ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಒಂದು ತಾಸು ಮಾತುಕತೆ ನಡೆಸಿದ ಶರದ್​ ಪವಾರ್​..

ರಾಜ್ಯಸಭೆ ಸದಸ್ಯರೂ ಆಗಿರುವ ಶರದ್​ ಪವಾರ್​, 2022ರಲ್ಲಿ ನಡೆಯಲಿರುವ ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಪರ ಅಭ್ಯರ್ಥಿ ಎಂಬ ಊಹೆಯೊಂದು ಎದ್ದಿದೆ. ಆದರೆ ಶರದ್​ ಪವಾರ್ ಆ ವರದಿಯನ್ನು ಅಲ್ಲಗಳೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಒಂದು ತಾಸು ಮಾತುಕತೆ ನಡೆಸಿದ ಶರದ್​ ಪವಾರ್​..
ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಎನ್​ಸಿಪಿ ಮುಖ್ಯಸ್ಥ

ಇನ್ನೇನು ಎರಡು ದಿನಗಳಲ್ಲಿ ಪ್ರಾರಂಭವಾಗಲಿರುವಸಂಸತ್ತಿನ ಮುಂಗಾರು ಅಧಿವೇಶನ (Monsoon session of Parliament) ಬೆನ್ನಲ್ಲೇ ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್ (Sharad Pawar) ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಯವರನ್ನು ಭೇಟಿಯಾಗಿದ್ದಾರೆ ಇವರಿಬ್ಬರ ಭೇಟಿಯ ಫೋಟೋವನ್ನು ಪ್ರಧಾನಿ ಕಚೇರಿ (PMO) ಯೂ ಸಹ ಹಂಚಿಕೊಂಡಿದೆ. ಪ್ರಧಾನಿ ಮೋದಿ ಮತ್ತು ಶರದ್​ ಪವಾರ್​ ನಡುವೆ ಸುಮಾರು ಒಂದು ತಾಸುಗಳ ಚರ್ಚೆ ನಡೆದಿದೆ ಎಂದೂ ಮೂಲಗಳು ತಿಳಿಸಿವೆ.

ಎನ್​ಸಿಪಿ, ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಒಂದು ಪಕ್ಷವಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಗುರುವಾರ ಶರದ್​ ಪವಾರ್​​ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿ, ಸಭೆ ನಡೆಸಿದ್ದರು. ಈ ಮಧ್ಯೆ ಕಾಂಗ್ರೆಸ್​​ನ ನಾನಾ ಪಟೋಲೆ ಪದೇಪದೆ ಮೈತ್ರಿಗೆ ಮುಳ್ಳಾಗುವ ಮಾತುಗಳನ್ನು ಆಡುತ್ತಿದ್ದಾರೆ. ಮುಂದಿನ ಯಾವ ಚುನಾವಣೆಯಲ್ಲೂ ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ನಾನೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಇದನ್ನೆಲ್ಲ ಚರ್ಚಿಸುವ ಸಂಬಂಧ ಹಿರಿಯ ನಾಯಕ ಶರದ್​ ಪವಾರ್ ಮಹಾ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು.

ರಾಜ್ಯಸಭೆ ಸದಸ್ಯರೂ ಆಗಿರುವ ಶರದ್​ ಪವಾರ್​, 2022ರಲ್ಲಿ ನಡೆಯಲಿರುವ ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಪರ ಅಭ್ಯರ್ಥಿ ಎಂಬ ಊಹೆಯೊಂದು ಎದ್ದಿದೆ. ಆದರೆ ಶರದ್​ ಪವಾರ್ ಆ ವರದಿಯನ್ನು ಅಲ್ಲಗಳೆದಿದ್ದಾರೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್​ ಇತ್ತೀಚೆಗೆ ಶರದ್​ ಪವಾರ್​ ಹಾಗೂ ಕಾಂಗ್ರೆಸ್​ ನಾಯಕರಾದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿಯವರೊಟ್ಟಿಗೆ ಹಲವು ಸುತ್ತಿನ ಸಭೆ ನಡೆಸಿದ ಬೆನ್ನಲ್ಲೇ ಇಂಥದ್ದೊಂದು ಮಾತು ಕೇಳಿಬಂದಿತ್ತು.

ಇದನ್ನೂ ಓದಿ: Bihar Hooch Tragedy: ಬಿಹಾರದಲ್ಲಿ 16 ಜನರ ನಿಗೂಢ ಸಾವು; ದುರಂತದ ಹಿಂದೆ ಕಳ್ಳಭಟ್ಟಿ ದಂಧೆಯ ಕೈವಾಡದ ಶಂಕೆ

NCP chief Sharad Pawar meets PM Narendra Modi Amid of monsoon session of Parliament