ಮಧ್ಯಪ್ರದೇಶ: ಆನ್​ಲೈನ್​ ಗೇಮ್ ವಿಚಾರವಾಗಿ ಗಲಾಟೆ, ಕೋಪದಲ್ಲಿ ಯೋಧರೊಬ್ಬರ ಕಾರಿಗೆ ಬೆಂಕಿ ಹಚ್ಚಿದ ವ್ಯಕ್ತಿ

ಆನ್​ಲೈನ್​ ಆಟದ ಗೀಳು ಯಾರನ್ನೂ ಬಿಟ್ಟಿಲ್ಲ, ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆಡುತ್ತಾರೆ. ಆ ಆಟದ ನಡುವೆ ಇಬ್ಬರ ನಡುವೆ ಗಲಾಟೆ ಶುರುವಾಗಿ ಅದು ತಾರಕಕ್ಕೇರಿ ವ್ಯಕ್ತಿಯೊಬ್ಬ ಸೈನಿಕನ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಯೋಧನ ಪತ್ನಿ ದೂರಿನ ಮೇರೆಗೆ ಮಹಾರಾಜಪುರ ಠಾಣೆ ಪೊಲೀಸರು ಖೇಮ್ರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ.

ಮಧ್ಯಪ್ರದೇಶ: ಆನ್​ಲೈನ್​ ಗೇಮ್ ವಿಚಾರವಾಗಿ ಗಲಾಟೆ, ಕೋಪದಲ್ಲಿ ಯೋಧರೊಬ್ಬರ ಕಾರಿಗೆ ಬೆಂಕಿ ಹಚ್ಚಿದ ವ್ಯಕ್ತಿ
ಕಾರುImage Credit source: India Today
Follow us
|

Updated on: Apr 18, 2024 | 9:29 AM

ಆನ್​ಲೈನ್​ ಗೇಮಿಂಗ್(Online Gaming) ವಿವಾದವು ತಾರಕಕ್ಕೇರಿ ಕೊನೆಗೆ ವ್ಯಕ್ತಿಯೊಬ್ಬ ಯೋಧರೊಬ್ಬರ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಬ್ಲು ಖೇಮ್ರಿಯಾ ಎಂದು ಗುರುತಿಸಲಾದ ವ್ಯಕ್ತಿ, ಆನ್‌ಲೈನ್ ಗೇಮ್‌ನ ಐಡಿ ಕುರಿತು ಸೈನಿಕನ ಮಗಳೊಂದಿಗೆ ಜಗಳವಾಡಿದ್ದ, ಬಳಿಕ ಮಧ್ಯರಾತ್ರಿಯಲ್ಲಿ ಅವರ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇಡೀ ಘಟನೆ ಮನೆಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯೋಧನ ಪತ್ನಿಯ ದೂರಿನ ಮೇರೆಗೆ ಪೊಲೀಸರು ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಯೋಧರ ಮಗಳು ಮತ್ತು ಆರೋಪಿ ಆನ್‌ಲೈನ್ ಗೇಮ್ ಫ್ರೀ ಫೈರ್ ಆಡುತ್ತಿದ್ದರು. ಬಬ್ಲು ಖೇಮ್ರಿಯಾ ಆಟಕ್ಕೆ ಲಕ್ಷಗಟ್ಟಲೆ ಖರ್ಚು ಮಾಡಿದ್ದ. ಯೋಧನ ಮಗಳು ಆಟವಾಡಲು ಬಬ್ಲು ಅವರ ಫ್ರೀ ಫೈರ್ ಐಡಿಯನ್ನು ತೆಗೆದುಕೊಂಡು ನಂತರ ಪಾಸ್‌ವರ್ಡ್ ಬದಲಾಯಿಸಿ ಅದನ್ನು ಅವನೊಂದಿಗೆ ಹಂಚಿಕೊಳ್ಳಲು ನಿರಾಕರಿಸಿದಾಗ ವಿವಾದ ಶುರುವಾಗಿತ್ತು.

ಇದರಿಂದ ಮನನೊಂದ ಖೇಮ್ರಿಯಾ ಮಂಗಳವಾರ ರಾತ್ರಿ ಯೋಧನ ಮನೆಯ ಹೊರಗೆ ನಿಲ್ಲಿಸಿದ್ದ ಸ್ವಿಫ್ಟ್ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಮತ್ತಷ್ಟು ಓದಿ: ಗೇಮರ್ ಗಳ ಸಂವಾದ ನಡೆಸಿ ಭಾರತದಲ್ಲಿ ಗೇಮಿಂಗ್ ಭವಿಷ್ಯ ಮತ್ತು ಇತರ ಆಯಾಮಗಳನ್ನು ಚರ್ಚಿಸಿದ ಪ್ರಧಾನಿ ನರೇಂದ್ರ ಮೋದಿ

ಯೋಧನ ಪತ್ನಿ ದೂರಿನ ಮೇರೆಗೆ ಮಹಾರಾಜಪುರ ಠಾಣೆ ಪೊಲೀಸರು ಖೇಮ್ರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ.

ಈ ಹಿಂದೆ ಖೇಮ್ರಿಯಾ ವಿರುದ್ಧ ಯೋಧರ ಮಗಳು ಕಿರುಕುಳ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದ ವಿಚಾರಣೆ ವೇಳೆ ಬಬ್ಲು ಪರಾರಿಯಾಗಿದ್ದ. ಈ ವಿಷಯಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಇಂದರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ