ಈ ಹಣಕ್ಕೂ ಕಾಂಗ್ರೆಸ್​ಗೂ ಸಂಬಂಧವಿಲ್ಲ: ಐಟಿ ದಾಳಿ ಬಳಿಕ ಕಾಂಗ್ರೆಸ್​ ಸಂಸದ ಧೀರಜ್​ ಸಾಹು ಮೊದಲ ಪ್ರತಿಕ್ರಿಯೆ

ಕಾಂಗ್ರೆಸ್​ ಸಂಸದ ಧೀರಜ್ ಸಾಹು ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ 350 ಕೋಟಿ ರೂ.ಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದರು. ಇದೀಗ ದಾಳಿ ಬಳಿಕ ಸಾಹು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಹಣಕ್ಕೂ ಕಾಂಗ್ರೆಸ್​ಗೂ ಯಾವುದೇ ಸಂಬಂಧವಿಲ್ಲ, ಕಳೆದ 30-35 ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲು, ಈ ಘಟನೆ ನೋವುಂಟು ಮಾಡಿದೆ.

ಈ ಹಣಕ್ಕೂ ಕಾಂಗ್ರೆಸ್​ಗೂ ಸಂಬಂಧವಿಲ್ಲ: ಐಟಿ ದಾಳಿ ಬಳಿಕ ಕಾಂಗ್ರೆಸ್​ ಸಂಸದ ಧೀರಜ್​ ಸಾಹು ಮೊದಲ ಪ್ರತಿಕ್ರಿಯೆ
ಧೀರಜ್ ಸಾಹುImage Credit source: TV9 Bharatvarsh
Follow us
ನಯನಾ ರಾಜೀವ್
|

Updated on: Dec 16, 2023 | 10:07 AM

ಕಾಂಗ್ರೆಸ್​ ಸಂಸದ ಧೀರಜ್ ಸಾಹು(Dheeraj Sahu) ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ 350 ಕೋಟಿ ರೂ.ಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದರು. ಇದೀಗ ದಾಳಿ ಬಳಿಕ ಸಾಹು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಹಣಕ್ಕೂ ಕಾಂಗ್ರೆಸ್​ಗೂ ಯಾವುದೇ ಸಂಬಂಧವಿಲ್ಲ, ಕಳೆದ 30-35 ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲು, ಈ ಘಟನೆ ನೋವುಂಟು ಮಾಡಿದೆ.

ಇದು ಮದ್ಯ ಮಾರಾಟದಿಂದ ಬಂದ ಆದಾಯ, ವಸೂಲಿ ಮಾಡಿರುವ ಹಣ ನನ್ನ ಸಂಸ್ಥೆಗೆ ಸೇರಿದ್ದು ಎಂದು ಹೇಳಿದ್ದಾರೆ. ಶಾಲೆಗಳು, ಕಾಲೇಜುಗಳು ಸೇರಿದಂತೆ ಭಿನ್ನ ವ್ಯವಹಾರಗಳ ಮೂಲಕ ಗಳಿಸಿರುವ ಹಣ ಇದು, ತನ್ನ ಸಹೋದರ, ತಂದೆ ಎಲ್ಲರೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಬಡವರಿಗೆ ಸಹಾಯ ಮಾಡಿದ್ದಾರೆ, ಎಷ್ಟೋ ಶಾಲೆ, ಕಾಲೇಜುಗಳನ್ನು ತೆರೆದಿದ್ದೇವೆ. ನಮ್ಮ ಸಂಸ್ಥೆಯು 100 ವರ್ಷಗಳಿಂದ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಹಣ ನನ್ನದಲ್ಲ, ಇದು ನನ್ನ ಕುಟುಂಬ ಮತ್ತು ಇತರ ಸಂಸ್ಥೆಗಳಿಗೆ ಸೇರಿದ್ದು, ಐಟಿ ದಾಳಿ ಮಾಡಿ ವಶಪಡಿಸಿಕೊಂಡಿರುವ ಎಲ್ಲ ಹಣಕ್ಕೂ ದಾಖಲೆ ನೀಡುತ್ತೇನೆ ಎಂದಿದ್ದಾರೆ. ಒಡಿಶಾ ಮೂಲದ ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್‌ನಲ್ಲಿ ನಡೆಸಿದ ಶೋಧದ ವೇಳೆ 351 ಕೋಟಿ ಹಣವನ್ನು ವಶಪಡಿಸಿಕೊಂಡಿದೆ. ಕಂಪನಿಯು ಧೀರಜ್ ಸಾಹು ಜೊತೆ ಸಂಪರ್ಕ ಹೊಂದಿದೆ ಎನ್ನಲಾಗಿದೆ.

ಮತ್ತಷ್ಟು ಓದಿ: ಧೀರಜ್ ಸಾಹು ಐಟಿ ದಾಳಿ ಕೇಸ್: ಭ್ರಷ್ಟಾಚಾರ ಅವರ ಸ್ವಭಾವದಲ್ಲೇ ಇದೆ: ಕಾಂಗ್ರೆಸ್​ ವಿರುದ್ಧ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ

ಅಮಿತ್ ಶಾ ಮಾತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದು, ಭ್ರಷ್ಟಾಚಾರ ಅವರ ಸ್ವಭಾವದಲ್ಲಿಯೇ ಅಡಿಗಿರುವುದರಿಂದ ಕಾಂಗ್ರೆಸ್ ಮೌನಕ್ಕೆ ಶರಣಾಗಿದೆ. ಸ್ವಾತಂತ್ರ್ಯದ ನಂತರ ಸಂಸದರೊಬ್ಬರ ಮನೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದು, ನನಗೆ ತುಂಬಾ ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಧೀರಜ್ ಸಾಹು ಮನೆಯಲ್ಲಿ ಕೋಟ್ಯಂತರ ರೂ. ಹಣ ಸಿಕ್ಕಿದೆ. ಆದರೆ ಇಡೀ INDI ಮೈತ್ರಿಕೂಟವು ಈ ಭ್ರಷ್ಟಾಚಾರದ ಬಗ್ಗೆ ಮೌನವಹಿಸಿದೆ ಎಂದು ಕಿಡಿಕಾರಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ