ಮುಂಬೈ ಏರ್ಪೋರ್ಟ್ನಲ್ಲಿ 40 ಕೋಟಿ ರೂ. ಮೌಲ್ಯದ ಕೊಕೇನ್ ಸಾಗಿಸುತ್ತಿದ್ದ ಥೈಲೆಂಡ್ ಮಹಿಳೆಯ ಬಂಧನ
ಸುಮಾರು 40 ಕೋಟಿ ರೂ. ಮೌಲ್ಯದ ಕೊಕೇನ್(Cocaine) ಸಾಗಿಸುತ್ತಿದ್ದ ಥೈಲೆಂಡ್ ಮಹಿಳೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಶುಕ್ರವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಡಿಆರ್‌ಐ, ವಿಶ್ವಾಸಾರ್ಹ ಮಾಹಿತಿಯ ಮೇರೆಗೆ, ಅಡಿಸ್ ಅಬಾಬಾದಿಂದ ಆಗಮಿಸಿದ ಮಹಿಳೆಯನ್ನು ಬಂಧಿಸಿದ್ದಾರೆ.
ಸುಮಾರು 40 ಕೋಟಿ ರೂ. ಮೌಲ್ಯದ ಕೊಕೇನ್(Cocaine) ಸಾಗಿಸುತ್ತಿದ್ದ ಥೈಲೆಂಡ್ ಮಹಿಳೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ಶುಕ್ರವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಡಿಆರ್‌ಐ, ವಿಶ್ವಾಸಾರ್ಹ ಮಾಹಿತಿಯ ಮೇರೆಗೆ, ಅಡಿಸ್ ಅಬಾಬದಿಂದ ಆಗಮಿಸಿದ ಮಹಿಳೆಯನ್ನು ಬಂಧಿಸಿದ್ದಾರೆ.
ಆಕೆಯ ಪರೀಕ್ಷೆ ಮಾಡಿದಾಗ ಯಾವುದೇ ಅನುಮಾನ ಬಂದಿರಲಿಲ್ಲ, ಆದರೂ ಅವರ ಟ್ರಾಲಿ ಬ್ಯಾಗ್ನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಬಿಳಿ ಪುಡಿಯಂತಹ ವಸ್ತುವನ್ನು ಹೊಂದಿರುವ ಅನೇಕ ಪ್ಯಾಕೆಟ್ಗಳು ಕಂಡುಬಂದಿವೆ. ನಂತರ ಅದು ಕೊಕೇನ್ ಎಂದು ದೃಢಪಟ್ಟಿದೆ. ಅಂದಾಜು 40 ಕೋಟಿಗಳಷ್ಟು ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಬಂಧಿತ ಮಹಿಳೆಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು ಏರ್ಪೋರ್ಟ್ನಲ್ಲೂ 20 ಕೋಟಿ ಮೌಲ್ಯದ ಕೊಕೇನ್ ಪತ್ತೆಯಾಗಿತ್ತು ಡಿಸೆಂಬರ್ 20ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶದಿಂದ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಕೊಕೇನ್ ಜಪ್ತಿ ಮಾಡಿದ್ದರು.
ಮತ್ತಷ್ಟು ಓದಿ: ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ 11 ಜನ ವಿದ್ಯಾರ್ಥಿಗಳ ಬಂಧನ; ಉತ್ತರ ವಿಭಾಗದ ಪೊಲೀಸರಿಂದ ವಿಚಾರಣೆ
ಇಥಿಯೋಪಿಯಾದಿಂದ ಕ್ಯಾಪ್ಸುಲ್‌ಗಳ ರೂಪದಲ್ಲಿ 2 ಕೆಜಿ ಕೊಕೇನ್ ಸಾಗಿಸುತ್ತಿದ್ದ ವಿದೇಶಿ ಪ್ರಜೆ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ 20 ಕೋಟಿ ರೂ. ಮೌಲ್ಯದ 2 ಕೆಜಿ ಕೋಕೆನ್ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದರು.
ಅದಿಸ್ ಅಬಾಬಾದಿಂದ ಇಥೋಪಿಯಾ ಏರ್ಲೈನ್ಸ್ ನಲ್ಲಿ ಬಂದಿದ್ದ ಆರೋಪಿ, ಡ್ರಗ್ಸ್ ತುಂಬಿದ್ದ ಕ್ಯಾಪ್ಸೂಲ್‍ಗಳನ್ನು ನುಂಗಿಕೊಂಡು ಸಾಗಿಸುತ್ತಿದ್ದ. ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ಸ್ಕ್ಯಾನ್ ಮಾಡಿಸಿದಾಗ ಆರೋಪಿಯ ಹೊಟ್ಟೆಯಲ್ಲಿ 50ಕ್ಕೂ ಅಧಿಕ ಕ್ಯಾಪ್ಸೂಲ್ಗಳು ಪತ್ತೆಯಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Fri, 12 January 24