ಚುನಾವಣೆ ಬೆನ್ನಲ್ಲೇ ಹಸುವನ್ನು ರಾಜ್ಯ ಮಾತೆ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರದಲ್ಲಿ ಸದ್ಯದಲ್ಲೇ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಲಿದೆ. ಇದರ ಬೆನ್ನಲ್ಲೇ ಹಸುವನ್ನು ಅದರ ಸಾಂಸ್ಕೃತಿಕ ಮಹತ್ವದ ಕಾರಣಕ್ಕೆ 'ರಾಜ್ಯ ಮಾತೆ' ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಸ್ಥಳೀಯ ತಳಿಯ ಹಸುಗಳ ಪ್ರಮಾಣ ತೀವ್ರವಾಗಿ ಕಡಿಮೆಯಾಗುತ್ತಿರುವ ಬಗ್ಗೆ ಮಹಾರಾಷ್ಟ್ರ ಸರ್ಕಾರವೂ ಕಳವಳ ವ್ಯಕ್ತಪಡಿಸಿದೆ.

ಚುನಾವಣೆ ಬೆನ್ನಲ್ಲೇ ಹಸುವನ್ನು ರಾಜ್ಯ ಮಾತೆ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ
ಹಸು

Updated on: Sep 30, 2024 | 4:09 PM

ಮುಂಬೈ: ಮಹಾರಾಷ್ಟ್ರ ಸರ್ಕಾರ ಇಂದು ಹಸುವನ್ನು ‘ರಾಜ್ಯ ಮಾತೆ’ ಎಂದು ಘೋಷಿಸಿದೆ. ಭಾರತೀಯ ಸಂಪ್ರದಾಯದಲ್ಲಿ ಗೋವುಗಳ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಉಲ್ಲೇಖಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಕುರಿತಾದ ಅಧಿಕೃತ ಆದೇಶದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಹಸು ಭಾರತೀಯ ಸಂಪ್ರದಾಯದ ಪ್ರಮುಖ ಭಾಗವಾಗಿದೆ ಮತ್ತು ಅನಾದಿ ಕಾಲದಿಂದಲೂ ಆಧ್ಯಾತ್ಮಿಕ, ವೈಜ್ಞಾನಿಕ ಮಹತ್ವವನ್ನು ಹೊಂದಿದೆ ಎಂದು ಹೇಳಿದೆ.

ದೇಶಿ ಹಸುಗಳು ಕಡಿಮೆಯಾಗುತ್ತಿರುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಭಾರತದಾದ್ಯಂತ ಕಂಡುಬರುವ ವಿವಿಧ ತಳಿಯ ಹಸುಗಳನ್ನು ಎತ್ತಿ ತೋರಿಸುತ್ತಾ, ಮಹಾರಾಷ್ಟ್ರ ಸರ್ಕಾರವು ಸ್ಥಳೀಯ ಹಸುಗಳ ಸಂಖ್ಯೆಯಲ್ಲಿನ ಇಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿತು. ತನ್ನ ಅಧಿಕೃತ ಆದೇಶದಲ್ಲಿ ಮಹಾರಾಷ್ಟ್ರ ಸರ್ಕಾರವು ಕೃಷಿಯಲ್ಲಿ ಹಸುವಿನ ಸಗಣಿ ಬಳಕೆಯನ್ನು ಒತ್ತಿಹೇಳಿತು. ಅದರ ಮೂಲಕ ಮನುಷ್ಯನಿಗೆ ಮುಖ್ಯ ಆಹಾರದಲ್ಲಿ ಪೋಷಣೆ ಸಿಗುತ್ತದೆ. ಹಸು ಮತ್ತು ಅದರ ಉತ್ಪನ್ನಗಳಿಗೆ ಸಂಬಂಧಿಸಿದ ಸಾಮಾಜಿಕ-ಆರ್ಥಿಕ ಅಂಶಗಳ ಜೊತೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಪರಿಗಣಿಸಿ, ಸರ್ಕಾರವು ಸ್ಥಳೀಯ ಹಸುಗಳನ್ನು ಸಾಕಲು ಪಶುಪಾಲಕರನ್ನು ಪ್ರೋತ್ಸಾಹಿಸಿತು.

ಇದನ್ನೂ ಓದಿ: ಜಮ್ಮುವಿನಲ್ಲಿ ಸಭೆಯ ವೇಳೆ ಅಸ್ವಸ್ಥಗೊಂಡಿದ್ದ ಖರ್ಗೆ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಭಾರತದಲ್ಲಿ ಗೋವಿಗೆ ತಾಯಿಯ ಸ್ಥಾನಮಾನವನ್ನು ನೀಡಲಾಗಿದೆ ಮತ್ತು ಹಿಂದೂ ಧರ್ಮದಲ್ಲಿ ಗೋವನ್ನು ಪೂಜಿಸಲಾಗುತ್ತದೆ. ಇದಲ್ಲದೆ, ಹಸುವಿನ ಹಾಲು, ಮೂತ್ರ ಮತ್ತು ಸಗಣಿಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಸುವಿನ ಹಾಲು ಮಾನವ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಗೋಮೂತ್ರವು ಅನೇಕ ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us