ಭಾರತ ವಿಭಜನೆಯ ಕರಾಳ ದಿನ, ಇದು ಜನರ ಧೈರ್ಯಕ್ಕೆ ಗೌರವ ಸಲ್ಲಿಸುವ ದಿನ: ಪ್ರಧಾನಿ ಮೋದಿ

Partition Horrors Remembrance Day: ಭಾರತ ವಿಭಜನೆಯ ಕರಾಳ ದಿನವನ್ನು ನೆನೆದ ಪ್ರಧಾನಿ ಮೋದಿ ಜನರ ಧೈರ್ಯಕ್ಕೆ ಗೌರವ ಸಲ್ಲಿಸುವ ದಿನವಿದು ಎಂದು ಹೇಳಿದರು. ವಿಭಜನಾ ಕರಾಳ ದಿನದ ಸಂದರ್ಭದಲ್ಲಿ ನಾವು ವಿಭಜನೆಯ ಭೀಕರತೆಯಿಂದ ನೊಂದವರನ್ನು ಮತ್ತು ಸಾಕಷ್ಟು ನೋವನ್ನು ಅನುಭವಿಸಿದವರನ್ನು ಸ್ಮರಿಸುತ್ತಿದ್ದೇವೆ.

ಭಾರತ ವಿಭಜನೆಯ ಕರಾಳ ದಿನ, ಇದು ಜನರ ಧೈರ್ಯಕ್ಕೆ ಗೌರವ ಸಲ್ಲಿಸುವ ದಿನ: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
|

Updated on: Aug 14, 2024 | 11:12 AM

ಭಾರತ ವಿಭಜನೆಯ ಕರಾಳ ದಿನವನ್ನು ನೆನೆದ ಪ್ರಧಾನಿ ಮೋದಿ ಜನರ ಧೈರ್ಯಕ್ಕೆ ಗೌರವ ಸಲ್ಲಿಸುವ ದಿನವಿದು ಎಂದು ಹೇಳಿದರು. ವಿಭಜನಾ ಕರಾಳ ದಿನದ ಸಂದರ್ಭದಲ್ಲಿ ನಾವು ವಿಭಜನೆಯ ಭೀಕರತೆಯಿಂದ ನೊಂದವರನ್ನು ಮತ್ತು ಸಾಕಷ್ಟು ನೋವನ್ನು ಅನುಭವಿಸಿದವರನ್ನು ಸ್ಮರಿಸುತ್ತಿದ್ದೇವೆ.

ವಿಭಜನೆಯಿಂದ ಬಾಧಿತರಾದ ಅನೇಕ ಜನರು ತಮ್ಮ ಜೀವನವನ್ನು ಪುನರಾರಂಭಿಸಿದ್ದಾರೆ. ಮತ್ತು ಇದು ನಮ್ಮ ದೇಶದಲ್ಲಿ ಏಕತೆ ಮತ್ತು ಭ್ರಾತೃತ್ವದ ಬಾಂಧವ್ಯವನ್ನು ಯಾವಾಗಲೂ ರಕ್ಷಿಸುವ ನಮ್ಮ ಬದ್ಧತೆಯನ್ನು ಇದು ತೋರಿಸುತ್ತದೆ ಎಂದರು. ಇತಿಹಾಸವನ್ನು ನೆನಪಿಸಿಕೊಳ್ಳುವ ರಾಷ್ಟ್ರವು ತನ್ನ ಭವಿಷ್ಯವನ್ನು ನಿರ್ಮಿಸುವುದರೊಂದಿಗೆ ಪ್ರಬಲ ದೇಶವಾಗಿ ಹೊರಹೊಮ್ಮಬಹುದು ಎಂದು ಅಮಿತ್ ಶಾ ಹೇಳಿದ್ದಾರೆ.

1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಭಜನೆಯಾದಾಗ ಈ ದಿನ ಅನೇಕ ಜನರು ಸಹಿಸಲಾಗದ ನೋವನ್ನು ಅನುಭವಿಸಿದರು. 15 ಮಿಲಿಯನ್ ಜನರು ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡಬೇಕಾಯಿತು. ಪಂಜಾಬ್, ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಸಮೃದ್ಧವಾಗಿರುವ ಪ್ರದೇಶವು ವಿಶೇಷವಾಗಿ ಕಷ್ಟಕರವಾಗಿತ್ತು, ಭೂಮಿ ಮತ್ತು ಸಂಪನ್ಮೂಲಗಳ ವಿಭಜನೆಯು ದುಃಖವನ್ನು ಉಲ್ಬಣಗೊಳಿಸಿತು.

ವಿಭಜನೆಯಿಂದಾಗಿ, ಅನೇಕ ಗಲಭೆಗಳೂ ನಡೆದವು. ಈ ಗಲಭೆಗಳಿಂದಾಗಿ ಲಕ್ಷಾಂತರ ಜನರು ಮತ್ತೊಮ್ಮೆ ಹೊಸ ನಗರಗಳು ಮತ್ತು ಹೊಸ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕಾಯಿತು. ಈ ಅವಧಿಯಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

2021 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ದಿನದಂದು ಪ್ರಾಣ ಕಳೆದುಕೊಂಡ ಜನರನ್ನು ಸ್ಮರಿಸಲು ಪ್ರತಿ ವರ್ಷ ಆಗಸ್ಟ್ 14 ಅನ್ನು ವಿಭಜನೆಯ ಕರಾಳ ದಿನವನ್ನಾಗಿ ಆಚರಿಸಲು ಘೋಷಿಸಿದ್ದರು.

ಮತ್ತಷ್ಟು ಓದಿ: Independence Day 2024: ಆಗಸ್ಟ್ 14 ಭಾರತೀಯರ ಪಾಲಿಗೆ ಕರಾಳ ದಿನ ಏಕೆ? ಅಂದು ನಡೆದದ್ದೇನು?

ಆ ಎಲ್ಲ ಜನರ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸಿ ಪ್ರತಿ ವರ್ಷ ಆಗಸ್ಟ್ 14 ರಂದು ಈ ದಿನವನ್ನು ಆಚರಿಸಲಾಗುವುದು ಎಂದು ಪ್ರಧಾನಿ ಘೋಷಿಸಿದ್ದರು. ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಬಾಂಗ್ಲಾ ನಾಯಕನಿಗೆ ಮಾತಿನಲ್ಲೇ ತಿವಿದ ರೋಹಿತ್ ಶರ್ಮಾ
ಬಾಂಗ್ಲಾ ನಾಯಕನಿಗೆ ಮಾತಿನಲ್ಲೇ ತಿವಿದ ರೋಹಿತ್ ಶರ್ಮಾ
ಲಾರಿಯಡಿ ಸಿಲುಕಿದ ಬೈಕ್; ಪವಾಡದಂತೆ ಬಚಾವಾದ ಚಾಲಕ
ಲಾರಿಯಡಿ ಸಿಲುಕಿದ ಬೈಕ್; ಪವಾಡದಂತೆ ಬಚಾವಾದ ಚಾಲಕ