ಆಪರೇಷನ್ ಸಿಂಧೂರ್​​: ದೇಶದ ಸುರಕ್ಷತೆ, ಭದ್ರತೆಗಾಗಿ ಮೂಕಪಂಚಶತಿ ಸ್ತೋತ್ರ ಮಠಿಸುವಂತೆ ಕಂಚಿ ಮಠ ಕರೆ

ಪಾಕಿಸ್ತಾನಿ ಉಗ್ರರ ತಾಣಗಳನ್ನು ಹೊಡೆದುರುಳಿಸುವ ಮೂಲಕ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿ ಆಗಿದೆ. ಈ ಯಶಸ್ಸಿನ ಹಿನ್ನೆಲೆ ದೇಶಾದ್ಯಂತ ವಿಶೇಷ ಪೂಜೆಗಳು ನಡೆಯುತ್ತಿದ್ದು, ಕಂಚಿ ಮಠದ ಪೀಠಾಧಿಪತಿಗಳು ಮೂಕಪಂಚಶತಿ ಸ್ತೋತ್ರ ಪಠಿಸುವಂತೆ ಕರೆ ನೀಡಿದ್ದಾರೆ. ಜೊತೆಗೆ ಸ್ವರ್ಣವಲ್ಲಿ ಸ್ವಾಮೀಜಿ ಕೂಡ ದೇಶ ಹಿತಕ್ಕಾಗಿ ಪಾರ್ಥಿಸುವಂತೆ ತಿಳಿಸಿದ್ದಾರೆ.

ಆಪರೇಷನ್ ಸಿಂಧೂರ್​​: ದೇಶದ ಸುರಕ್ಷತೆ, ಭದ್ರತೆಗಾಗಿ ಮೂಕಪಂಚಶತಿ ಸ್ತೋತ್ರ ಮಠಿಸುವಂತೆ ಕಂಚಿ ಮಠ ಕರೆ
ಕಂಚಿ ಮಠ

Updated on: May 08, 2025 | 11:46 AM

ಕಾಂಚೀಪುರಂ, ಮೇ 08: ನಿನ್ನೆ ಭಾರತೀಯ ಸೇನೆ ಆಪರೇಷನ್​ ಸಿಂಧೂರ್ (Operation Sindoor)​ ಮೂಲಕ ಪಾಕಿಸ್ತಾನಿ ಉಗ್ರರ ತಾಣಗಳನ್ನು ಹೊಡೆದುರುಳಿಸಿದೆ. ಕೇವಲ 25 ನಿಮಿಷದಲ್ಲೇ ಭಾರತ ಸದೆ ಬಡಿದಿದೆ. ದಿಢೀರ್ ಏರ್​ಸ್ಟ್ರೈಕ್​ಗೆ ಪಾಕ್ ನಖಶಿಕಾಂತ ಬೆಚ್ಚಿಬಿದ್ದಿದೆ. ಭಾರತೀಯ ಸೇನೆಯ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಯಶಸ್ವಿ ಹಿನ್ನಲೆ ದೇಶದೆಲ್ಲೆಡೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಈ ಮಧ್ಯೆ ಕಾಂಚಿಪುರಂನ (kanchi matha) ಕಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶಂಕರಾಚಾರ್ಯ ಸ್ವಾಮೀಜಿ, ದೇಶದ ಸುರಕ್ಷತೆ ಮತ್ತು ಭದ್ರತೆಗಾಗಿ ಮೂಕಪಂಚಶತಿ ಸ್ತೋತ್ರವನ್ನು ಪಠಿಸುವಂತೆ ಕರೆ ನೀಡಲಾಗಿದೆ.

ಪಾಕ್ ನೆಲಕ್ಕೆ ನುಗ್ಗಿ ಉಗ್ರರ ನೆಲೆಯನ್ನ ಭಾರತೀಯ ಸೇನೆ ಉಡೀಸ್ ಮಾಡಿದೆ. ಆಪರೇಷನ್​ ಸಿಂಧೂರ್​ ಮೂಲಕ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ಯಶಸ್ವಿ ಕಾರ್ಯಾಚರಣೆ ಹಿನ್ನೆಲ್ಲೆ ಇದೀಗ ಭಾರತೀಯ ಸೇನೆಯನ್ನು ಇಡೀ ದೇಶ ಕೊಂಡಾಡುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿ ತುಂಬಲು ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳಲಾಗುತ್ತಿದೆ. ಹಾಗಾಗಿ ಕಂಚಿ ಮಠದಿಂದ ಕೂಡ ಮೂಕಪಂಚಶತಿ ಸ್ತೋತ್ರವನ್ನು ಪಠಿಸುವಂತೆ ಸಂದೇಶ ರವಾನಿಸಲಾಗಿದೆ. ಜೊತೆಗೆ ಸ್ವರ್ಣವಲ್ಲಿ ಸ್ವಾಮೀಜಿ ಕೂಡ ದೇಶ ಹಿತಕ್ಕಾಗಿ ಪಾರ್ಥಿಸುವಂತೆ ತಿಳಿಸಿದ್ದಾರೆ.

ಮೂಕಪಂಚಶತಿ ಸ್ತೋತ್ರ 

ಆರ್ಯ ಶತಕದ 90ನೇ ಶ್ಲೋಕವು ಕಾಮಾಕ್ಷಿ ಪರದೇವತೆಯೇ ದಂಡನಾಥ ಅಥವಾ ವಾರಾಹಿಯ ರೂಪವನ್ನು ತಾಳಿ, ಶತ್ರುಗಳನ್ನು ಸಂಹರಿಸಲಿ, ಆಕೆಯ ಆಯುಧಗಳಾದ ಹಲಾ ಮತ್ತು ಮುಸಲದಿಂದ ಒಳ್ಳೆಯ ಜನರನ್ನು ರಕ್ಷಿಸಲಿ.

ಇದನ್ನೂ ಓದಿ: ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ದಿಟ್ಟ ಹೆಜ್ಜೆ ಇಟ್ಟಿದೆ, ರವಿಶಂಕರ್​ ಗುರೂಜಿ

ಪಾದಾರವಿಂದ ಶತಕದ 59ನೇ ಶ್ಲೋಕವು ಭಗವತಿಯ ಪಾದಕಮಲಗಳು ಹೇಗೆ ನವಗ್ರಹಗಳಂತಿವೆ ಎಂಬುದನ್ನು ವಿವರಿಸುತ್ತದೆ. ಆದ್ದರಿಂದ ನವಗ್ರಹಗಳ ಅನುಗ್ರಹ ನೀಡಲು ಮತ್ತು ಅವರ ಸ್ಥಾನಗಳಿಂದ ಸೂಚಿಸಲಾದ ಯಾವುದೇ ಪ್ರತಿಕುಲವನ್ನು ತೆಗೆದುಹಾಕಲು ಭಗವತಿಯ ಪಾದಾರವಿಂದಕ್ಕೆ ಸೇವೆ ಸಲ್ಲಿಸುವುದು.

ಇದನ್ನೂ ಓದಿ: ಉಗ್ರ ಮಸೂದ್ ಅಜರ್​ಗೆ ಮನೆಯವರೇ ಸತ್ತರೂ ಕಣ್ಣೀರಿಲ್ಲ, ಹತಾಶೆಯಿಲ್ಲ: ಭಯೋತ್ಪಾದನೆಯೇ ಕನಸು!

ಸ್ತುತಿ ಶತಕದ 84ನೇ ಶ್ಲೋಕವು ಭಗವತಿಯ ಅನುಗ್ರಹದಿಂದ ಒಳ್ಳೆಯ ಜನರ ಮನಸ್ಸು ದೃಢವಾಗಲಿ, ಒಳ್ಳೆಯ ಮಾತುಗಳನ್ನು ಆಡಲಿ, ಒಳ್ಳೆಯದನ್ನು ವಿರೋಧಿಸುವವರು ತಮ್ಮ ದುಷ್ಟ ಆಲೋಚನೆಗಳನ್ನು ಬಿಡಲಿ ಎಂದು ಪ್ರಾರ್ಥಿಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:45 am, Thu, 8 May 25

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us