Modi in Assam: ಈಶಾನ್ಯ ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಶಕೆ: ನರೇಂದ್ರ ಮೋದಿ

Narendra Modi in Assam: ಮಜುಲಿಯನ್ನು ಜೀವವೈವಿಧ್ಯ ಕೇಂದ್ರವಾಗಿ ಬೆಳೆಸುತ್ತೇವೆ. ನಮಾಮಿ ಬ್ರಹ್ಮಪುತ್ರ ಉತ್ಸವದ ಮೂಲಕ ಅಸ್ಸಾಂನ ಸಂಸ್ಕೃತಿ ಬೆಳೆಯುತ್ತಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

Modi in Assam: ಈಶಾನ್ಯ ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಶಕೆ: ನರೇಂದ್ರ ಮೋದಿ
ಈ ಬಾರಿಯ ಬಜೆಟ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಕೇಳಿಬಂದಿದೆ: ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ

Updated on: Feb 18, 2021 | 2:06 PM

ದಿಸ್​ಪುರ್ : ವಿಡಿಯೊ ಸಂವಾದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಮಹಾಬಾಹು- ಬ್ರಹ್ಮಪುತ್ರಾ ಸಂಪರ್ಕ ಯೋಜನೆಗೆ ಚಾಲನೆ ನೀಡಿದ್ದಾರೆ. ಎರಡು ಸೇತುವೆಗಳಿಗೆ ಮೋದಿ ಶಂಕು ಸ್ಥಾಪನೆ ಮಾಡಿ ಮಾತನಾಡಿದ ಮೋದಿ ಭಾರತ ರತ್ನ ಭುಪೇನ್ ಹಜಾರಿಕಾ ಅವರ ‘ಕೆಲಸವೇ ನಮ್ಮ ಧರ್ಮ. ನಾವು ಹೊಸ ಕಾಲದ ಹೊಸ ಜನ. ನಾವು ಜನರಿಗಾಗಿ ಭೂಮಿಯ ಮೇಲೆ ಹೊಸ ಸ್ವರ್ಗ ರೂಪಿಸುತ್ತೇವೆ’  ಎಂಬ ಕವನವನ್ನು  ನೆನಪಿಸಿಕೊಂಡಿದ್ದಾರೆ.

ಸಬ್​ ಕಾ ಸಾಥ್ ಸಬ್​ ಕಾ ವಿಕಾಸ್ (ಎಲ್ಲರ ಜೊತೆಗೆ ಎಲ್ಲರ ಅಭಿವೃದ್ಧಿ) ಆಶಯದೊಂದಿಗೆ ಕೆಲಸ ಮಾಡುತ್ತೇವೆ. ಅಸ್ಸಾಂನ ಸಂಸ್ಕೃತಿಯಲ್ಲಿ ಆಧ್ಯಾತ್ಮ ಇದೆ. ನೀವು ಕ್ಷತ್ರಿಯ ಸಂಸ್ಕೃತಿಯನ್ನು ಮುಂದುವರಿಸಿದ್ದೀರಿ. ಈ ಶಕ್ತಿ ನಿಮಗೆ ಮಾತ್ರವೇ ಇದೆ. ಇದನ್ನು ಉಳಿಸಬೇಕು, ಮುಂದುವರಿಸಬೇಕು ಎಂದು ಮೋದಿ ಹೇಳಿದ್ದಾರೆ.

ಮಜುಲಿಯನ್ನು ಜೀವವೈವಿಧ್ಯ ಕೇಂದ್ರವಾಗಿ ಬೆಳೆಸುತ್ತೇವೆ. ನಮಾಮಿ ಬ್ರಹ್ಮಪುತ್ರ ಉತ್ಸವದ ಮೂಲಕ ಅಸ್ಸಾಂನ ಸಂಸ್ಕೃತಿ ಬೆಳೆಯುತ್ತಿದೆ. ದೇಶದ ವಿವಿಧ ನಗರಗಳೊಂದಿಗೆ ಸಂಪರ್ಕಕ್ಕಾಗಿ ನಾವು ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಅಸ್ಸಾಂನ ಪ್ರವಾಸೋದ್ಯಮ ಬೆಳೆಯುತ್ತಿದೆ. ಕ್ರೂಸ್​ (ಐಷಾರಾಮಿ ಹಡಗು) ಟೂರಿಸಂ ಇಲ್ಲಿ ಬೆಳೆಯುತ್ತದೆ. ಸಾಕಷ್ಟು ಹಣ ಬರುತ್ತದೆ. ಸ್ಥಳೀಯ ಆರ್ಥಿಕತೆ ವಿಕಾಸವಾಗುತ್ತದೆ. ಪ್ರವಾಸೋದ್ಯಮ ಬೆಳವಣಿಗೆಯಾದರೆ ಎಲ್ಲ ವರ್ಗಗಳಿಗೂ ಅನುಕೂಲವಾಗುತ್ತೆ. ನಿಮಗೆಲ್ಲರಿಗೂ ವಿಕಾಸದ ಹೊಸ ಕಾಮಗಾರಿಗಳಿಗಾಗಿ ಅಭಿನಂದನೆಗಳನ್ನು ಹೇಳುತ್ತೇನೆ. ಇದು ಭಾರತ ಸರ್ಕಾರದ ‘ಈಶಾನ್ಯದತ್ತ ನೋಡಿ’ (Look East Policy) ನೀತಿಯ ಭಾಗವಾಗಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ ಎಂದಿದ್ದಾರೆ ಮೋದಿ.

ಮಹಾಬಾಹು ಬ್ರಹ್ಮಪುತ್ರ ಯೋಜನೆ

ಮಹಾಬಾಹು ಬ್ರಹ್ಮಪುತ್ರ ಯೋಜನೆಯು ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಿಸುವ ಮಹತ್ತರ ಆಶಯ ಹೊಂದಿದೆ. ನ್ಯಾಮತಿ-ಮಜುಲಿ ದ್ವೀಪಗಳು, ಉತ್ತರ ಗುವಾಹತಿ-ದಕ್ಷಿಣ ಗುವಾಹತಿ ಮತ್ತು ಧುಬ್ರಿ-ಹಟ್​ಸಿಂಗಿಮಾರಿ ನಡುವೆ ವಾಹನಗಳನ್ನು ಹೊತ್ತ ದೊಡ್ಡ ದೋಣಿಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ.

2 ಸೇತುವೆಗಳನ್ನೂ ನಿರ್ಮಿಸುವ ಭೂಮಿಪೂಜೆಯನ್ನೂ ಪ್ರಧಾನಿ ನೆರವೇರಿಸಿದರು. ಈ ಕಾಮಗಾರಿಗಳು ಪೂರ್ಣಗೊಂಡ ನಂತರ ಬ್ರಹ್ಮಪುತ್ರ ಮತ್ತು ಬಾರಕ್ ನದಿಗಳ ಆಸುಪಾಸಿನಲ್ಲಿ ಪ್ರವಾಸೋದ್ಯಮ ಬೆಳೆಯುತ್ತದೆ ಎಂದು ಕೇಂದ್ರ ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Atmanirbhar Bharat: ಬಾಹ್ಯಾಕಾಶಕ್ಕೆ ತಲುಪಲಿದೆ ಭಗವದ್ಗೀತೆ! ಜೊತೆಗಿರಲಿದೆ ನರೇಂದ್ರ ಮೋದಿ ಮತ್ತು 25 ಸಾವಿರ ಜನರ ಹೆಸರು

Published On - 2:05 pm, Thu, 18 February 21

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us