PM Narendra Modi: ಜನ ಸಮರ್ಥ ಪೋರ್ಟಲ್ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ; ಹೊಸ ನಾಣ್ಯಗಳ ಬಿಡುಗಡೆ
Jan Samarth Portal: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಕ್ರೆಡಿಟ್-ಲಿಂಕ್ಡ್ ಸರ್ಕಾರಿ ಯೋಜನೆಗಳ ರಾಷ್ಟ್ರೀಯ ಪೋರ್ಟಲ್ ಜನ್ ಸಮರ್ಥ್ ಪೋರ್ಟಲ್ ಉದ್ಘಾಟಿಸಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಮೀಸಲಾದ ಹೊಸ ನಾಣ್ಯಗಳನ್ನು ಪ್ರಧಾನಮಂತ್ರಿ ಮೋದಿ ಇಂದು ಬಿಡುಗಡೆ ಮಾಡಿದ್ದಾರೆ.
ನವದೆಹಲಿ: ವಿಜ್ಞಾನ ಭವನದಲ್ಲಿ ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ‘ಐಕಾನಿಕ್ ವೀಕ್ ಸೆಲೆಬ್ರೇಷನ್ಸ್’ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಕ್ರೆಡಿಟ್-ಲಿಂಕ್ಡ್ ಸರ್ಕಾರಿ ಯೋಜನೆಗಳ ರಾಷ್ಟ್ರೀಯ ಪೋರ್ಟಲ್ ಜನ್ ಸಮರ್ಥ್ ಪೋರ್ಟಲ್ (Jan Samarth Portal) ಅನ್ನು ಉದ್ಘಾಟಿಸಿದ್ದಾರೆ. ಈ ವೇಳೆ ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ (Azadi ka Amrit Mahotsav) ಮೀಸಲಾದ ಹೊಸ ನಾಣ್ಯಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಬಿಡುಗಡೆ ಮಾಡಿದ್ದಾರೆ.
ಕಳೆದ 8 ವರ್ಷಗಳಲ್ಲಿ ಭಾರತವು ಪ್ರತಿದಿನ ಹೊಸ ಹೆಜ್ಜೆಗಳನ್ನು ಇಟ್ಟಿದೆ ಮತ್ತು ಹೊಸ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದೆ. ಈ ಸಮಯದಲ್ಲಿ ರಾಷ್ಟ್ರದಲ್ಲಿ ಹೆಚ್ಚಿದ ಸಾರ್ವಜನಿಕ ಭಾಗವಹಿಸುವಿಕೆ, ರಾಷ್ಟ್ರದ ಅಭಿವೃದ್ಧಿಯನ್ನು ವೇಗಗೊಳಿಸಿತು ಮತ್ತು ಬಡವರಿಗೆ ಅಧಿಕಾರ ನೀಡಿತು. ಸ್ವಚ್ಛ ಭಾರತ ಅಭಿಯಾನ ಬಡವರಿಗೆ ಘನತೆಯ ಜೀವನ ನಡೆಸಲು ಅವಕಾಶ ನೀಡಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಕೇವಲ 75 ವರ್ಷಗಳ ಆಚರಣೆಯಲ್ಲ. ಭಾರತದ ಸ್ವಾತಂತ್ರ್ಯದ ನಾಯಕರು ಕಂಡ ಸ್ವತಂತ್ರ ಭಾರತಕ್ಕಾಗಿ ಕನಸುಗಳಿಗೆ ಹೊಸ ಚೈತನ್ಯವನ್ನು ಸಂಭ್ರಮಿಸಲು, ಈಡೇರಿಸಲು, ಹೊಸ ಚೈತನ್ಯವನ್ನು ತುಂಬಲು ಮತ್ತು ಹೊಸ ನಿರ್ಣಯಗಳೊಂದಿಗೆ ಮುಂದುವರಿಯಲು ಇದು ಒಂದು ಕ್ಷಣವಾಗಿದೆ ಎಂದು ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
New coins dedicated to Azadi Ka Amrit Mahotsav have been launched. They will constantly remind people of the goals of Amrit Kaal & inspire them to contribute to the nation’s development: PM at iconic week celebrations organised by Finance Ministry & Ministry of Corporate Affairs pic.twitter.com/rM62puuWyq
— ANI (@ANI) June 6, 2022
“ಜನ ಸಮರ್ಥ ಪೋರ್ಟಲ್ ಸರ್ಕಾರಿ ಕ್ರೆಡಿಟ್ ಸ್ಕೀಮ್‌ಗಳನ್ನು ಸಂಪರ್ಕಿಸುವ ಒಂದು-ನಿಲುಗಡೆಯ ಡಿಜಿಟಲ್ ಪೋರ್ಟಲ್ ಆಗಿದೆ. ಇದು ಫಲಾನುಭವಿಗಳನ್ನು ನೇರವಾಗಿ ಸಾಲದಾತರಿಗೆ ಸಂಪರ್ಕಿಸುತ್ತದೆ. ಜನ ಸಮರ್ಥ ಪೋರ್ಟಲ್‌ನ ಮುಖ್ಯ ಉದ್ದೇಶವೆಂದರೆ ಮಾರ್ಗದರ್ಶನ ಮತ್ತು ವಿವಿಧ ಕ್ಷೇತ್ರಗಳ ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಸರಳ ಮತ್ತು ಸುಲಭವಾದ ಡಿಜಿಟಲ್ ಪ್ರಕ್ರಿಯೆಗಳ ಮೂಲಕ ಅವರಿಗೆ ಸರಿಯಾದ ರೀತಿಯ ಸರ್ಕಾರಿ ಪ್ರಯೋಜನಗಳನ್ನು ಒದಗಿಸುವುದಾಗಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ (PMO) ಹೇಳಿದೆ.
Azadi ka Amrit Mahotsav is not just a celebration of 75 years. It is a moment to celebrate, fulfill, pump new vigour into the dreams for an independent India seen by the leaders of India’s freedom and go ahead with new resolutions: PM Narendra Modi in Delhi pic.twitter.com/kUqL1jgehZ
— ANI (@ANI) June 6, 2022
ಜನ ಸಮರ್ಥ ಪೋರ್ಟಲ್ ಎಂದರೇನು? ಜನ ಸಮರ್ಥ ಪೋರ್ಟಲ್ 13 ಕ್ರೆಡಿಟ್ ಲಿಂಕ್ಡ್ ಸರ್ಕಾರಿ ಯೋಜನೆಗಳನ್ನು ಒಂದೇ ವೇದಿಕೆಯಲ್ಲಿ ಲಿಂಕ್ ಮಾಡುವ ಡಿಜಿಟಲ್ ಪೋರ್ಟಲ್ ಆಗಿದೆ. ಇದರ ಮೂಲಕ, ಫಲಾನುಭವಿಗಳು ಕೆಲವು ಸರಳ ಹಂತಗಳಲ್ಲಿ ಅರ್ಹತೆಯನ್ನು ಡಿಜಿಟಲ್ ಮೂಲಕ ಪರಿಶೀಲಿಸಬಹುದು. ಅರ್ಹ ಯೋಜನೆಯಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಡಿಜಿಟಲ್ ಅನುಮೋದನೆ ಪಡೆಯಬಹುದು. ಇದು ನಾಲ್ಕು ಸಾಲ ವಿಭಾಗಗಳನ್ನು ಹೊಂದಿದೆ ಮತ್ತು ಈ ಪ್ಲಾಟ್‌ಫಾರ್ಮ್‌ನಲ್ಲಿ 125ಕ್ಕೂ ಹೆಚ್ಚು ಸಾಲದಾತರನ್ನು ಹೊಂದಿದೆ.
ಇದನ್ನೂ ಓದಿ: Narendra Modi: ಉತ್ತರ ಪ್ರದೇಶದಲ್ಲಿ 80,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?: ಶಿಕ್ಷಣ ಸಾಲ, ಕೃಷಿ ಮೂಲಸೌಕರ್ಯ ಸಾಲ, ಜೀವನೋಪಾಯ ಸಾಲ, ವ್ಯಾಪಾರ ಚಟುವಟಿಕೆ ಸಾಲದ ವಿಭಾಗಗಳ ಅಡಿಯಲ್ಲಿ ವಿವಿಧ ಯೋಜನೆಗಳನ್ನು ಪೋರ್ಟಲ್‌ನಲ್ಲಿ ಪಟ್ಟಿ ಮಾಡಲಾಗಿದೆ. ಒಮ್ಮೆ ನೀವು ಯಾವುದೇ ಯೋಜನೆಗಳ ಅಡಿಯಲ್ಲಿ ಅರ್ಹತೆ ಪಡೆದರೆ, ಡಿಜಿಟಲ್ ಅನುಮೋದನೆಯನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನೀವು ಆಯ್ಕೆ ಮಾಡಬಹುದು. ಆದ್ಯತೆಯ ಸಾಲದ ಅರ್ಹತೆಯನ್ನು ಪರಿಶೀಲಿಸಿದ ನಂತರ ಯಾರಾದರೂ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
Addressing the Iconic Week Celebrations being organised by @FinMinIndia and @MCA21India. https://t.co/knFcV1x8SF
— Narendra Modi (@narendramodi) June 6, 2022
ಇಂದು ಪ್ರಧಾನಿ ಮೋದಿ ಅವರು 1, 2, 5, 10 ಮತ್ತು 20 ರೂ.ಗಳ ನಾಣ್ಯಗಳ ವಿಶೇಷ ಸರಣಿಯನ್ನು ಬಿಡುಗಡೆ ಮಾಡಿದರು. ಈ ನಾಣ್ಯಗಳನ್ನು ದೃಷ್ಟಿ ವಿಕಲಚೇತನರು ಸ್ನೇಹಿಯಾಗಿರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 am, Mon, 6 June 22