ಕೋಲ್ಕತ್ತಾ: ಅತ್ಯಾಚಾರ ಆರೋಪಿ ರಾಯ್ ಎಷ್ಟು ಕ್ರೂರಿ ಎಂಬುದನ್ನು ವಿವರಿಸಿದ ಅತ್ತೆ

ಕೋಲ್ಕತ್ತಾ ಅತ್ಯಾಚಾರ ಆರೋಪಿ ಸಂಜಯ್ ರಾಯ್​ನನ್ನು ಗಲ್ಲಿಗೇರಿಸಿ ಎಂದು ಆತನ ಅತ್ತೆ ಹೇಳಿದ್ದಾರೆ. ಆತ ತನ್ನ ಮಗಳಿಗೆ ಕೊಟ್ಟಿರುವ ಕಷ್ಟಗಳ ಕುರಿತು ಮಾತನಾಡಿದ್ದಾರೆ. ಆತ ತನ್ನ ಮಗಳು ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಆಕೆಯ ಹೊಟ್ಟೆಗೆ ಒದ್ದು ಗರ್ಭಪಾತ ಮಾಡಿಸಿದ್ದ ಎಂದು ಹೇಳಿದ್ದಾರೆ.

ಕೋಲ್ಕತ್ತಾ: ಅತ್ಯಾಚಾರ ಆರೋಪಿ ರಾಯ್ ಎಷ್ಟು ಕ್ರೂರಿ ಎಂಬುದನ್ನು ವಿವರಿಸಿದ ಅತ್ತೆ
ಸಂಜಯ್ ರಾಯ್
Follow us
ನಯನಾ ರಾಜೀವ್
|

Updated on: Aug 20, 2024 | 11:25 AM

ಕೋಲ್ಕತ್ತಾದ ಆರ್​ಜಿ ಕರ್ ಕಾಲೇಜು, ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ಸಂಜಯ್ ರಾಯ್ ಎಷ್ಟು ಕ್ರೂರಿ ಎಂಬುದನ್ನು ಆತನ ಅತ್ತೆ ವಿವರಿಸಿದ್ದಾರೆ. ಸಂಜಯ್ ರಾಯ್ ಪತ್ನಿ ಮೂರು ತಿಂಗಳ ಗಣರ್ಭಿಣಿಯಾಗಿದ್ದಾಗ ಆಕೆಯ ಹೊಟ್ಟೆಗೆ ಒದ್ದು, ಹಲ್ಲೆ ನಡೆಸಿದ ಗರ್ಭಪಾತ ಮಾಡಿಸಿದ್ದ ಎನ್ನುವ ವಿಚಾರವನ್ನು ಅವರು ತಿಳಿಸಿದ್ದಾರೆ.

ಆತನನ್ನು ಗಲ್ಲಿಗೇರಿಸುವುದೇ ಸೂಕ್ತ ಎಂದಿರುವ ಅವರು, ತನ್ನ ಮಗಳು ಮತ್ತು ರಾಯ್ ಮದುವೆಯಾಗಿ 2 ವರ್ಷಗಳಾಗಿದ್ದವು, ತನ್ನ ಮಗಳೊಂದಿಗೆ ಆತನ ಮದುವೆ ಎರಡನೇ ಮದುವೆಯಾಗಿತ್ತು. ಆರಂಭದಲ್ಲಿ 6 ತಿಂಗಳು ಎಲ್ಲವೂ ಚೆನ್ನಾಗಿತ್ತು. ಆಕೆ ಗರ್ಭಿಣಿಯಾದಾಗ ಆತ ಮಗಳ ಹೊಟ್ಟೆಗೆ ಒದ್ದು ಗರ್ಭಪಾತ ಮಾಡಿಸಿದ್ದ, ನಂತರ ಪೊಲೀಸರಿಗೆ ನಾವು ದೂರು ನೀಡಿದ್ದೆವು. ನನ್ನ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಳು, ಔಷಧಿ ಸಂಪೂರ್ಣ ಖರ್ಚನ್ನು ತಾನೇ ನೋಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ಆತನನ್ನು ಗಲ್ಲಿಗೇರಿಸಿ ಅಥವಾ ನಿಮಗೆ ಬೇಕಾಗಿದ್ದನ್ನು ಮಾಡಿ, ನಾನು ಆತ ಮಾಡಿರುವ ಅಪರಾಧದ ಬಗ್ಗೆ ಮಾತನಾಡುವುದಿಲ್ಲ, ಅದನ್ನು ಆತ ಒಬ್ಬನೇ ಮಾಡಲು ಸಾಧ್ಯವಿಲ್ಲ, ಅವನಿಗೆ ಆ ಸಾಮರ್ಥ್ಯವಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ: ಸಂಜಯ್ ರಾಯ್ ಏಕೈಕ ಆರೋಪಿ, ಬೇರೆಯವರು ಭಾಗಿಯಾಗಿರುವ ಕುರುಹಿಲ್ಲ

ಆರೋಪಿ ಸಂಜಯ್ ರಾಯ್ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದವು. ಆತನಿಗೆ ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಹೋಗಲು ಅವಕಾಶವಿತ್ತು.

ಆತನ ಅನುಮಾನಾಸ್ಪದ ಚಟುವಟಿಕೆಗಳನ್ನು ನೋಡಿ ಆತನನ್ನು ಬಂಧಿಸಲಾಯಿತು. ಆತ ಆಸ್ಪತ್ರೆಯಲ್ಲಿ ಬೇರೆ ಹೆಣ್ಣುಮಕ್ಕಳ ಜತೆಯೂ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ