Sign In

By signing in or creating an account, you agree with Associated Broadcasting Company's Terms & Conditions and Privacy Policy.

Sabarmati Ashram: ಸಬರಮತಿ ಆಶ್ರಮದ ಮರು ಅಭಿವೃದ್ಧಿ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಗಾಂಧೀಜಿ ಮೊಮ್ಮಗ ತುಷಾರ್ ಗಾಂಧಿ

2021ರ ನ. 25ರಂದು ಸಬರಮತಿ ಆಶ್ರಮದ ಮರುಅಭಿವೃದ್ಧಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಗುಜರಾತ್ ಹೈಕೋರ್ಟ್ ವಜಾಗೊಳಿಸಿದ ನಂತರ ತುಷಾರ್ ಗಾಂಧಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Sabarmati Ashram: ಸಬರಮತಿ ಆಶ್ರಮದ ಮರು ಅಭಿವೃದ್ಧಿ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಗಾಂಧೀಜಿ ಮೊಮ್ಮಗ ತುಷಾರ್ ಗಾಂಧಿ
ಸಬರಮತಿ ಆಶ್ರಮ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Mar 25, 2022 | 3:06 PM

ನವದೆಹಲಿ: ರಾಷ್ಟ್ರಪಿತ ಗಾಂಧೀಜಿಯ ಸಬರಮತಿ ಆಶ್ರಮದ (Sabarmati Ashram) ವಿನ್ಯಾಸವನ್ನು ಬದಲಾಯಿಸುವ ರೀತಿಯಲ್ಲಿ ಪುನರಾಭಿವೃದ್ಧಿ ಮಾಡುವ ಗುಜರಾತ್ ಸರ್ಕಾರದ (Gujarat Government) ಪ್ರಸ್ತಾವನೆಯನ್ನು ರದ್ದುಗೊಳಿಸುವಂತೆ ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ (Tushar Gandhi) ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಏಪ್ರಿಲ್ 1ರಂದು ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ರಾಷ್ಟ್ರಪಿತ ಗಾಂಧೀಜಿಯವರ (Mahatma Gandhiji) ಆಶ್ರಮದ ಮತ್ತು ಅದರ ಪ್ರಾಚೀನ ಸರಳತೆಯನ್ನು ಭ್ರಷ್ಟಗೊಳಿಸಲಾಗುತ್ತಿದೆ ಎಂದು ಗಾಂಧೀಜಿಯವರ ಮೊಮ್ಮಗ ತುಷಾರ್ ಗಾಂಧಿ ಸುಪ್ರೀಂಕೋರ್ಟ್​​ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.

2021ರ ನ. 25ರಂದು ಸಬರಮತಿ ಆಶ್ರಮದ ಮರುಅಭಿವೃದ್ಧಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಗುಜರಾತ್ ಹೈಕೋರ್ಟ್ ವಜಾಗೊಳಿಸಿದ ನಂತರ ತುಷಾರ್ ಗಾಂಧಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ತುರ್ತು ವಿಚಾರಣೆಯನ್ನು ಕೋರಿ ತುಷಾರ್ ಗಾಂಧಿ ಪರ ಹಾಜರಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಪ್ರಸ್ತಾಪಿಸಿದ ಈ ವಿಷಯವನ್ನು ಏಪ್ರಿಲ್ 1ರಂದು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್. ರಮಣ ಭರವಸೆ ನೀಡಿದರು.

2019ರ ಗುಜರಾತ್ ಸರ್ಕಾರದ ಆದೇಶವು ಸಬರಮತಿ ಆಶ್ರಮವನ್ನು “ವಿಶ್ವ ದರ್ಜೆಯ ವಸ್ತುಸಂಗ್ರಹಾಲಯ” ಮತ್ತು “ಪ್ರವಾಸಿ ತಾಣ”ವನ್ನಾಗಿ ಮಾಡಲು ಮರುವಿನ್ಯಾಸಗೊಳಿಸುವ ಮತ್ತು ಮರುಅಭಿವೃದ್ಧಿ ಮಾಡುವ ಉದ್ದೇಶವನ್ನು ಪ್ರಕಟಿಸಿದೆ ಎಂದು ತುಷಾರ್ ಗಾಂಧಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

“ಈ ಯೋಜನೆಯು ಸಬರಮತಿ ಆಶ್ರಮದ ಭೌತಿಕ ರಚನೆಯನ್ನು ಬದಲಾಯಿಸುತ್ತದೆ ಮತ್ತು ಗಾಂಧೀಜಿಯ ಸಿದ್ಧಾಂತವನ್ನು ಒಳಗೊಂಡಿರುವ ಅದರ ಪ್ರಾಚೀನ ಸರಳತೆಯನ್ನು ಭ್ರಷ್ಟಗೊಳಿಸುತ್ತದೆ. ಆಶ್ರಮವು ಇಂದು ಸಾಕಾರಗೊಳಿಸುತ್ತಿರುವ ಗಾಂಧಿ ತತ್ವಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ” ಎಂದು ತುಷಾರ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ಹೌದು, ನಾವು ಗಾಂಧಿ-ನೆಹರೂ ಕುಟುಂಬದ ಗುಲಾಮರೇ; ವಿಧಾನಸಭೆಯಲ್ಲಿ ಹೆಮ್ಮೆಯಿಂದ ಹೇಳಿಕೊಂಡ ಕಾಂಗ್ರೆಸ್ ಶಾಸಕ

75 years of India’s Independence: ಆತ್ಮನಿರ್ಭರ ಭಾರತದ ಮೂಲಕ ಗಾಂಧೀಜಿಯವರ ಕನಸು ನನಸಾಗಿಸೋಣ: ಪ್ರಧಾನಿ ಕರೆ

Published On - 3:00 pm, Fri, 25 March 22

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!