AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಥುರಾದಲ್ಲಿ ನಕಲಿ ಪನೀರ್ ದಂಧೆ ಬೇಧಿಸಿದ ಅಧಿಕಾರಿಗಳು: 500 ಕೆಜಿ ಕಲುಷಿತ ಪನೀರ್ ನಾಶ, ಅಪಾಯಕಾರಿ ಕೆಮಿಕಲ್ ಜಪ್ತಿ

ಮಥುರಾದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿ 500 ಕೆಜಿ ನಕಲಿ ಪನೀರ್ ನಾಶಪಡಿಸಿದ್ದಾರೆ. ಬಟ್ಟೆ ಬಿಳುಪುಗೊಳಿಸುವ 'ಟಿನೋಪೋಲ್' ಸೇರಿದಂತೆ ಅಪಾಯಕಾರಿ ರಾಸಾಯನಿಕಗಳನ್ನು ಪನೀರ್ ತಯಾರಿಕೆಗೆ ಬಳಸಲಾಗುತ್ತಿತ್ತು. ಇದು ಜಠರ, ಯಕೃತ್ತಿನ ಸಮಸ್ಯೆ ಹಾಗೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. 2000 ಲೀಟರ್ ಕೃತಕ ಹಾಲನ್ನು ಜಪ್ತಿ ಮಾಡಿದ್ದು, ಅಂತಾರಾಜ್ಯ ದಂಧೆ ಸಕ್ರಿಯವಾಗಿದೆ.

ಮಥುರಾದಲ್ಲಿ ನಕಲಿ ಪನೀರ್ ದಂಧೆ ಬೇಧಿಸಿದ ಅಧಿಕಾರಿಗಳು: 500 ಕೆಜಿ ಕಲುಷಿತ ಪನೀರ್ ನಾಶ, ಅಪಾಯಕಾರಿ ಕೆಮಿಕಲ್ ಜಪ್ತಿ
ಪನೀರ್
ನಯನಾ ರಾಜೀವ್
|

Updated on: Aug 19, 2026 | 10:43 AM

Share

ಮಥುರಾ, ಆಗಸ್ಟ್​ 19: ಉತ್ತರ ಪ್ರದೇಶದ ಮಥುರಾದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿ, ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗಿದ್ದ ಸುಮಾರು 500 ಕೆಜಿ ಕಲುಷಿತ ಹಾಗೂ ನಕಲಿ ಪನೀರ್(Paneer) ಅನ್ನು ವಶಪಡಿಸಿಕೊಂಡು ಸ್ಥಳದಲ್ಲೇ ನಾಶಪಡಿಸಿದ್ದಾರೆ. ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FSDA) ನಡೆಸಿದ ಈ ಕಾರ್ಯಾಚರಣೆಯಲ್ಲಿ ನಕಲಿ ಡೈರಿ ದಂಧೆಯು ಬಯಲಾಗಿದ್ದು, ಪನೀರ್ ತಯಾರಿಕೆಗೆ ಬಳಸುತ್ತಿದ್ದ ಭಾರಿ ಪ್ರಮಾಣದ ಅಪಾಯಕಾರಿ ರಾಸಾಯನಿಕಗಳು ಹಾಗೂ ಕಚ್ಚಾ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಬಟ್ಟೆ ಬಿಳುಪುಗೊಳಿಸುವ ಕೆಮಿಕಲ್ ಬಳಸಿ ಪನೀರ್ ತಯಾರಿ

ಅಪಾಯಕಾರಿ ರಾಸಾಯನಿಕಗಳ ಬಳಕೆ: ದಾಳಿಯ ವೇಳೆ ಅಧಿಕಾರಿಗಳು ಸಂಸ್ಕರಿಸಿದ ಸೋಯಾಬೀನ್ ಎಣ್ಣೆ, ಇರಾ ಸೋಡಿಯಂ ಹೈಡ್ರೋಜನ್ ಹಾಗೂ ಬಟ್ಟೆ ತೊಳೆಯಲು ಬಳಸುವ ‘ಟಿನೋಪೋಲ್’ ಎಂಬ ಬಿಳುಪುಗೊಳಿಸುವ ರಾಸಾಯನಿಕವನ್ನು ವಶಪಡಿಸಿಕೊಂಡಿದ್ದಾರೆ.

2,000 ಲೀಟರ್ ಹಾಲು ಜಪ್ತಿ: ಸುಮಾರು1.25 ಲಕ್ಷ ಮೌಲ್ಯದ 2 ಸಾವಿರ ಲೀಟರ್ ಸಂಶಯಾಸ್ಪದ ಕೃತಕ ಹಾಲನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 9 ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.

ಮತ್ತಷ್ಟು ಓದಿ: ಪನೀರ್ ಸೇವನೆಯಿಂದ ಆರೋಗ್ಯಕ್ಕೆ ಆಗುವ 8 ಪ್ರಯೋಜನಗಳಿವು

ಏನಿದು ‘ಅನಲಾಗ್ ಪನೀರ್’

ನಕಲಿ ಡೈರಿ ಉತ್ಪನ್ನ: ನೈಜ ಹಾಲಿನ ಬದಲು ಅಗ್ಗದ ಸಸ್ಯಜನ್ಯ ಎಣ್ಣೆ, ಪಾಮ್ ಆಯಿಲ್, ಸೋಯಾ ಪ್ರೋಟೀನ್ ಮತ್ತು ರಾಸಾಯನಿಕಗಳನ್ನು ಬೆರೆಸಿ ನೈಜ ಪನೀರ್‌ನಂತೆ ಕಾಣುವಂತೆ ಮಾಡುವ ಉತ್ಪನ್ನಕ್ಕೆ ‘ಅನಲಾಗ್ ಪನೀರ್’ ಎನ್ನಲಾಗುತ್ತದೆ.ಈ ರೀತಿಯ ಕೃತಕ ಪನ್ನೀರ್ ಸೇವನೆಯಿಂದ ಜಠರದ ಕಾಯಿಲೆಗಳು, ಯಕೃತ್ತಿನ ಸಮಸ್ಯೆ ಹಾಗೂ ದೀರ್ಘಾವಧಿಯಲ್ಲಿ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರುವ ಅಪಾಯವಿರುತ್ತದೆ.

ಹಲವು ರಾಜ್ಯಗಳಲ್ಲಿ ನಿಷೇಧ: ಮಹಾರಾಷ್ಟ್ರ, ಗುಜರಾತ್ ಹಾಗೂ ಛತ್ತೀಸ್‌ಗಢ ರಾಜ್ಯಗಳನ್ನು ಅನುಸರಿಸಿ, ಇತ್ತೀಚೆಗೆ ಮಧ್ಯಪ್ರದೇಶ ಸರ್ಕಾರವೂ ಕೂಡ ಅನಲಾಗ್ ಪನೀರ್ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಪಶ್ಚಿಮ ಉತ್ತರ ಪ್ರದೇಶದ ಶಾಮ್ಲಿ, ಬಾಗ್‌ಪತ್ ಹಾಗೂ ಹರಿಯಾಣದ ಮೇವಾತ್‌ನಿಂದ ದೆಹಲಿ-ಎನ್‌ಸಿಆರ್‌ನ ಹೋಟೆಲ್ ಮತ್ತು ಮಾರುಕಟ್ಟೆಗಳಿಗೆ ಇಂತಹ ನಕಲಿ ಪನೀರ್, ಖೋವಾ ಮತ್ತು ಹಾಲು ಪೂರೈಕೆಯಾಗುವ ದೊಡ್ಡ ಅಂತಾರಾಜ್ಯ ದಂಧೆ ಸಕ್ರಿಯವಾಗಿದ್ದು, ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ