
ಮುಂಬೈ, ಆಗಸ್ಟ್ 01: ವಿಧಾನಸಭಾ ಅಧಿವೇಶನ(Assembly Session)ದ ವೇಳೆ ಸದನದಲ್ಲಿ ಕುಳಿತು ರಮ್ಮಿ ಆಡಿದ್ದ ಮಹಾರಾಷ್ಟ್ರ ಸಚಿವ ಮಾಣಿಕ್ರಾವ್ ಅವರಿಗೆ ಕ್ರೀಡಾ ಖಾತೆ ನೀಡಲಾಗಿದೆ. ಮಾಣಿಕ್ರಾವ್ ಕೊಕಟೆ ಅವರನ್ನು ಕೃಷಿ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿದೆ ಮತ್ತು ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವರನ್ನಾಗಿ ಮಾಡಲಾಗಿದೆ.ಅವರ ಸ್ಥಾನದಲ್ಲಿ ದತ್ತಾತ್ರೇಯ ಭರಾಣೆ ಅವರನ್ನು ಈಗ ಹೊಸ ಕೃಷಿ ಸಚಿವರನ್ನಾಗಿ ನೇಮಿಸಲಾಗಿದೆ.
ಪ್ರತಿಪಕ್ಷಗಳು ಮಾಣಿಕ್ರಾವ್ ರಾಜೀನಾಮೆ ಎದುರು ನೋಡುತ್ತಿರುವ ಹೊತ್ತಲ್ಲೇ ಈ ಸೂಚನೆ ಹೊರಬಿದ್ದಿದೆ. ಈ ನಿರ್ಧಾರವನ್ನು ಎನ್‌ಸಿಪಿ (ಅಜಿತ್ ಪವಾರ್ ಬಣ) ಗೆ ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆಯ ಮೇಲೆ ತನ್ನ ಸಚಿವರಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲು ಒತ್ತಡ ಹೆಚ್ಚಾಗಿದೆ.
ವಿಧಾನಸಭಾ ಅಧಿವೇಶನದ ವೇಳೆ ಕೊಕಟೆ ಆನ್ಲೈನ್ನಲ್ಲಿ ರಮ್ಮಿ ಆಡುತ್ತಿದ್ದರು.ಈ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿತ್ತು, ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನರಚನೆ ನಡೆದಿದೆ. ಶರದ್ ಬಣದ ಶಾಸಕ ರೋಹಿತ್ ಪವಾರ್ ಅವರು ಬಿಡುಗಡೆ ಮಾಡಿದ ಈ ವೀಡಿಯೊ ಕೋಲಾಹಲಕ್ಕೆ ಕಾರಣವಾಯಿತು.
ಮತ್ತಷ್ಟು ಓದಿ: Video: ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದ ವೇಳೆ ಮೊಬೈಲ್ನಲ್ಲಿ ರಮ್ಮಿ ಆಡಿದ ಸಚಿವ
ಮಹಾರಾಷ್ಟ್ರದಲ್ಲಿನ ಕೃಷಿ ಬಿಕ್ಕಟ್ಟಿನ ನಡುವೆ ಕೊಕಟೆ ಅವರ ಅಸಂವೇದನಾಶೀಲತೆಯನ್ನು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಟೀಕಿಸಿದರು . ರಾಜ್ಯದ ರೈತರು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಕೃಷಿ ಸಚಿವರ ಈ ವರ್ತನೆ ಬೇಜವಾಬ್ದಾರಿಯನ್ನು ಸಹಿಸಲಾಗದು ಎಂದು ಹೇಳಿದ್ದಾರೆ.
ಆದರೆ ಮಾಣಿಕ್ರಾವ್ ಈ ಆರೋಪಗಳನ್ನು ನಿರಾಕರಿಸಿದ್ದರು. ಶಾಸಕಾಂಗ ತನಿಖೆಯಲ್ಲಿ ಅವರು ಸುಮಾರು 18 ರಿಂದ 22 ನಿಮಿಷಗಳ ಕಾಲ ಮೊಬೈಲ್ ಆಟಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ, ಆದರೆ ಅವರು ಕೇವಲ 10-15 ಸೆಕೆಂಡುಗಳು ಎಂದು ಹೇಳಿದ್ದರು.
Maharashtra Agriculture Minister Manikrao Kokate’s video of him playing Junglee Rummy, an online card game, on his phone in the Legislative Assembly proves how the BJP led state government is ‘Gambling’ with the lives of farmers.
Farmers are committing suicide due to lack of… pic.twitter.com/9WZpwtvSsG— Clyde Crasto (@Clyde_Crasto) July 20, 2025
ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಂದ ಕೊಕಟೆ ಅವರ ರಾಜೀನಾಮೆಯನ್ನು ವಿರೋಧ ಪಕ್ಷ ನಿರೀಕ್ಷಿಸಿತ್ತು , ಆದರೆ ಕೇವಲ ಎಚ್ಚರಿಕೆ ನೀಡಿ ಕೊಕಟೆ ಅವರ ಖಾತೆಯನ್ನು ಬದಲಿಸಲಾಗಿದೆ.ಅವರು ಕ್ಷಮೆಯಾಚಿಸಿದ್ದು, ಮುಂದೆ ಹೀಗೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಕೊಕಟೆ ಅವರು ಈ ಹಿಂದೆಯೂ ಅನೇಕ ವಿವಾದಗಳಲ್ಲಿ ಭಾಗಿಯಾಗಿದ್ದರು, 1995 ರ ವಸತಿ ವಂಚನೆ ಪ್ರಕರಣ ಮತ್ತು ರೈತರನ್ನು ಭಿಕ್ಷುಕರಿಗೆ ಹೋಲಿಸಿದ ಹೇಳಿಕೆಗಳು, ಈ ಘಟನೆಗಳಿಂದಾಗಿ, ಸರ್ಕಾರವನ್ನು ನಿರಂತರವಾಗಿ ಟೀಕಿಸಲಾಗುತ್ತಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:25 am, Fri, 1 August 25