Monsoon ಈ ತಿಂಗಳಲ್ಲಿ ಸಾಧಾರಣ ಮುಂಗಾರು ಸಾಧ್ಯತೆ; ಎರಡನೇ ವಾರದಲ್ಲಿ ಅಬ್ಬರಿಸಲಿದೆ ಮಳೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 01, 2021 | 7:24 PM

ಜುಲೈನಲ್ಲಿ ಮಧ್ಯ ಭಾರತದ ಕೆಲವು ಭಾಗಗಳು ಮತ್ತು ಪರ್ಯಾಯ ದ್ವೀಪ ಭಾರತದ ಸಮೀಪ ಪ್ರದೇಶಗಳು ಮತ್ತು ಗಂಗಾ ಬಯಲು ಪ್ರದೇಶಗಳಲ್ಲಿ ‘ಸಾಧಾರಣ’ ದಿಂದ ‘ಸಾಧಾರಣಕ್ಕಿಂತ ಹೆಚ್ಚಿನ’ ಮಳೆಯಾಗುವ ಸಾಧ್ಯತೆಯಿದೆ.

Monsoon ಈ ತಿಂಗಳಲ್ಲಿ ಸಾಧಾರಣ ಮುಂಗಾರು ಸಾಧ್ಯತೆ; ಎರಡನೇ ವಾರದಲ್ಲಿ ಅಬ್ಬರಿಸಲಿದೆ ಮಳೆ
ಜಮ್ಮುವಿನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿರುವ ರೈತ
Follow us on

ದೆಹಲಿ: ಜುಲೈನಲ್ಲಿ ಮುಂಗಾರು ಮಳೆ ದೀರ್ಘಾವಧಿಯ ಸರಾಸರಿ (LPA) ಯ 94 ರಿಂದ 106% ರ ನಡುವೆ ‘ಸಾಧಾರಣ’ ಆಗಿರಲಿರುವ ಸಾಧ್ಯತೆಯಿದೆ. ಜುಲೈನಲ್ಲಿ ಹೆಚ್ಚಿನ ಮಾನ್ಸೂನ್ ಮಳೆ ಸಾಮಾನ್ಯವಾಗಿ ದಾಖಲಾದಾಗ, ವಾಯುವ್ಯ ಭಾರತದ ಅನೇಕ ಪ್ರದೇಶಗಳಲ್ಲಿ ದಕ್ಷಿಣ ಪರ್ಯಾಯ ದ್ವೀಪ, ಮಧ್ಯ, ಪೂರ್ವ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ‘ಸಾಧಾರಣಕ್ಕಿಂತ ಕಡಿಮೆ’ ರಿಂದ ‘ಸಾಧಾರಣ ’ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಹೇಳಿದೆ.

ಜುಲೈನಲ್ಲಿ ಮಧ್ಯ ಭಾರತದ ಕೆಲವು ಭಾಗಗಳು ಮತ್ತು ಪರ್ಯಾಯ ದ್ವೀಪ ಭಾರತದ ಸಮೀಪ ಪ್ರದೇಶಗಳು ಮತ್ತು ಗಂಗಾ ಬಯಲು ಪ್ರದೇಶಗಳಲ್ಲಿ ‘ಸಾಧಾರಣ’ ದಿಂದ ‘ಸಾಧಾರಣಕ್ಕಿಂತ ಹೆಚ್ಚಿನ’ ಮಳೆಯಾಗುವ ಸಾಧ್ಯತೆಯಿದೆ.

ಇತ್ತೀಚಿನ ಜಾಗತಿಕ ಮಾದರಿ ಮುನ್ಸೂಚನೆಗಳು ಚಾಲ್ತಿಯಲ್ಲಿರುವ ತಟಸ್ಥ ಎಲ್ ನಿನೊ-ಸದರ್ನ್ ಆಸಿಲೇಷನ್ (ENSO) ಪರಿಸ್ಥಿತಿಗಳು ಈಕ್ವಿಟೋರಿಯಲ್ ಪೆಸಿಫಿಕ್ ಮಹಾಸಾಗರದ ಮೇಲೆ ಮುಂದುವರಿಯುವ ಸಾಧ್ಯತೆಯಿದೆ.
ತಟಸ್ಥ ENSO ಪರಿಸ್ಥಿತಿಗಳು ಮಾನ್ಸೂನ್ ಮೇಲೆ ಪರಿಣಾಮ ಬೀರದಿದ್ದರೂ, ಋಣಾತ್ಮಕ ಐಒಡಿ ಪರಿಸ್ಥಿತಿಗಳು ಭಾರತೀಯ ಮಾನ್ಸೂನ್ ಗೆ ಅನುಕೂಲಕರವಾಗಿಲ್ಲ. ಜುಲೈನಲ್ಲಿ ದೇಶದಲ್ಲಿ ಸಾಮಾನ್ಯ ಮುಂಗಾರಿಗೆ ಇನ್ನೂ ಹೆಚ್ಚಿನ ಸಾಧ್ಯತೆ ಇದೆ ”ಎಂದು ಐಎಂಡಿಯ ಡೈರೆಕ್ಟ್ ಜನರಲ್ ಎಂ ಮೊಹಾಪಾತ್ರ ಹೇಳಿದರು.

ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಮೇಲಿನ ಸಮುದ್ರದ ಮೇಲ್ಮೈ ತಾಪಮಾನ (ಎಸ್‌ಎಸ್‌ಟಿ) ಪರಿಸ್ಥಿತಿಗಳು ಭಾರತೀಯ ಮಾನ್ಸೂನ್‌ನ ಮೇಲೆ ಬಲವಾದ ಪ್ರಭಾವ ಬೀರುತ್ತವೆ ಎಂದು ತಿಳಿದುಬಂದಿದೆ. ಈ ಸಾಗರ ಜಲಾನಯನ ಪ್ರದೇಶಗಳ ಮೇಲೆ ಸಮುದ್ರದ ಮೇಲ್ಮೈ ಪರಿಸ್ಥಿತಿಗಳ ವಿಕಾಸವನ್ನು ಐಎಮ್‌ಡಿ ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಜೂನ್ 19 ರ ವೇಳೆಗೆ ಹರಿಯಾಣ, ದೆಹಲಿ, ಪಂಜಾಬ್ ಸೇರಿದಂತೆ ವಾಯುವ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ ಮಾನ್ಸೂನ್ ದೇಶದ ಹೆಚ್ಚಿನ ಭಾಗಗಳನ್ನು ಒಳಗೊಂಡಿದೆ.ಆದರೆ ಜೂನ್ 26 ರಿಂದ ಮಾನ್ಸೂನ್ ದುರ್ಬಲಗೊಳ್ಳಲು ಪ್ರಾರಂಭಿಸಿತು ಎಂದು ಮೊಹಾಪಾತ್ರ ಹೇಳಿದರು. ಕಳೆದ ಎರಡು ದಿನಗಳಲ್ಲಿ ಪ್ರಾದೇಶಿಕವಾಗಿ ಮಾನ್ಸೂನ್ ವ್ಯಾಪ್ತಿ ಗಮನಾರ್ಹವಾಗಿ ಕಡಿಮೆಯಾಗಿದೆ ಮತ್ತು ಮುಂದಿನ 7 ರಿಂದ 10 ದಿನಗಳಲ್ಲಿ ಮಾನ್ಸೂನ್ ಬಿರುಸುಗೊಳ್ಳುವ ಸಾಧ್ಯತೆಯಿಲ್ಲ ಎಂದು ಅವರು ಹೇಳಿದರು. “ಜುಲೈ 11 ಅಥವಾ 12 ರ ಸುಮಾರಿಗೆ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಅವಕಾಶವಿದೆ. ಅದಕ್ಕೂ ಮೊದಲು ಮಾನ್ಸೂನ್ ಅಬ್ಬರಿಸುವ ಸಾಧ್ಯತೆಯಿಲ್ಲ” ಎಂದು ಮೊಹಾಪಾತ್ರ ಹೇಳಿದರು.

ಮಳೆಗಾಲದ ಪರಿಸ್ಥಿತಿಗಳು ಕೃಷಿ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಐಎಂಡಿ ಎಚ್ಚರಿಸಿದೆ. ವಿಶೇಷವಾಗಿ ದೇಶದ ಅನೇಕ ಭಾಗಗಳಲ್ಲಿ ಬೆಳೆಗಳನ್ನು ಬಿತ್ತನೆ ಮತ್ತು ಕಸಿ ಮಾಡುವ ಪ್ರಕ್ರಿಯೆಗೆ.
ಅರಬ್ಬಿ ಸಮುದ್ರದಿಂದ ದಕ್ಷಿಣ-ಪಶ್ಚಿಮ ಮಾರುತಗಳು ಮುಂದಿನ ಎರಡು ದಿನಗಳಲ್ಲಿ ದೆಹಲಿ ಸೇರಿದಂತೆ ವಾಯುವ್ಯ ಪ್ರದೇಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ನಿರೀಕ್ಷಿಸುತ್ತಿದ್ದಾರೆ. ಇದು ಶಾಖ ತರಂಗ ಪರಿಸ್ಥಿತಿಗಳನ್ನು ತಗ್ಗಿಸುವ ಸಾಧ್ಯತೆಯಿದೆ. ಆದರೆ ಆರ್ದ್ರತೆ ಹೆಚ್ಚಾಗುತ್ತದೆ. ಇದು ತುಂಬಾ ಅನಾನುಕೂಲ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಏಕೆಂದರೆ ಶಾಖದ ಪ್ರಭಾವವು ಹೆಚ್ಚಿನ ಆರ್ದ್ರತೆಯೊಂದಿಗೆ ಎದ್ದು ಕಾಣುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:  ‘ಇದಕ್ಕೆ ಉತ್ತರ ಕೊಡುತ್ತೇನೆ’; ತೇಜೋವಧೆ ಮಾಡಿದ ಮಾಧ್ಯಮಕ್ಕೆ ರಕ್ಷಿತ್​ ಶೆಟ್ಟಿ ಖಡಕ್​ ಎಚ್ಚರಿಕೆ