Video: ಬಾಲಕಿಯ ಫೋಟೋಗೆ ಪ್ರಧಾನಿ ಆಟೋಗ್ರಾಫ್, ಈ ಹುಡುಗಿಗೆ ಮೋದಿ ಫಿದಾ ಆಗಿದ್ದೇಕೆ? ಇದರ ಹಿಂದಿದೆ ವಿಶೇಷ ಕಥೆ
ಪ್ರಧಾನಿ ಮೋದಿ ಅವರು ತೆಲಂಗಾಣ ಚುನಾವಣಾ ರ್ಯಾಲಿ ನಡೆಸುತ್ತಿದ್ದ ವೇದಿಕೆಯಲ್ಲಿ ಒಂದು ವಿಶೇಷ ಘಟನೆಯೊಂದು ನಡೆದಿದೆ. ಮೋದಿ ಅವರು ವೇದಿಯಲ್ಲಿ ಮಹಿಳೆಯೊಬ್ಬರು ನೀಡಿದ ಫೋಟೋಗೆ ಆಟೋಗ್ರಾಫ್ ಹಾಕಿದ್ದಾರೆ, ಮೋದಿ ಅವರು ಆ ಫೋಟೋ ಯಾಕೆ ಆಟೋಗ್ರಾಫ್ ಹಾಕಿದ್ರು? ಅಷ್ಟಕ್ಕೂ ಆ ಫೋಟೋ ಯಾರದ್ದು, ಆ ಫೋಟೋಗೂ ಮೋದಿಗೂ ಏನು? ಸಂಬಂಧ, ಈ ಎಲ್ಲ ಪ್ರಶ್ನೆಗೆ ಈ ಸ್ಟೋರಿಯಲ್ಲಿದೆ ಉತ್ತರ.
ಹೈದರಾಬಾದ್, ಮೇ.11: ಪ್ರಧಾನಿ ನರೇಂದ್ರ ಮೋದಿ (narendra modi) ಅವರು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಅನೇಕ ರಾಜ್ಯಗಳಿಗೆ ಸುತ್ತಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ನಡೆಯುವ ಕೆಲವೊಂದು ಘಟನೆಗಳು ನಮ್ಮನ್ನು ಅಚ್ಚರಿಗೊಳಿಸುತ್ತದೆ. ಒಬ್ಬ ದೇಶದ ಪ್ರಧಾನಿ ಇಷ್ಟೊಂದು ಸಿಂಪಲ್ಆಗಿರಲು ಹೇಗೆ ಸಾಧ್ಯ ಎಂದು. ಆದರೆ ಇದಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದೆ ಇದೆ. ಇದೀಗ ಇಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ದೇಶದಲ್ಲಿ ಮೂರನೇ ಹಂತದ ಚುನಾವಣೆ ಮುಗಿದು, ನಾಲ್ಕನೇ ಹಂತ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ಶುಕ್ರವಾರ (ಮೇ.10)ದಂದು ತೆಲಂಗಾಣದಲ್ಲಿ ಚುನಾವಣಾ ರ್ಯಾಲಿ ನಡೆಸಿದ್ದಾರೆ. ಈ ವೇಳೆ ಮೋದಿ ಅವರನ್ನು ವೇದಿಕೆಯಲ್ಲಿ ಬಿಜೆಪಿ ನಾಯಕಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದಾರೆ. ಜತೆಗೆ ತಾವು ತಂದಿದ್ದ ಫೋಟೋವೊಂದಕ್ಕೆ ಪ್ರಧಾನಿ ಮೋದಿ ಅವರ ಆಟೋಗ್ರಾಫ್ ತೆಗೆದುಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರಿಗೆ ವಿಜಯಲಕ್ಷ್ಮಿ ಅವರು ಫೋಟೋವೊಂದನ್ನು ನೀಡಿ ಅದರಲ್ಲಿ ತಮ್ಮ ಆಟೋಗ್ರಾಫ್ ನೀಡುವಂತೆ ಮನವಿ ಮಾಡಿರುವುದನ್ನು ಕಾಣಬಹುದು. ಅಷ್ಟಕ್ಕೂ ಈ ಫೋಟೋ ಯಾರದ್ದು ಎಂಬುದಕ್ಕೆ ಅವರೇ ಉತ್ತರಿಸಿದ್ದಾರೆ. ಆ ಫೋಟೋ ಅವರ ಮಗಳಾದ ಯಶೋಧರದ್ದು, ವಿಜಯಲಕ್ಷ್ಮಿ ಅವರು ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಪುತ್ರಿ.
ಇದನ್ನೂ ಓದಿ: ವಿಶೇಷ ಚೇತನ ಸಹೋದರಿಯರಿಗೆ ಸ್ಥಳದ ವ್ಯವಸ್ಥೆ ಮಾಡುವರೆಗೆ ಭಾಷಣ ಮಾಡಲ್ಲ, ಹೃದಯ ಗೆದ್ದ ಮೋದಿ
ಈ ಹಿಂದೆ ಬಂಡಾರು ದತ್ತಾತ್ರೇಯ ಅವರು ತಮ್ಮ ಮೊಮ್ಮಗಳು ಯಶೋಧರ ಪ್ರಧಾನಿ ಮೋದಿ ಅವರ ಬಗ್ಗೆ ಹಾಡಿದ ಹಾಡನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಇದನ್ನು ಮೋದಿ ಅವರು ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಮರುಹಂಚಿಕೊಂಡಿದ್ದರು. ಮೋದಿ ಹಂಚಿಕೊಂಡಿರುವ ಫೋಟೋ ತೆಗೆದು ಅದಕ್ಕೆ ಅವರ ಆಟೋಗ್ರಾಫ್ ನೀಡುವಂತೆ ವೇದಿಕೆಯಲ್ಲಿ ಕೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ವಿಜಯಲಕ್ಷ್ಮಿ “ನನಗೆ ತುಂಬಾ ಸಂತೋಷವಾಗಿದೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ಇದನ್ನು ನನ್ನ ಮಗಳು ನೋಡಿದ್ರೆ ಖಂಡಿತ ಖುಷಿಪಡುತ್ತಾಳೆ” ಎಂದು ಹೇಳಿದ್ದಾರೆ. ಈ ಹಿಂದೆ ಇಂತಹ ಅನೇಕ ಘಟನೆಗಳಿಗೆ ಪ್ರಧಾನಿ ಮೋದಿ ಅವರು ಸಾಕ್ಷಿಯಾಗಿದ್ದಾರೆ. ಅಷ್ಟೊಂದು ಭದ್ರತೆಯ ನಡುವೆ ಸಾಮಾನ್ಯರ ಮಧ್ಯೆ ಹೋಗಿ ಅವರ ಜತೆಗೆ ಬೆರೆಯುತ್ತಾರೆ ಎಂದು ಅನೇಕರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Sat, 11 May 24