NEET PG Exam 2026: ಇಂದೇ ನೀಟ್-ಪಿಜಿ 2026 ಪರೀಕ್ಷೆ: ಹಾಲ್ ಟಿಕೆಟ್ ಜೊತೆ ಆಧಾರ್ ದೃಢೀಕರಣ ಕಡ್ಡಾಯ, 8.30ಕ್ಕೆ ಗೇಟ್ ಕ್ಲೋಸ್

ನೀಟ್ ಪಿಜಿ ಪರೀಕ್ಷೆ ಇಂದು ನಡೆಯಲಿದ್ದು, ಪ್ರವೇಶಕ್ಕೆ ಆಧಾರ್ ದೃಢೀಕರಣ ಕಡ್ಡಾಯ. ಬೆಳಗ್ಗೆ 8:30ರ ಒಳಗೆ ಕೇಂದ್ರಕ್ಕೆ ಹಾಜರಾಗಬೇಕು; ನಂತರ ಪ್ರವೇಶವಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ನಿರ್ದಿಷ್ಟ ಡ್ರೆಸ್ ಕೋಡ್ ಪಾಲಿಸುವುದು ಅಗತ್ಯ. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಮೂಲ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಪರೀಕ್ಷಾ ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ನಿಯಮ ಜಾರಿ.

NEET PG Exam 2026: ಇಂದೇ ನೀಟ್-ಪಿಜಿ 2026 ಪರೀಕ್ಷೆ: ಹಾಲ್ ಟಿಕೆಟ್ ಜೊತೆ ಆಧಾರ್ ದೃಢೀಕರಣ ಕಡ್ಡಾಯ, 8.30ಕ್ಕೆ ಗೇಟ್ ಕ್ಲೋಸ್
ನೀಟ್ ಪರೀಕ್ಷೆ

Updated on: Aug 30, 2026 | 8:24 AM

ನವದೆಹಲಿ, ಆಗಸ್ಟ್ 30: ದೇಶಾದ್ಯಂತ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-PG 2026) ಇಂದು ಒಂದೇ ಪಾಳಿಯಲ್ಲಿ ನಡೆಯಲಿದೆ. ಒಟ್ಟು 2,73,183 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷಾ ಮಂಡಳಿ (NBEMS) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.

ಪರೀಕ್ಷಾ ಸಮಯ ಮತ್ತು ವರದಿ ಮಾಡುವ ನಿಯಮಗಳು

ಪರೀಕ್ಷಾ ಅವಧಿ: ಬೆಳಗ್ಗೆ 9 ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿದೆ.ಅಭ್ಯರ್ಥಿಗಳು ಬೆಳಗ್ಗೆ 8.30 ರ ಒಳಗೆ ಕೇಂದ್ರದಲ್ಲಿ ಹಾಜರಿರಬೇಕು. ಬೆಳಗ್ಗೆ 8.30 ಕ್ಕೆ ಪರೀಕ್ಷಾ ಕೇಂದ್ರದ ಮುಖ್ಯ ದ್ವಾರವನ್ನು (Gate) ಮುಚ್ಚಲಾಗುವುದು, ನಂತರ ಬರುವವರಿಗೆ ಪ್ರವೇಶವಿರುವುದಿಲ್ಲ.

ಕಡ್ಡಾಯ ದಾಖಲೆಗಳು ಮತ್ತು ಪ್ರವೇಶ ನಿಯಮಗಳು

ಆಧಾರ್ ದೃಢೀಕರಣ ಕಡ್ಡಾಯ: ಪರೀಕ್ಷಾ ಕೇಂದ್ರದಲ್ಲಿ ಬಯೋಮೆಟ್ರಿಕ್/ಆಧಾರ್ ಆಧಾರಿತ ಪರಿಶೀಲನೆ ನಡೆಯುವುದರಿಂದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಮೂಲ ಆಧಾರ್ ಕಾರ್ಡ್ ಕೊಂಡೊಯ್ಯುವುದು ಕಡ್ಡಾಯವಾಗಿದೆ.

ಮತ್ತಷ್ಟು ಓದಿ: NEET-UG Exam: ಜೆಇಇ ಮಾದರಿಯಲ್ಲಿ ನೀಟ್-ಯುಜಿ ಪರೀಕ್ಷಾ ಕ್ರಾಂತಿ:ಆನ್‌ಲೈನ್ ಕಂಪ್ಯೂಟರ್ ಪರೀಕ್ಷೆ

ಹೆಚ್ಚುವರಿ ಗುರುತಿನ ಚೀಟಿ: ಆಧಾರ್ ಜೊತೆಗೆ ಸರ್ಕಾರ ನೀಡಿದ ಮೂಲ ಫೋಟೋ ಐಡಿ (ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್) ತರಲು ಸೂಚಿಸಲಾಗಿದೆ.

ನಿಷೇಧಿತ ವಸ್ತುಗಳು: ಸ್ಮಾರ್ಟ್‌ಫೋನ್, ಬ್ಲೂಟೂತ್ ಸಾಧನಗಳು, ಇಯರ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಪ್ರವೇಶವಿಲ್ಲ. ಕೇಂದ್ರದಲ್ಲಿ ವಸ್ತುಗಳನ್ನು ಇಡಲು ಪ್ರತ್ಯೇಕ ಲಾಕರ್ ವ್ಯವಸ್ಥೆ ಇರುವುದಿಲ್ಲ.

ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್

ಪುರುಷ ಅಭ್ಯರ್ಥಿಗಳು: ಸರಳವಾದ ಕ್ಯಾಶುವಲ್ ಪ್ಯಾಂಟ್, ಜೀನ್ಸ್ ಮತ್ತು ಅರ್ಧ ತೋಳಿನ ಶರ್ಟ್/ಟಿ-ಶರ್ಟ್ ಧರಿಸಬೇಕು. ಶೂಗಳ ಬದಲಿಗೆ ತೆರೆದ ಚಪ್ಪಲಿಗಳನ್ನು ಮಾತ್ರ ಧರಿಸಲು ಸೂಚಿಸಲಾಗಿದೆ. ಟೋಪಿ, ಕ್ಯಾಪ್, ಮಫ್ಲರ್ ಧರಿಸುವಂತಿಲ್ಲ.

ಮಹಿಳಾ ಅಭ್ಯರ್ಥಿಗಳು: ಲೆಗ್ಗಿಂಗ್ಸ್ ಅಥವಾ ಸರಳ ಪ್ಯಾಂಟ್ ಹಾಗೂ ಸರಳ ಸ್ಯಾಂಡಲ್ ಧರಿಸಬೇಕು. ಪರ್ಸ್, ಹ್ಯಾಂಡ್‌ಬ್ಯಾಗ್ ಹಾಗೂ ಕೈಗಳಿಗೆ ದಪ್ಪ ಮೆಹಂದಿ ಹಾಕಿರುವುದನ್ನು ನಿಷೇಧಿಸಲಾಗಿದೆ.

ವಿದ್ಯಾರ್ಥಿಗಳಿಗೆ ಸಮಯದ ಒತ್ತಡ ಕಡಿಮೆ ಮಾಡಲು ಈ ಬಾರಿ ಪ್ರಶ್ನೆಗಳ ಸಂಖ್ಯೆಯನ್ನು 200 ರಿಂದ 180 ಕ್ಕೆ ಇಳಿಸಲಾಗಿದೆ (ಒಟ್ಟು 720 ಅಂಕಗಳು). ಪ್ರತಿ ಸರಿ ಉತ್ತರಕ್ಕೆ 4 ಅಂಕ ಮತ್ತು ತಪ್ಪು ಉತ್ತರಕ್ಕೆ 1 ನೆಗೆಟಿವ್ ಅಂಕವಿರುತ್ತದೆ.

ಆನ್ಸರ್ ಕೀ : ಪರೀಕ್ಷೆ ಮುಗಿದ ತಕ್ಷಣ ವಿವಿಧ ತರಬೇತಿ ಸಂಸ್ಥೆಗಳು ಅನಧಿಕೃತ ಕೀಲಿಗಳನ್ನು ಬಿಡುಗಡೆ ಮಾಡುತ್ತವೆ. ಅಧಿಕೃತ ಮಾಹಿತಿ ಮತ್ತು ಫಲಿತಾಂಶದ ವಿವರಗಳಿಗಾಗಿ ವಿದ್ಯಾರ್ಥಿಗಳು nbe.edu.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us