ಹರ್ಯಾಣ ಈ ಬಾರಿ ಬಿಜೆಪಿಯ ಹ್ಯಾಟ್ರಿಕ್‌ಗೆ ನಿರ್ಧರಿಸಿದೆ: ಪ್ರಧಾನಿ ಮೋದಿ
'ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಸಮಾಜದ ಈ ವರ್ಗಗಳಿಗೆ ಮಹತ್ವದ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೆ. ಇನ್ನೂ 100 ದಿನವೂ ಆಗಿಲ್ಲ, ಆದರೆ ನಮ್ಮ ಸರ್ಕಾರ ಈಗಾಗಲೇ ₹ 15 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಆರಂಭಿಸಿದೆ. ಬಡ ಕುಟುಂಬಗಳಿಗೆ ಮೂರು ಕೋಟಿ ಪಕ್ಕಾ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಕುರುಕ್ಷೇತ್ರ ಸೆಪ್ಟೆಂಬರ್ 14: ಮುಂಬರುವ ರಾಜ್ಯ ಚುನಾವಣೆಯಲ್ಲಿ ಸತತ ಮೂರನೇ ಅವಧಿಗೆ ಬಿಜೆಪಿಯನ್ನು ಬೆಂಬಲಿಸುವಂತೆ ಹರ್ಯಾಣದ (Haryana Polls) ಜನತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಕರೆ ನೀಡಿದ್ದಾರೆ. ಕುರುಕ್ಷೇತ್ರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಹರ್ಯಾಣದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚನೆಗೆ ಸಹಕರಿಸುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ದೆಹಲಿಯಲ್ಲಿ ಸತತ ಮೂರನೇ ಬಾರಿಗೆ ನಿಮ್ಮೆಲ್ಲರಿಗೂ ಸೇವೆ ಸಲ್ಲಿಸಲು ನೀವು ನನಗೆ ಸಹಾಯ ಮಾಡಿದ್ದೀರಿ. ಇಲ್ಲಿನ ಉತ್ಸಾಹ ಮತ್ತು ಹುರುಪು ನೋಡಿದರೆ ಹರ್ಯಾಣ ಈ ಬಾರಿ ಬಿಜೆಪಿಯ ಹ್ಯಾಟ್ರಿಕ್‌ಗೆ ನಿರ್ಧರಿಸಿದೆ ಎಂದು ಸ್ಪಷ್ಟವಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ರೈತರು, ಬಡವರು, ಯುವಕರು ಮತ್ತು ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇತ್ತೀಚಿನ ಉಪಕ್ರಮಗಳನ್ನು ಸೂಚಿಸುತ್ತಾ ಬಿಜೆಪಿಯ ಆಡಳಿತದ ದಾಖಲೆಯನ್ನು ಮೋದಿ ಹೈಲೈಟ್ ಮಾಡಿದ್ದಾರೆ.
ಮೋದಿ ಭಾಷಣ
#WATCH | Kurukshetra, Haryana: PM Narendra Modi says, “Appeasement is the biggest goal for Congress. Today the situation has become such that even Ganpati is being put behind bars in the Congress-ruled state of Karnataka. The whole country is celebrating Ganesh Utsav today and… pic.twitter.com/pRGKVVgCT0
— ANI (@ANI) September 14, 2024
‘ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಸಮಾಜದ ಈ ವರ್ಗಗಳಿಗೆ ಮಹತ್ವದ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೆ. ಇನ್ನೂ 100 ದಿನವೂ ಆಗಿಲ್ಲ, ಆದರೆ ನಮ್ಮ ಸರ್ಕಾರ ಈಗಾಗಲೇ ₹ 15 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಆರಂಭಿಸಿದೆ. ಬಡ ಕುಟುಂಬಗಳಿಗೆ ಮೂರು ಕೋಟಿ ಪಕ್ಕಾ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದರು.
ನೆರೆಯ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನ ಸಾಧನೆಯನ್ನು ಟೀಕಿಸಿದ ಪ್ರಧಾನಿ, ಬಿಜೆಪಿಯ ದಾಖಲೆಯನ್ನು ಕಾಂಗ್ರೆಸ್‌ನ ದಾಖಲೆಯೊಂದಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್ ಸಮಾಜದ ಎಲ್ಲಾ ವರ್ಗಗಳಿಗೆ ನಕಲಿ ಭರವಸೆಗಳನ್ನು ನೀಡಿತು. ಅದರಲ್ಲಿ ಒಂದನ್ನು ಸಹ ಅದು ಈಡೇರಿಸಲಿಲ್ಲ. ಈಗ ಸರ್ಕಾರಿ ನೌಕರರು ತಮ್ಮ ಸಂಬಳಕ್ಕಾಗಿ ಮುಷ್ಕರ ಮಾಡಬೇಕಾಗಿ ಬಂದಿದೆ ಎಂದಿದ್ದಾರೆ ಮೋದಿ.
ಹರ್ಯಾಣ ಚುನಾವಣೆಗೆ ಇದು ಪ್ರಧಾನಿಯವರ ಮೊದಲ ರ‍್ಯಾಲಿಯಾಗಿದೆ.
ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜನರನ್ನು ಒತ್ತಾಯಿಸಿದ್ದರು. ಬಿಜೆಪಿಯ ಸಾಧ್ಯತೆಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಪಕ್ಷದ ಚಿಹ್ನೆ ಕಮಲವು ರಾಜ್ಯದಲ್ಲಿ “ಮೂರನೇ ಬಾರಿಗೆ ಅರಳುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ ಕೇಜ್ರಿವಾಲ್ ಮನೆಯ ಹೊರಗೆ ಪಟಾಕಿ ಸಿಡಿಸಿದ್ದಕ್ಕೆ ಎಫ್‌ಐಆರ್
ಹರ್ಯಾಣದಲ್ಲಿ ಮತದಾನ
ಹರ್ಯಾಣದ 90 ಸ್ಥಾನಗಳಿಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದೆ ಮತ್ತು ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ರಾಜ್ಯದಲ್ಲಿ ಮೂರನೇ ಅವಧಿಗೆ ಪ್ರಯತ್ನಿಸುತ್ತಿದೆ ಆದರೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಜೆಜೆಪಿ-ಎಎಸ್ ಪಿ ಮತ್ತು INLD-BSP ಒಕ್ಕೂಟದಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ