AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಸೇನೆಯಲ್ಲಿ ತೃತೀಯಲಿಂಗಿಗಳ ನೇಮಕಾತಿ ಸಾಧ್ಯತೆ? ಅಧ್ಯಯನ ತಂಡ ರಚಿಸಿದ ಸೇನೆ

ಭಾರತೀಯ ಸೇನೆಗಳಲ್ಲಿ ತೃತೀಯಲಿಂಗಿಗಳು ಸೇವೆ ಮಾಡಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದೆ. ಭಾರತವು ಕೂಡ ಇತರ ದೇಶಗಳಂತೆ ತೃತೀಯಲಿಂಗಿಗಳಿಗೆ ಸೇನೆಯಲ್ಲಿ ಅವಕಾಶವನ್ನು ನೀಡಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಒಂದು ಅಧ್ಯಯನವನ್ನು ಮಾಡಿ, ವರದಿ ನೀಡಲು ತಂಡವೊಂದನ್ನು ರಚನೆ ಮಾಡಲಾಗಿದೆ. ಈಗಾಗಲೇ ಅಮೆರಿಕ, ಬ್ರಿಟನ್ ಮತ್ತು ಇಸ್ರೇಲ್ ಸೇರಿದಂತೆ ವಿಶ್ವದ 19 ದೇಶಗಳ ಸೇನೆಗಳಲ್ಲಿ ಟ್ರಾನ್ಸ್‌ಜೆಂಡರ್‌ಗಳನ್ನು ನೇಮಿಸಲಾಗಿದೆ. ಇದೀಗ ಭಾರತದಲ್ಲೂ ಈ ಕ್ರಮವನ್ನು ಅನುಸರಿಸಲು ಆಸಕ್ತಿ ತೋರಿಸಿದೆ.

ಭಾರತೀಯ ಸೇನೆಯಲ್ಲಿ ತೃತೀಯಲಿಂಗಿಗಳ ನೇಮಕಾತಿ ಸಾಧ್ಯತೆ? ಅಧ್ಯಯನ ತಂಡ ರಚಿಸಿದ ಸೇನೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 16, 2023 | 6:27 PM

Share

ತೃತೀಯಲಿಂಗಿಗಳು ನಮ್ಮ ದೇಶದ ಅನೇಕ ಸರ್ಕಾರಿ, ಸರ್ಕಾರೇತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಸೇನೆಯಲ್ಲಿ ತೃತೀಯಲಿಂಗಿಗಳು ಸೇವೆ ಸಲ್ಲಿಸುತ್ತಿಲ್ಲ. ಭಾರತೀಯ ಸೇನೆಗಳಲ್ಲಿ ತೃತೀಯಲಿಂಗಿಗಳು ಸೇವೆ ಮಾಡಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದೆ. ಭಾರತವು ಕೂಡ ಇತರ ದೇಶಗಳಂತೆ ತೃತೀಯಲಿಂಗಿಗಳಿಗೆ ಸೇನೆಯಲ್ಲಿ ಅವಕಾಶವನ್ನು ನೀಡಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಒಂದು ಅಧ್ಯಯನವನ್ನು ಮಾಡಿ, ವರದಿ ನೀಡಲು ತಂಡವೊಂದನ್ನು ರಚನೆ ಮಾಡಲಾಗಿದೆ. ಈಗಾಗಲೇ ಅಮೆರಿಕ, ಬ್ರಿಟನ್ ಮತ್ತು ಇಸ್ರೇಲ್ ಸೇರಿದಂತೆ ವಿಶ್ವದ 19 ದೇಶಗಳ ಸೇನೆಗಳಲ್ಲಿ ಟ್ರಾನ್ಸ್‌ಜೆಂಡರ್‌ಗಳನ್ನು ನೇಮಿಸಲಾಗಿದೆ. ಇದೀಗ ಭಾರತದಲ್ಲೂ ಈ ಕ್ರಮವನ್ನು ಅನುಸರಿಸಲು ಆಸಕ್ತಿ ತೋರಿಸಿದೆ. ಇನ್ನು ಟ್ರಾನ್ಸ್‌ಜೆಂಡರ್​​ಗಳನ್ನು ಸೇನೆಯಲ್ಲಿ ಸೇರಿಸಿಕೊಂಡಿದ ಮೊದಲ ದೇಶ ನೆದರ್ಲ್ಯಾಂಡ್ಸ್. 1974ರಲ್ಲಿ ವಿಶ್ವದಲ್ಲೇ ತೃತೀಯಲಿಂಗಿಗಳನ್ನು ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ದೇಶ ಎಂಬ ಪ್ರಶಂಸೆಗೆ ಪಾತ್ರವಾಗಿತ್ತು.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಭಾರತೀಯ ಸಶಸ್ತ್ರ ಪಡೆಗಳು ಮೊದಲು ತೃತೀಯಲಿಂಗಿಗಳನ್ನು ಸೇನೆಯಲ್ಲಿ ನೇಮಕ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ತೃತೀಯಲಿಂಗಿಗಳು ಸೇನೆಯಲ್ಲಿ ಹೇಗೆ ಕೆಲಸ ಮಾಡುತ್ತಾರೆ. ಸೇನಾ ಯೋಜನೆಗಳ ಚಟುವಟಿಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಒಂದು ಆಧ್ಯಯನ ತಂಡವನ್ನು ರಚನೆ ಮಾಡಲಾಗಿದೆ. ಈ ಅಧ್ಯಯನ ಒಂದು ವೇಳೆ ಯಶಸ್ವಿಯಾದರೆ, ದೇಶದಲ್ಲಿ ಸಮಾನತೆ ಸಾಧಿಸುವಲ್ಲಿ ದೊಡ್ಡ ಹೆಜ್ಜೆ ಇಟ್ಟಂತೆ. ಈ ನೇಮಕಾತಿಯಿಂದ ಆಗುವ ಸಮಸ್ಯೆಗಳು, ಸೇನೆಯ ಮುಂದೆ ಬರುವ ಸವಾಲುಗಳು ಹಾಗೂ ಇತರ ದೇಶಗಳಲ್ಲಿ ಎಷ್ಟು ತೃತೀಯಲಿಂಗಿಗಳನ್ನು ನೇಮಕಾ ಮಾಡಿಕೊಳ್ಳಲಾಗುತ್ತಿದೆ. ಅವರ ಕಾರ್ಯವೈಖರಿ ಹೇಗಿದೆ ಎಂಬುದನ್ನು ಕೂಡ ತಿಳಿದುಕೊಳ್ಳಲಾವುದು.

ಸೇನೆಯಲ್ಲಿ ತೃತೀಯಲಿಂಗಿಗಳು ಈ ಕ್ರಮ ಅನುಸರಿಸಲೇಬೇಕು

ಇಲ್ಲಿಯವರೆಗೆ ಭಾರತ ಸೇನೆಯ ತನ್ನ ಯಾವ ವಿಭಾಗಕ್ಕೂ ತೃತೀಯಲಿಂಗಿಗಳು ಆಯ್ಕೆ ಮಾಡಿಲ್ಲ. ಆದರೆ ತೃತೀಯಲಿಂಗಿಗಳ ಆಯ್ಕೆ ಬಗ್ಗೆ ಅನೇಕ ಸಲಹೆಗಳು ಸೇನೆಗೆ ಬಂದಿದೆ. ಒಂದು ವೇಳೆ ಸೇನೆಗೆ ಇವರ ಆಯ್ಕೆಯಾದರೆ, ಸೇನೆಯ ಕೆಲವೊಂದು ಕ್ರಮಗಳನ್ನು ಅನುಸರಿಸಲೇಬೇಕು. ಈ ಕ್ರಮಗಳ ಬಗ್ಗೆ ವರದಿಗಳು ತಿಳಿಸಿರುವಂತೆ ತೃತೀಯಲಿಂಗಿಗಳಿಗೆ ಇತರ ಸೇನಾ ಸಿಬ್ಬಂದಿಗಳಿಗೆ ನೀಡಿದ ಸೌಲಭ್ಯಗಳನ್ನೇ ನೀಡಲಾಗುವುದು. ತರಬೇತಿಯಲ್ಲಿ ಯಾವುದೇ ರಿಯಾಯಿತಿ ಇಲ್ಲ. ಹಾಗೂ ಸೇನೆ ಹಾಕುವ ವಿವಿಧ ರೀತಿಯ ಪೋಸ್ಟಿಂಗ್‌ಗಳಲ್ಲಿ ಕೆಲಸ ಮಾಡಲೇಬೇಕಾಗುತ್ತದೆ. ಜತೆಗೆ ಸೇನೆ ಸೂಚಿಸಿದ ಶಿಸ್ತಿನ ಕ್ರಮಗಳನ್ನು ಕೂಡ ಇವರು ಪಾಲಿಸಬೇಕಾಗುತ್ತದೆ.

ಸೇನೆಯಲ್ಲಿ ತೃತೀಯಲಿಂಗಿಗಳ ಆಯ್ಕೆಯ ಚರ್ಚೆ ಎಲ್ಲಿಂದ ಶುರು?

ಭಾರತೀಯ ನೌಕಾಪಡೆಯು ಈ ಹಿಂದೆ ಮನೀಶ್ ಕುಮಾರ್ ಗಿರಿ ಎಂಬ ನಾವಿಕ ಸಾಬಿ ಗಿರಿಯಾಗಿ ಲಿಂಗ ಬದಲಾಯಿಸಿಕೊಂಡ ನಂತರ ಸೇನೆ ಅವರನ್ನು 2017ರಲ್ಲಿ ವಜಾಗೊಳಿಸಿತ್ತು. ಮನೀಶ್ ಕುಮಾರ್ ಗಿರಿ ಅವರು ರಜೆಯಲ್ಲಿ ಹೋಗಿದ್ದಾಗ ಖಾಸಗಿ ಆಸ್ಪತ್ರೆಯೊಂದರಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವಿಚಾರವನ್ನು ಅವರು ಸೇನೆಗೆ ತಿಳಿಸಿಲ್ಲ. ಹಾಗೂ ಈ ಚಿಕಿತ್ಸೆಗಾಗಿ 20 ದಿನಗಳ ಕಾಲ ಸೇವೆಗೆ ಗೈರಾಗಿದ್ದರು. ಜತೆಗೆ ಇದರಿಂದ ಮಾನಸಿಕ ಖಿನ್ನತೆ ಒಳಲಾಗಿದ್ದರು ಎಂಬ ಕಾರಣಕ್ಕೆ ಅವರನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು. ಇದೀಗ ಈ ಘಟನೆಯ ನಂತರ ಸೇನೆ ತೃತೀಯಲಿಂಗಿಗಳನ್ನು ಸೇನೆಯಲ್ಲಿ ನೇಮಕಾ ಮಾಡಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ತೃತೀಯಲಿಂಗಿಗಳಿಗೆ ಉಚಿತ ಆರೋಗ್ಯ ಶಿಬಿರ

ಫಸ್ಟ್ ಪೋಸ್ಟ್‌ನ ವರದಿಯ ಪ್ರಕಾರ, 2020ರಲ್ಲಿ, ಬಿಎಸ್‌ಎಫ್, ಸಿಆರ್‌ಪಿಎಫ್ ಮತ್ತು ಎಸ್‌ಎಸ್‌ಬಿ ಸಹಾಯಕ ಕಮಾಂಡೆಂಟ್‌ನ ಆಫೀಸರ್ ಕೇಡರ್ ಹುದ್ದೆಗೆ ಟ್ರಾನ್ಸ್‌ಜೆಂಡರ್‌ಗಳನ್ನು ನೇಮಿಸಿಕೊಳ್ಳಲು ಬಗ್ಗೆ ಈ ಹಿಂದೆ ಕೇಂದ್ರ ಸರ್ಕಾರವು ಹೇಳಿತ್ತು.

ಇದರ ಜತೆಗೆ 2015ರಲ್ಲಿ ತಮಿಳುನಾಡು ದೇಶದ ಮೊದಲ ತೃತೀಯಲಿಂಗಿಗಳ ಪೊಲೀಸ್ ಅಧಿಕಾರಿಯನ್ನು ನೇಮಿಸಿತು. ಅದೇ ಸಮಯದಲ್ಲಿ, ಛತ್ತೀಸ್‌ಗಢ ಕೂಡ ಈ ಕ್ರಮವನ್ನು ಅನುಸರಿಸಿತ್ತು. ಇದೀಗ ಸೇನೆಯಲ್ಲೂ ಅವರನ್ನು ನೇಮಕಾ ಮಾಡುವ ಯೋಚನೆಯನ್ನು ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ
ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ