ಲತಾ ದೀದಿ ಅಗಲಿಕೆ ದುಃಖ ಶಬ್ದಗಳಲ್ಲಿ ವಿವರಿಸಲಾಗದ್ದು; ಸರಣಿ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

ಲತಾ ದೀದಿಯವರ ಹಾಡುಗಳು ವಿವಿಧ ಭಾವನೆಗಳನ್ನು ಹುಟ್ಟು ಹಾಕಿದವರು. ಅವರ ಧ್ವನಿಯಲ್ಲಿ ಅಂಥಾ ಶಕ್ತಿಯಿತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಲತಾ ದೀದಿ ಅಗಲಿಕೆ ದುಃಖ ಶಬ್ದಗಳಲ್ಲಿ ವಿವರಿಸಲಾಗದ್ದು; ಸರಣಿ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಿ ಶೇರ್ ಮಾಡಿಕೊಂಡಿರುವ ಫೋಟೊ
TV9kannada Web Team

| Edited By: Lakshmi Hegde

Feb 06, 2022 | 10:33 AM

ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್​ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ತಾವು ಲತಾ ಮಂಗೇಶ್ಕರ್ (Lata Mangeshkar)​ ಅವರೊಂದಿಗೆ ಇದ್ದ ಕ್ಷಣಗಳ ಎರಡು ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಲತಾ ಮಂಗೇಶ್ಕರ್ ಕಳೆದ ಹಲವು ದಿನಗಳಿಂದ ಕೊವಿಡ್​ 19 ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದರು. 92ವರ್ಷದ ಅವರಿಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

ಮೊದಲ ಟ್ವೀಟ್​​ನಲ್ಲಿ ತಾವು ಲತಾ ಮಂಗೇಶ್ವರ್​ರಿಗೆ ಸನ್ಮಾನಿಸಿದ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಪ್ರಧಾನಮಂತ್ರಿ, ದಯೆ ಮತ್ತು ಕಾಳಜಿಯ ಪ್ರತಿರೂಪದಂತಿದ್ದ ಲತಾ ದೀದಿಯನ್ನು ಕಳೆದುಕೊಂಡ ದುಃಖವನ್ನು ನನಗೆ ಶಬ್ದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆಯಿಂದ ಉಂಟಾದ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ. ಅವರ ಮಧುರ ಧ್ವನಿಗೆ ಜನರನ್ನು ಮಂತ್ರಮುಗ್ಧರನ್ನಾಗಿಸುವ ಅಪ್ರತಿಮ ಶಕ್ತಿಯಿತ್ತು. ಲತಾ ಮಂಗೇಶ್ಕರ್ ಅವರು ಭಾರತೀಯ ಸಂಸ್ಕೃತಿಯ ಬಲಾಢ್ಯ ಪ್ರತಿನಿಧಿಯಾಗಿದ್ದರು. ಮುಂದಿನ ಪೀಳಿಗೆಯ ನೆನಪಲ್ಲಿ ಸದಾ ಇರುತ್ತಾರೆ ಎಂದು ಹೇಳಿದ್ದಾರೆ.

ಹಾಗೇ ಇನ್ನೊಂದು ಟ್ವೀಟ್​​ ಮಾಡಿರುವ ಪ್ರಧಾನಿ ಮೋದಿ, ಲತಾ ದೀದಿಯವರ ಹಾಡುಗಳು ವಿವಿಧ ಭಾವನೆಗಳನ್ನು ಹುಟ್ಟು ಹಾಕಿದವರು. ಅವರ ಧ್ವನಿಯಲ್ಲಿ ಅಂಥಾ ಶಕ್ತಿಯಿತ್ತು. ಭಾರತೀಯ ಚಿತ್ರರಂಗದಲ್ಲಿ ದಶಕಗಳಿಂದ ಆದ ಪರಿವರ್ತನೆಯನ್ನು ಲತಾ ಮಂಗೇಶ್ಕರ್​ ತುಂಬ ಹತ್ತಿರದಿಂದ ನೋಡಿದವರು. ಸಿನಿಮಾ ಕ್ಷೇತ್ರದಿಂದ ಆಚೆ, ಭಾರತದ ಅಭಿವೃದ್ಧಿಯೆಡೆಗೆ ತುಡಿತವನ್ನು ಹೊಂದಿದ್ದರು. ಒಂದು ಬಲಿಷ್ಠ, ಅಭಿವೃದ್ಧಿ ಹೊಂದಿದ ಭಾರತವನ್ನು ನೋಡುವುದು ಅವರ ಅತಿದೊಡ್ಡ ಬಯಕೆಯಾಗಿತ್ತು ಎಂದು ಹೇಳಿದ್ದಾರೆ.  ಲತಾ ದೀದಿಯವರಿಂದ ನಾನು ಅಪಾರ ಪ್ರೀತಿ ಪಡೆದಿದ್ದೇನೆ. ಅವರ ಪ್ರೀತಿಪಾತ್ರರಲ್ಲಿ ನಾನೂ ಒಬ್ಬನಾಗಿದ್ದು ಬಹುದೊಡ್ಡ ಗೌರವ ಎಂದು ಭಾವಿಸುತ್ತೇನೆ. ನಾನು ಅವರೊಂದಿಗೆ ಕಳೆದ ಕ್ಷಣಗಳು, ಮಾತುಕತೆಗಳನ್ನೆಂದಿಗೂ ಮರೆಯಲು ಸಾಧ್ಯವಿಲ್ಲ. ಲತಾ ದೀದಿ ನಿಧನಕ್ಕೆ ನನ್ನ ಸಂತಾಪಗಳು.  ಅವರ ಕುಟುಂದೊಟ್ಟಿಗೆ ಮಾತನಾಡಿ ಸಾಂತ್ವನ ಹೇಳಿದ್ದೇನೆ ಎಂದೂ ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: 36 ಭಾಷೆಗಳಲ್ಲಿ ಗಾಯನದ ಮೋಡಿ ಮಾಡಿದ್ದ ‘ಬಾಲಿವುಡ್ ನೈಟಿಂಗೇಲ್’; ಅನನ್ಯ ಸಾಧಕಿ ಲತಾ ಮಂಗೇಶ್ಕರ್ ಜೀವನಯಾನದ ಮೆಲುಕು ಇಲ್ಲಿದೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada