಲಿ ಟನಲ್ ಕುಸಿತ; 16 ಕಾರ್ಮಿಕರ ರಕ್ಷಣೆ
ಉತ್ತರಾಖಂಡದ ಚಮೋಲಿಯಲ್ಲಿ ಟನಲ್ ಕುಸಿತ; 16 ಕಾರ್ಮಿಕರ ರಕ್ಷಣೆ
‘ಲವ್ ಯೂ ಗಿಲ್ಲಿ’ ಚಿತ್ರ ಸೆಟ್ಟೇರುವುದು ತಡ ಆಗಿದ್ದು ಏಕೆ? ಇಲ್ಲಿದೆ ಉತ್ತರ
‘ಲವ್ ಯೂ ಗಿಲ್ಲಿ’ ಚಿತ್ರ ಸೆಟ್ಟೇರುವುದು ತಡ ಆಗಿದ್ದು ಏಕೆ? ಇಲ್ಲಿದೆ ಉತ್ತರ
‘ಅಯೋಗ್ಯ 2’ ಸಿನಿಮಾ ನೋಡಿ ಮೆಚ್ಚಿ ಮಾತನಾಡಿದ ನಟ ಶರಣ್
‘ಅಯೋಗ್ಯ 2’ ಸಿನಿಮಾ ನೋಡಿ ಮೆಚ್ಚಿ ಮಾತನಾಡಿದ ನಟ ಶರಣ್
ಕರ್ನಾಟಕದಲ್ಲಿ ಗುಟ್ಕಾ-ತಂಬಾಕು ಬ್ಯಾನ್ ಗೆ ವಿರೋಧ: ಕಾರಣವೇನು?
ಕರ್ನಾಟಕದಲ್ಲಿ ಗುಟ್ಕಾ-ತಂಬಾಕು ಬ್ಯಾನ್ ಗೆ ವಿರೋಧ: ಕಾರಣವೇನು?
ವಿಕಾಸಸೌಧದ ಕ್ಯಾಂಟೀನ್ ಮೇಲೆ ಆಹಾರ ಇಲಾಖೆ ದಾಳಿ: ಜಿರಳೆ-ಫಂಗಸ್ ಪತ್ತೆ
ವಿಕಾಸಸೌಧದ ಕ್ಯಾಂಟೀನ್ ಮೇಲೆ ಆಹಾರ ಇಲಾಖೆ ದಾಳಿ: ಜಿರಳೆ-ಫಂಗಸ್ ಪತ್ತೆ
ಬೀದಿಗಿಳಿದು ರೈತರ ಹೋರಾಟಕ್ಕೆ ಕೈಜೋಡಿಸಿದ ವಿದ್ಯಾರ್ಥಿ ಪಡೆ
ಬೀದಿಗಿಳಿದು ರೈತರ ಹೋರಾಟಕ್ಕೆ ಕೈಜೋಡಿಸಿದ ವಿದ್ಯಾರ್ಥಿ ಪಡೆ