ಗೆಳತಿ ಕನಸು ನನಸು ಮಾಡಲು ಹತ್ತಾರು ಮಹಿಳೆಯರ ಮಾಂಗಲ್ಯ ದೋಚಿದ್ದ ಕಳ್ಳ ಸಿಕ್ಕಿಬಿದ್ದ
ಗೆಳತಿಯ ಕನಸು ನನಸು ಮಾಡಲು ಹತ್ತಾರು ಮಹಿಳೆಯರ ಮಾಂಗಲ್ಯ ದೋಚಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್, ಸರ, ವಾಹನ ಕಳ್ಳತನದ ಆರೋಪದ ಮೇಲೆ ಓಂ ಪ್ರಕಾಶ್ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆತ ಮೊದಲು ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡಿದ್ದ, ಆತನ ಗೆಳತಿಯ ಲಾಂಗ್ ಡ್ರೈವ್ ಹೋಗುವ ಕನಸನ್ನು ನನಸು ಮಾಡುವ ಸಲುವಾಗಿ ಆತ ಕಳ್ಳತನ ಮಾಡಲು ಶುರು ಮಾಡಿದ್ದ.

ಐಇಎಸ್ ಅಪಾರ್ಟ್‌ಮೆಂಟ್ ಬಳಿ ತನ್ನ ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರು ತನಿಖೆ ನಡೆಸಿದ್ದರು, ಆಗಸ್ಟ್ 7 ರಂದು ಇದೇ ರೀತಿಯ ಘಟನೆ ನಡೆದಿದ್ದು, ಸೆಕ್ಟರ್ 4 ಮಾರುಕಟ್ಟೆಯಲ್ಲಿದ್ದಾಗ ತನ್ನ ಆಪಲ್ ಐಫೋನ್ ಅನ್ನು ಕಿತ್ತುಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು.
ಎರಡೂ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗಿದೆ ಮತ್ತು ಎರಡೂ ಘಟನೆಗಳಲ್ಲಿ ಭಾಗಿಯಾಗಿರುವ ಅಪರಾಧಿ ಒಬ್ಬನೇ ಎಂದು ಕಂಡುಬಂದಿದೆ. ತಂಡವು ಆಗಸ್ಟ್ 7 ರಂದು ದ್ವಾರಕಾದ ಜೆಜೆ ಕಾಲೋನಿಯಿಂದ ಕದ್ದ ಮೋಟಾರ್‌ಸೈಕಲ್ ಜೊತೆಗೆ ಓಂ ಪ್ರಕಾಶ್ ಅಲಿಯಾಸ್ ಓಮಿಯನ್ನು ಬಂಧಿಸಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: Viral Video: ಕೈಮುಗಿದು, ದೇವರ ಚಿನ್ನವನ್ನೇ ಎಗರಿಸಿದ ಕಳ್ಳ; ವೈರಲ್ ಆಯ್ತು ವಿಡಿಯೋ
ವಿಚಾರಣೆ ವೇಳೆ ಓಮಿ ತಾನು ಈ ಹಿಂದೆ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದುದನ್ನು ಬಹಿರಂಗಪಡಿಸಿದ್ದಾನೆ. ಸುಮಾರು ಮೂರು ವರ್ಷಗಳ ಹಿಂದೆ, ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ತನ್ನ ಗೆಳತಿಯನ್ನು ಭೇಟಿಯಾದನು ಮತ್ತು ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರೂ ಮಾದಕ ವ್ಯಸನಿಯಾಗಿದ್ದರು, ಹಾಗಾಗಿ ಆತ ಕೆಲಸ ಕಳೆದುಕೊಂಡಿದ್ದ, ಗೆಳತಿಗೆ ಅಲ್ಲಿಲ್ಲಿ ಸುತ್ತಾಡಬೇಕೆನ್ನುವ ಆಸೆ, ಬೇಗ ಹಣ ಗಳಿಸಬೇಕೆನ್ನುವ ದುಡುಕಿನ ನಿರ್ಧಾರದಲ್ಲಿ ಆತ ಕಳ್ಳತನಕ್ಕಿಳಿದಿದ್ದಾನೆ. ದ್ವಾರಕಾ ಉತ್ತರ, ದ್ವಾರಕಾ ದಕ್ಷಿಣ, ಬಿಂದಾಪುರ ಮತ್ತು ದಬ್ರಿಯಲ್ಲಿ ಸರಗಳ್ಳತನ ಮತ್ತು ಕಳ್ಳತನದ ಎಂಟು ಪ್ರಕರಣಗಳು ಬಯಲಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ