AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಕ್ಸ್‌ಪೈರಿ ದಿನಾಂಕ ಬದಲಿಸಿ ಜನರ ಜೀವದ ಜೊತೆ ಚೆಲ್ಲಾಟ:ಮುಂಬೈನಲ್ಲಿ 75.5 ಲಕ್ಷ ರೂ. ಮೌಲ್ಯದ ಮ್ಯಾಗಿ, ಲೇಸ್, ಕುರ್ಕುರೆ ಜಪ್ತಿ

ಮುಂಬೈನಲ್ಲಿ ಅವಧಿ ಮೀರಿದ ಮ್ಯಾಗಿ, ಲೇಸ್, ಕುರ್ಕುರೆಗಳಂತಹ ಆಹಾರ ಉತ್ಪನ್ನಗಳಿಗೆ ಹೊಸ ಸ್ಟಿಕ್ಕರ್ ಹಚ್ಚಿ ಮರುಮಾರಾಟ ಮಾಡುತ್ತಿದ್ದ ಭಾರಿ ವಂಚನೆ ಬಯಲಾಗಿದೆ. ಮಹಾರಾಷ್ಟ್ರ FDA ಮತ್ತು ಪೊಲೀಸರು 75.5 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಆಹಾರ ಜಪ್ತಿ ಮಾಡಿದ್ದಾರೆ. ಜನರ ಜೀವದ ಜೊತೆ ಚೆಲ್ಲಾಟವಾಡುವ ಈ ಆಹಾರ ಕಲಬೆರಕೆ ತಡೆಯಲು, ಗ್ರಾಹಕರು ಉತ್ಪನ್ನಗಳ ಮೂಲ ದಿನಾಂಕ ಮತ್ತು ಪ್ಯಾಕಿಂಗ್ ಸೀಲ್‌ಗಳನ್ನು ಪರಿಶೀಲಿಸುವುದು ಕಡ್ಡಾಯ.

ಎಕ್ಸ್‌ಪೈರಿ ದಿನಾಂಕ ಬದಲಿಸಿ ಜನರ ಜೀವದ ಜೊತೆ ಚೆಲ್ಲಾಟ:ಮುಂಬೈನಲ್ಲಿ  75.5 ಲಕ್ಷ ರೂ. ಮೌಲ್ಯದ ಮ್ಯಾಗಿ, ಲೇಸ್, ಕುರ್ಕುರೆ ಜಪ್ತಿ
ಆಹಾರ
ನಯನಾ ರಾಜೀವ್
|

Updated on: Sep 01, 2026 | 8:55 AM

Share

ಮುಂಬೈ, ಸೆಪ್ಟೆಂಬರ್ 1: ಖ್ಯಾತ ಕಂಪನಿಗಳ ಆಹಾರ(Food) ಉತ್ಪನ್ನಗಳ ಅವಧಿ ಮುಗಿದ ದಿನಾಂಕಗಳನ್ನು ತಿರುಚಿ, ಹೊಸ ಸ್ಟಿಕ್ಕರ್‌ಗಳನ್ನು ಅಂಟಿಸಿ ಮಾರುಕಟ್ಟೆಗೆ ಬಿಡುತ್ತಿದ್ದ ಆಹಾರ ಕಲಬೆರಕೆ ಹಾಗೂ ವಂಚನೆ ದಂಧೆಯನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಹಾಗೂ ನವಿ ಮುಂಬೈ ಅಪರಾಧ ವಿಭಾಗದ ಪೊಲೀಸರು ಜಂಟಿಯಾಗಿ ಬಯಲಿಗೆಳೆದಿದ್ದಾರೆ.

ತುರ್ಬೆಯ ಟಿಟಿಸಿ (TTC) ಕೈಗಾರಿಕಾ ಪ್ರದೇಶದಲ್ಲಿರುವ ‘ಸಾಧನಾ ಎಂಟರ್‌ಪ್ರೈಸಸ್’ ಘಟಕದ ಮೇಲೆ ಸತತ ದಾಳಿ ನಡೆಸಿದ ಅಧಿಕಾರಿಗಳು, ಬರೋಬ್ಬರಿ75.5 ಲಕ್ಷ ರೂ ಮೌಲ್ಯದ ಅವಧಿ ಮೀರಿದ ಲೇಸ್, ಕುರ್ಕುರೆ, ಮ್ಯಾಗಿ ನೂಡಲ್ಸ್ ಸೇರಿದಂತೆ ಭಾರಿ ಪ್ರಮಾಣದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ದಿನಾಂಕ ಮತ್ತು ಲೇಬಲ್ ತಿದ್ದುಪಡಿ: ಗೋದಾಮಿನಲ್ಲಿ ಅವಧಿ ಮುಗಿದ ಆಹಾರ ಪ್ಯಾಕೆಟ್‌ಗಳ ಮೂಲ ಉತ್ಪಾದನಾ ದಿನಾಂಕ (Mfg Date), ಮುಕ್ತಾಯ ದಿನಾಂಕ (Expiry Date) ಹಾಗೂ ಪೌಷ್ಠಿಕಾಂಶದ ಲೇಬಲ್‌ಗಳನ್ನು ಅಳಿಸಿ, ನಕಲಿ ಸ್ಟಿಕ್ಕರ್‌ಗಳ ಮೂಲಕ ಹೊಸ ದಿನಾಂಕಗಳನ್ನು ಮುದ್ರಿಸಿ ಮರುಪ್ಯಾಕ್ ಮಾಡಲಾಗುತ್ತಿತ್ತು.

ವಶಪಡಿಸಿಕೊಂಡ ಸಾಮಗ್ರಿಗಳು: ಲೇಸ್ ಚಿಪ್ಸ್, ವಿವಿಧ ಶೈಲಿಯ ಕುರ್ಕುರೆ, ಫನ್ ಫ್ಲಿಪ್ಸ್, ಮ್ಯಾಗಿ ಮಸಾಲಾ ಹಾಗೂ ಅಟ್ಟಾ ನೂಡಲ್ಸ್ ಸೇರಿದಂತೆ ರೆಡಿ ಟು ಈಟ್, ರೆಡಿ ಟು ಕುಕ್ ತಿಂಡಿಗಳ ಒಟ್ಟು 8,442 ಬಾಕ್ಸ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಲೈಸೆನ್ಸ್ ಅಮಾನತು: ನಿಯಮಬಾಹಿರ ಕೃತ್ಯ ಎಸಗಿದ ಸಾಧನಾ ಎಂಟರ್‌ಪ್ರೈಸಸ್‌ನ ಅಧಿಕೃತ ಪರವಾನಗಿಯನ್ನು ಎಫ್‌ಡಿಎ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

ಮತ್ತಷ್ಟು ಓದಿ: ಜೊಮಾಟೊದಲ್ಲಿ ‘ಅನಲಾಗ್ ಡೈರಿ’ ಆಹಾರ ಪದಾರ್ಥಗಳಿಗೆ ನಿಷೇಧ: ಗ್ರಾಹಕರು ಮತ್ತು ರೆಸ್ಟೋರೆಂಟ್‌ಗಳ ಮೇಲಾಗುವ ಪರಿಣಾಮಗಳು

ಕಾನೂನು ಕ್ರಮ: ಎಫ್​ಎಸ್​ಎಸ್​ಎಐ ಪರವಾನಗಿ ಹಾಗೂ ಖರೀದಿ ಬಿಲ್‌ಗಳಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಯುನಿಕ್ ಫ್ರಾಗ್ರನ್ಸಸ್ ಮತ್ತು ಪ್ರಿಸ್ಟೈನ್ ವರ್ಲ್ಡ್‌ವೈಡ್ ಸಂಸ್ಥೆಗಳ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006(FSS Act) ಹಾಗೂ ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ತುರ್ಬೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಪೋಸ್ಟ್​

ಕರ್ನಾಟಕದ ನಕಲಿ ಪನ್ನೀರ್ ಜಾಲ: ಇತ್ತೀಚೆಗಷ್ಟೇ ಕರ್ನಾಟಕದ ಬೆಂಗಳೂರು ಹಾಗೂ ಬೆಳಗಾವಿ ಸೇರಿದಂತೆ ಹಲವು ಭಾಗಗಳಲ್ಲಿ ಕಲಬೆರಕೆ ಹಾಲಿನ ಪೌಡರ್ ಮತ್ತು ಹಾನಿಕಾರಕ ರಾಸಾಯನಿಕ ಬಳಸಿ ತಯಾರಿಸುತ್ತಿದ್ದ ನಕಲಿ ಪನ್ನೀರ್ ತಯಾರಿಕಾ ಘಟಕಗಳ ಮೇಲೆ ಎಫ್‌ಡಿಎ ಸರಣಿ ದಾಳಿ ನಡೆಸಿ ಕ್ವಿಂಟಾಲ್‌ಗಟ್ಟಲೆ ಕಳಪೆ ಪನ್ನೀರ್ ವಶಪಡಿಸಿಕೊಂಡಿತ್ತು.

ಗ್ರಾಹಕರಿಗೆ ತಜ್ಞರ ಎಚ್ಚರಿಕೆ: ಪ್ಯಾಕೇಜ್ಡ್ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಕೇವಲ ಮೇಲೆ ಅಂಟಿಸಲಾದ ಸ್ಟಿಕ್ಕರ್ ದಿನಾಂಕಗಳನ್ನು ಮಾತ್ರ ನಂಬದೆ, ಕಂಪನಿಯ ಮೂಲ ಮುದ್ರಣ, ಪ್ಯಾಕಿಂಗ್ ಸೀಲ್ ಹಾಗೂ ಬಾರ್‌ಕೋಡ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಮತ್ತು ಸಂಶಯಾಸ್ಪದ ಉತ್ಪನ್ನಗಳ ಬಗ್ಗೆ ತಕ್ಷಣವೇ ಸ್ಥಳೀಯ ಆಹಾರ ಸುರಕ್ಷತಾ ಅಧಿಕಾರಿಗೆ ದೂರು ನೀಡುವಂತೆ ಸೂಚಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ