ರವಿದಾಸ್ ಜಯಂತಿ: ಬಾಂಬ್ ಬೆದರಿಕೆ ನಡುವೆ ಇಂದು ಪ್ರಧಾನಿ ಮೋದಿ ಪಂಜಾಬ್ ಭೇಟಿ; ಅದಂಪುರ್ ಏರ್ಪೋರ್ಟ್ಗೆ ಗುರು ರವಿದಾಸ್ ಹೆಸರು
Sant Ravidas Jayanti, PM Modi to visit Punjab: ಸಂತ ರವಿದಾಸ್ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ಗೆ ಭಾನುವಾರ ಭೇಟಿ ನೀಡುತ್ತಿದ್ದಾರೆ. ಜಲಂಧರ್ನ ದೇರಾ ಸಖಚಂದ್ ಬಲ್ಲನ್ಗೆ ತೆರಳಿ ಸಂತ ರವಿದಾಸ್ ಮತ್ತು ಸಂತ ಸರ್ವಣ ದಾಸ್ ಅವರಿಗೆ ಪುಷ್ಪಾರ್ಚಣೆ ಮಾಡಲಿದ್ದಾರೆ. ಇದೇ ವೇಳೆ ಅದಂಪುರ್ ಏರ್ಪೋರ್ಟ್ಗೆ ರವಿದಾಸ್ ಹೆಸರನ್ನು ಇಡಲಾಗುತ್ತಿದೆ. ಇನ್ನು, ಜಲಂಧರ್ನ ಹಲ್ವಾರ ಏರ್ಪೋರ್ಟ್ನಲ್ಲಿ ಹೊಸ ಟರ್ಮಿನಲ್ ಉದ್ಘಾಟನೆಯನ್ನೂ ಪ್ರಧಾನಿಗಳು ಮಾಡಲಿದ್ದಾರೆ.

ನವದೆಹಲಿ, ಜನವರಿ 31: ಸಂತ ಗುರು ರವಿದಾಸ್ ಅವರ 649ನೇ ಜಯಂತಿ ಆಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಾಳೆ ಭಾನುವಾರ (ಫೆ. 1) ಪಂಜಾಬ್ಗೆ ಭೇಟಿ ನೀಡಲಿದ್ದಾರೆ. ಭಾನುವಾರ ಮಧ್ಯಾಹ್ನ 3:45ಕ್ಕೆ ಪಂಜಾಬ್ಗೆ ತೆರಳಲಿರುವ ಪಿಎಂ, ಜಲಂಧರ್ ಜಿಲ್ಲೆಯಲ್ಲಿನ ದೇರಾ ಸಖಚಂದ್ ಬಲ್ಲನ್ಗೆ ಭೇಟಿ ನೀಡಲಿ್ದಾರೆ. ಅಲ್ಲಿ ಸಂತ ಗುರು ರವಿದಾಸ್ ಗೌರವಾರ್ಥ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ನರೇಂದ್ರ ಮೋದಿ ಅವರು ದೇರಾ ಸಖಚಂದ್ ಬಲ್ಲನ್ ಮಂದಿರಕ್ಕೆ ತೆರಳಿ ಸಂತ ಗುರು ರವಿದಾಸ್ ಅವರ ಮೂರ್ತಿಗೆ ಪುಷ್ಪಾರ್ಚಣೆ ಮಾಡಲಿದ್ದಾರೆ. ದೇರಾ ಸಖಚಂದ್ ಬಲ್ಲನ್ನ ಎರಡನೇ ಗದ್ದಿ ನಶೀನ್ (ಪೀಠಾಧಿಪತಿ) ಆದ ಸಂತ ಸರ್ವಣ ದಾಸ್ ಅವರಿಗೂ ಪುಷ್ಪಾರ್ಚಣೆ ಮಾಡಲಿದ್ದಾರೆ. ಪರಿಕ್ರಮ ಆಚರಣೆ ಹಾಗೂ ಆರ್ದಾಸ್ ಕಾರ್ಯಕ್ರಮದಲ್ಲೂ ಮೋದಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ; ಮಹಾರಾಷ್ಟ್ರಕ್ಕೆ ಮೊತ್ತಮೊದಲ ಮಹಿಳಾ ಡಿಸಿಎಂ ಈಕೆ
ಅದಂಪುರ್ ಏರ್ಪೋರ್ಟ್ಗೆ ರವಿದಾಸ್ ಹೆಸರು
ಪ್ರಧಾನಿಗಳು ಇದೇ ವೇಳೆ ಅದಂಪುರ್ನಲ್ಲಿರುವ ವಿಮಾನ ನಿಲ್ದಾಣಕ್ಕೆ ಶ್ರೀ ಗುರು ರವಿದಾಸ್ಜಿ ಏರ್ಪೋರ್ಟ್ ಎಂದು ಹೊಸ ಹೆಸರು ಇಡಲಿದ್ದಾರೆ.
ಹಾಗೆಯೇ, ಪಂಜಾಬ್ನ ಲೂಧಿಯಾನದಲ್ಲಿರುವ ಹಲ್ವಾರ ಏರ್ಪೋರ್ಟ್ನಲ್ಲಿ ಹೊಸದಾಗಿ ನಿರ್ಮಿಸಲಾದ ಟರ್ಮಿನಲ್ ಕಟ್ಟಡದ ಉದ್ಘಾಟೆಯನ್ನೂ ಪ್ರಧಾನಿಗಳು ಮಾಡಲಿದ್ದಾರೆ. ಇದೇ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಸ್ಟೇಷನ್ ಇರುವುದರಿಂದ ಹಲ್ವಾರ ಏರ್ಪೋರ್ಟ್ ಆಯಕಟ್ಟಿನ ಜಾಗವೆಂದು ಪರಿಗಣಿತವಾಗಿದೆ.
ವಾಯುಪಡೆಯ ಉಪಸ್ಥಿತಿ ಒಂದೇ ಕಾರಣಕ್ಕೆ ಹಲ್ವಾರ ಏರ್ಪೋರ್ಟ್ ಪ್ರಾಮುಖ್ಯತೆ ಪಡೆದಿಲ್ಲ. ಲೂಧಿಯಾನ ಹಾಗೂ ಅದರ ಸುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಈ ಏರ್ಪೋರ್ಟ್ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಹಲ್ವಾರ ಏರ್ಪೋರ್ಟ್ನಲ್ಲಿ ರನ್ವೇ ದೊಡ್ಡದು ಮಾಡಿರುವುದು ಸೇರಿದಂತೆ ಇನ್ಫ್ರಾಸ್ಟ್ರಕ್ಚರ್ ಅನ್ನು ಉತ್ತಮಗೊಳಿಸಲಾಗಿದೆ.
ಇದನ್ನೂ ಓದಿ: “ಮಹಾ ರಾಜಕೀಯ”ದಲ್ಲಿ ಮಹತ್ವ ಬೆಳವಣಿಗೆ: ಫೆ.8ಕ್ಕೆ ಅಜಿತ್ ಪವಾರ್ ಕೊನೆಯ ಆಸೆ ಈಡೇರಲಿದೆ?
ಜಲಂಧರ್ನಲ್ಲಿ ಬಾಂಬ್ ಬೆದರಿಕೆ
ರವಿದಾಸ್ ಜಯಂತಿ ಸಲುವಾಗಿ ಪ್ರಧಾನಿ ಮೋದಿ ಭೇಟಿ ನೀಡಲಿರುವ ಸುದ್ದಿ ಜೊತೆ ಜೊತೆಗೆ ಬಾಂಬ್ ಬೆದರಿಕೆಗಳೂ ಬಂದಿವೆ. ಜಲಂಧರ್ನ ಕೇಂಬ್ರಿಡ್ಜ್ ಸ್ಕೂಲ್ಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ. ಬಿಲ್ಲಿ ಹಾಲ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಈ ಇಮೇಲ್ ಕಳುಹಿಸಿದ್ದು, ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಮೂರ್ನಾಲ್ಕು ಶಾಲೆಗಳಲ್ಲಿ ಬಾಂಬ್ ಸ್ಫೋಟ ಮಾಡಲಾಗುವುದು ಎಂದ ಹೆದರಿಸಿದ್ದಾನೆ. ಆದರೆ, ಪೊಲೀಸರು ಕೇಂಬ್ರಿಡ್ಜ್ ಶಾಲೆಗೆ ತೆರಳಿ ಎಲ್ಲೆಡೆ ಶೋಧ ನಡೆಸಿದ್ದಾರೆ. ಯಾವುದೇ ಬಾಂಬ್ ಪತ್ತೆಯಾಗಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
